ಲೋಕದರ್ಶನ ವರದಿ
ಹೊಸಪೇಟೆ 25: ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್(ಡಿ.ವೈ.ಎಫ್.ಐ) ಹೊಸಪೇಟೆ ತಾಲೂಕು ಸಮಿತಿ ತಾಲೂಕಿನಲ್ಲಿರುವ ಖಾಸಗಿ ಮತ್ತು ಅನುದಾನಿತ ಶಾಲೆಗಳು ಈಗಾಗಲೇ ವಿದ್ಯಾಥರ್ಿಗಳನ್ನು ಶಾಲೆಗಳಿಗೆ ದಾಖಲಾತಿ ಮಾಡಿಕೊಳ್ಳುತ್ತಿವೆ. ದಾಖಲಾತಿ ಮಾಡಿಕೊಳ್ಳುವ ಸಮಯದಲ್ಲಿ ಸರ್ಕಾರ ನಿಗದಿ ಮಾಡಿರುವ ಶುಲ್ಕಕ್ಕೆ ಸಂಬಂಧಿಸಿದ ನೀತಿ-ನಿರೂಪಣೆಯ ಪ್ರಕಾರ ಮಾಡಿಕೊಳ್ಳುತ್ತಿಲ್ಲ. ವಿದ್ಯಾಥರ್ಿಗಳ ಪೋಷಕರಿಂದ ಡೊನೇಷನ್ ಎಂದು ಸಾವಿರಾರು ರೂಪಾಯಿಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಇಲ್ಲಿ ಯಾರು ಹೆಚ್ಚು ಹಣವನ್ನು ಕೊಡುತ್ತಾರೆಯೇ ಅವರ ಮಕ್ಕಳಿಗೆ ಶಾಲೆಯಲ್ಲಿ ದಾಖಲಾತಿ ಎಂಬ "ಅರಣ್ಯ ನೀತಿ" ಜಾರಿಯಲ್ಲಿದೆ.
ಡೊನೇಷನ್ ಹಾವಳಿಯನ್ನು ತಡೆಗಟ್ಟಬೇಕೆಂದು ಒತ್ತಾಯಿಸಿ ಡಿ.ವೈ.ಎಫ್.ಐ ಮತ್ತು ಎಸ್.ಎಫ್.ಐ ನಿಂದ ಪ್ರತಿ ವರ್ಷವು ಸಹ ವಂತಿಕೆಯನ್ನು ನಿಯಂತ್ರಿಸಲು ಮನವಿಯನ್ನು ಕೊಡಲಾಗಿತ್ತು. ಆದರೆ ಇಲಾಖೆಯಿಂದ ಯಾವುದೇ ರೀತಿಯಾದ "ಡೊನೇಷನ್ ನಿಯಂತ್ರಿಸುವ ಬಗ್ಗೆ ಕ್ರಮವನ್ನು ಕೈಗೊಂಡಿರುವ ಬಗ್ಗೆಯಾಗಲಿ ಇಲ್ಲವೆ ಅದರ ಬಗ್ಗೆ ಯಾವುದೇ ಸಭೆಯನ್ನಾಗಲಿ ಮಾಡಿರುವ ಬಗ್ಗೆ ಮಾಹಿತಿಯಿಲ್ಲ. ಮತ್ತು ಡೊನೇಷನ್ ಹಾವಳಿ ನಿರಂತರವಾಗಿ ನಡೆದಿದೆ.
ಪ್ಲೇ ಕ್ಲಾಸ್, ಎಲ್.ಕೆ.ಜಿ, ಯು.ಕೆ.ಜಿ ಮತ್ತು ಒಂದನೇ ತರಗತಿಗಳಿಗೆ ಮಕ್ಕಳನ್ನು ಸೇರಿಸಿಕೊಳ್ಳಲು 5,000 ರೂ ಗಳಿಂದ 35,000 ರೂಗಳಿಗೆ ಹಣವನ್ನು ಡೊನೇಷನ್ ಹೆಸರಿನಲ್ಲಿ ಯಾವುದೇ ರಶೀದಿಯನ್ನು ಕೊಡದೆ ಶಾಲೆಗಳು ಸಂಗ್ರಹಿಸುತ್ತಿವೆ. ನಂತರ ಬೋಧನಾ ಶುಲ್ಕವನ್ನು, ಬಸ್ ಗೆ, ಮಕ್ಕಳ ಬಟ್ಟೆ, ಪುಸ್ತಕ, ಇತರೆ ಎಲ್ಲಾ ರೀತಿಯಾಗಿ ಹಣವನ್ನು ತೆಗೆದುಕೊಳ್ಳುತ್ತಿದ್ದಾರೆ. ಪ್ರಾಥಮಿಕ ಶಾಲೆಗಳಿಗೆಯೇ ಇಷ್ಟು ಹಣವನ್ನು ಎಲ್ಲಾ ನಿಯಮಗಳನ್ನು ಮೀರಿ ಹಗಲು ದರೋಡೆಗೆ ಇಳಿದಿರುವ ಖಾಸಗಿ-ಅನುದಾನಿತ ಶಾಲೆಗಳನ್ನು ಇಲಾಖೆ ನಿಯಂತ್ರಿಸದೇ ಇರುವುದನ್ನು ನೋಡಿದರೆ ಇಲಾಖೆಯವರು ಇದರಲ್ಲಿ ಪಾಲುದಾರರೇ ಎಂಬ ಸಂಶಯ ಬರುತ್ತದೆ.
ಇಲಾಖೆಯಿಂದ ಸಾರ್ವಜನಿಕರಿಗೆ ಸಕರ್ಾರದ ನೀತಿ ನಿರೂಪಣೆಗಳಿಗೆ ಸಂಬಂಧಿಸಿದಂತೆ ಜಾಗೃತಿಯನ್ನು ಮಾಡುವ ಕೆಲಸವನ್ನು ಮಾಡಬೇಕಾಗಿತ್ತು ಆದರೆ ಅದನ್ನು ಮಾಡಿಲ್ಲ. ಡೊನೇಷನ್ ಹಾವಳಿಯನ್ನು ನಿಯಂತ್ರಿಸಲು ಒತ್ತಾಯಿಸಿ ಮನವಿ ಪತ್ರದ ಮೂಲಕ ಒತ್ತಾಯಿಸಿದರು