ಲೋಕದರ್ಶನ ವರದಿ
ಹೊಸಪೇಟೆ 16: ಇಂದು ಡ್ಯಾಮ್ ರಸ್ತೆಯಲ್ಲಿರುವ ಮಾರ್ಕಂಡೇಶ್ವರ ಕಲ್ಯಾಣ ಮಂಟಪದಲ್ಲಿ ಸಪ್ತಗಿರಿ ಆಸ್ಪತ್ರೆ , ಬೆಂಗಳೂರು ಹಾಗು ಸರ್ವೇ ಜನ ಸುಖಿನೋ ಭವಂತು ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಉಚಿತ ಹೃದಯ ರೋಗ, ನರ ರೋಗ, ಮೂತ್ರಪಿಂಡದ ಕಲ್ಲು, ಸಾಮಾನ್ಯ ರೋಗ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಆಗಮಿಸಿದ ಹೊಸಪೇಟೆ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಶ್ರೀ ಹೆಚ್.ಎನ್ ಮೊಹಮ್ಮದ್ ಇಮಾಮ್ ನಿಯಾಜಿ ಮಾತನಾಡಿ ಬಡ ಜನರ ಆರೋಗ್ಯದ ದೃಷ್ಟಿಯಲ್ಲಿಟ್ಟುಕೊಂಡು ಹಾಗು ಸರ್ವರಿಗೂ ಆರೋಗ್ಯದ ಭಾಗ್ಯವನ್ನು ನೀಡಬೇಕೆಂದು ಸವರ್ೆ ಜನ ಸುಖಿನೋ ಭವಂತು ಟ್ರಸ್ಟ್ ಹಾಗು ಸಪ್ತಗಿರಿ ಆಸ್ಪತ್ರೆ ಬೆಂಗಳೂರು ಇವರ ಸೇವೆಗೆ ಅನಂತ ಧನ್ಯವಾದಗಳಗಳನ್ನು ತಿಳಿಸಿದರು. ಹಾಗು ಇಂದಿನ ದಿನಗಳಲ್ಲಿ ಅಪಾಯಕಾರಿ ರಾಸಾಯನಿಕ ಔಷಧಿಗಳನ್ನು ಬಳಸಿ ಬೆಳೆಸಿದ ಆಹಾರಗಳಿಂದ ಹಾಗು ಜನರ ದುಶ್ಚಟಗಳಿಂದ ಅಪಾಯಕಾರಿ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಆರೋಗ್ಯವೇ ಭಾಗ್ಯವಾಗಿರುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಲು ಜನರು ಇಂತಹ ಶಿಬಿರಗಳನ್ನು ಸದುಪಯೋಗಪಡಿಸಿಕೊಳ್ಳ ಬೇಕೆಂದು ಕರೆ ನೀಡಿದರು.
ಟ್ರಸ್ಟ್ ನ ಅಧ್ಯಕ್ಷರಾದ ಕೆ.ಮಹೇಶ್ ಮಾತನಾಡಿ ಈ ತಪಾಸಣಾ ಶಿಬಿರವನ್ನು ಯಶಸ್ವಿಗೊಳಿಸಲು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಅಭಿನಂದನೆಗಳನ್ನು ತಿಳಿಸಿದರು.
ಶಿಬಿರದಲ್ಲಿ ಕೆ.ಕಾಳಪ್ಪ, ಗುಜ್ಜಲ್ ನಾಗರಾ, ಬೋಡಾ ರಾಮಪ್ಪ, ಜಯರಾಮ್, ಐ.ಯರಿಸ್ವಾಮಿ, ತಾರಿಹಳ್ಳಿ ಜಂಬಯ್ಯ, ಸಪ್ತಗಿರಿ ಆಸ್ಪತ್ರೆಯ ವೈದ್ಯಧಿಕಾರಿ ಡಾ.ಹನುಮಂತ, ಡಾ. ಪ್ರಮೋದ್, ಡಾ.ಗೌರವ್, ಆನಂದ್ ಕುಮಾರ್ ಹಾಗಹೂ ತಪಾಸಣೆಗಾಗಿ ಆಗಮಿಸಿದ ನೂರಾರು ಜನ ಉಪಸ್ಥಿತರಿದ್ದರು.