ಹೊಸಪೇಟೆ: ಸ್ವಚ್ಛ ಭಾರತದ ಯಶಸ್ವಿಗೆ ಕೈ ಜೋಡಿಸಲು ಮನವಿ

ಲೋಕದರ್ಶನ ವರದಿ

ಹೊಸಪೇಟೆ 08: ಸರಕಾರಿ ಕಛೇರಿಗಳು ಕೇವಲ ತನ್ನ ವ್ಯವಹಾರಿಕ ಕೆಲಸದಡೆಗೆ ಮಾತ್ರ ಗಮನ ಹರಿಸದೇ ತನ್ನ ಸುತ್ತಲಿನ ಪರಿಸರ, ಜನಜೀವನದ ಸಮಗ್ರ ಅಭಿವೃದ್ಧಿಗೆ ವಿಶೇಷ ಗಮನ ಹರಿಸುವ ಮೂಲಕ ಸಮಾಜದ ಅಭಿವದ್ಧಿಗೂ ಆದ್ಯತೆ ನೀಡಬೇಕಿದೆ. ತಮ್ಮ ಸುತ್ತಲಿನ ಪ್ರದೇಶದ ಸ್ವಾಸ್ತ್ಯಕಾಪಾಡುವಲ್ಲಿ ಪ್ರತಿಯೊಬ್ಬರು ಜವಾಬ್ದಾರಿ ನಿರ್ವಹಿಸಬೇಕಾಗಿದ್ದು ಈ ವಿಚಾರವನ್ನು ಹಾಗೂ ಸಮಸ್ಯೆಯನ್ನು ಸರಕಾರಿ ಕಛೇರಿಗಳು ಮತ್ತು ಸಮುದಾಯ ಸಂಘಟನೆಗಳು ಗಂಭೀರವಾಗಿ ಪರಿಗಣಿಸಿದೆ. 

ಈ ಹಿನ್ನಲೆಯಲ್ಲಿಯೇ ತನ್ನ ಸುತ್ತಲೂ ಇರುವ ಸ್ಥಳಗಳಲ್ಲಿ ಶುಚಿ ಯೋಜನೆ ಅಥರ್ಾತ್ ಸ್ವಚ್ಛ ಭಾರತ ಆಂದೋಲನವನ್ನು ಹಮ್ಮಿಕೊಂಡು ಸಮುದಾಯದ ಆರೋಗ್ಯವನ್ನು ಕಾಪಾಡಬೇಕಿದೆ, ದೇಶದ ಅನೇಕ ಸಮಸ್ಯೆಗಳಲ್ಲಿ ಸ್ವಚ್ಛತೆಯುಒಂದು ಪ್ರಮುಖ ಸಮಸ್ಯೆಯಾಗಿದ್ದು, ಸರ್ಕಾರಿ, ಅರೇ ಸಕರ್ಾರಿ, ಖಾಸಗಿ ಸೇರಿದಂತೆ ಪ್ರತಿಯೊಬ್ಬರೂ ಸ್ಚಚ್ಛತೆಗೆ ಮೊದಲ ಆದ್ಯತೆ ನೀಡಬೇಕುಎಂದುದೇಶದ ಪ್ರಧಾನಿ ನರೇಂದ್ರ ಮೋದಿಯವರೇ ಪೊರಕೆ ಹಿಡಿದು ಸ್ವಚ್ಛತೆಗೆಮುಂದಾಗಿರುವುದು ತಿಳಿದ ವಿಷಯವೆ. ಎಂದು ವಿಕಾಸ ಯುವಕ ಮಂಡಳ ಹಾಗೂ ಆದರ್ಶ ಮಹಿಳಾ ಸಂಘವು ಹೊಸಪೇಟೆ ನಗರದ ಸರ್ಕಾರಿ ಕಛೇರಿಗಳ ಅಧಿಕಾರಿಗಳಾದ ವಿಭಾಗೀಯ ನಿಯಂತ್ರಣಾಧಿಕಾರಿಗಳು, ಬಸ್ ನಿಲ್ದಾಣ, ಹೊಸಪೇಟೆ ಹಾಗೂ ತಾಲೂಕು ಆರೋಗ್ಯ ಅಧಿಕಾರಿಗಳು, ಮತ್ತು ಪೌರಾಯುಕ್ತರು ನಗರಸಭೆ ಅದೇ ರೀತಿಯಾಗಿ ನಗರ ಪೋಲಿಸ್ ಠಾಣೆಯ ಪೋಲಿಸ್ ಸಬ್ಇನ್ಸ್ಪೆಕ್ಟರ್ ಇವರಿಗೆ ಮನವಿ ಪತ್ರ ನೀಡುವುದರ ಮೂಲಕ ಸ್ವಚ್ಚತೆಯ ಬಗ್ಗೆ ಮೊದಲ ಪತ್ರ ಜಾಗೃತಿಗೊಳಿಸಲಾಯಿತು. 

ಈ ಸಂದರ್ಭದಲ್ಲಿ ಆದರ್ಶ ಮಹಿಳಾ ಸಂಘದ ಅಧ್ಯಕ್ಷರಾದ ಶ್ರೀಮತಿ ಸುನೀತ, ಸದಸ್ಯರಾದ ಲಕ್ಷ್ಮೀ, ಹಾಗೂ ವಿಕಾಸ ಯುವಕ ಮಂಡಳ ಅಧ್ಯಕ್ಷರು, ಗೋಸಲ ಬಸವರಾಜ್, ಮತ್ತು ಸದಸ್ಯರುಗಳಾದ ನಾಗರಾಜ್, ರಿಯಾಜ್, ಪ್ರಶಾಂತ, ಸುರೇಶ್, ಪವನ್, ಅಕ್ಷಯ್, ಚಂದ್ರು ಇನ್ನಿತರರು ಭಾಗವಹಿಸಿದ್ದರು.