ಲೋಕದರ್ಶನ ವರದಿ
ಹೊಸಪೇಟೆ 09: ಹಂಪಿ ಎಕ್ಸ್ ಪ್ರೆಸ್ ರೈಲು ವಿಳಂಭ ಹಾಗೂ ಕೇಂದ್ರಗಳ ಬದಲಾವಣೆ ಕಾರಣದಿಂದಾಗಿ ರಾಷ್ಟ್ರೀಯ ಅಹರ್ಾತಾ ಪರೀಕ್ಷೆ(ನೀಟ್)ಯಿಂದ ವಂಚಿತರಾದವಿದ್ಯಾರ್ಥಿಗಳಿಗೆ ಸರ್ಕಾರ ಮರು ಪರೀಕ್ಷೆ ಬರೆಯಲು ಅನುಕೂಲ ಮಾಡಿಕೊಡಬೇಕು ಎಂದು ಸ್ಥಳೀಯ ಕ್ಯಾಂಪಸ್ ಪ್ರಂಟ್ ಇಂಡಿಯಾ ಜಿಲ್ಲಾ ಸಮಿತಿಯ ಕಾರ್ಯಕರ್ತರು, ತಹಶೀಲ್ದಾರ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ಹಂಪಿ ಎಕ್ಸ್ ಪ್ರೆಸ್ ರೈಲು ವಿಳಂಭ ಹಾಗೂ ಮೈಸೂರು,ಬೆಂಗಳೂರು, ಮತ್ತು ಕಲ್ಬುಗರ್ಿ ಜಿಲ್ಲೆಯ ಹಲವು ಪರೀಕ್ಷಾ ಕೇಂದ್ರಗಳ ಏಕಾಏಕಿ ಬದಲಾವಣೆ ಪರಿಣಾಮವಾಗಿ ಐದು ನೂರಕ್ಕೂ ಹೆಚ್ಚು ವಿದ್ಯಾಥರ್ಿಗಳ ಸಕಾಲದಲ್ಲಿ ಪರೀಕ್ಷಾ ಕೇಂದ್ರಗಳಿಗೆ ಹಾಜರಾಗಲು ಸಾಧ್ಯವಾಗಿಲ್ಲ. ಇದರಿಂದಾಗಿವಿದ್ಯಾರ್ಥಿಗಳು ತೀವ್ರ ಆತಂಕದಲ್ಲಿದ್ದು,ಸರ್ಕಾರ ಇವರಿಗೆ ಮರು ಪರೀಕ್ಷೆ ಬರೆಯಲು ಅನುವು ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ರಾಜ್ಯ ಸಮಿತಿ ಸದಸ್ಯರಾದ ಅಲ್ತಾಪ್, ಜಿಲ್ಲಾಧ್ಯಕ್ಷ ಮೊಹಮ್ಮದ್ ಗೌಸ್, ಸಲೀಮ್ ಮಲೀಕ್ ಪಯಜ್, ಮುಜೀಬ್, ವಾಜೀದ್, ಶಾಹೀದ್ ಸೇರಿದಂತೆ ವಿದ್ಯಾಥರ್ಿಗಳು ಇದ್ದರು.