ಧಾರವಾಡ / ನವದೆಹಲಿ 06, ಹುಬ್ಬಳ್ಳಿ-ಹೈದ್ರಾಬಾದ್ ದಿನನಿತ್ಯದ ಸ್ಪೈಸ್ಜೆಟ್ ಸಂಪರ್ಕ ಇತ್ತೀಚೆಗೆ ಹಠಾತ್ತನೆ ರದ್ದು ಪಡಿಸಿದ ಹಿನ್ನೆಲೆಯಲ್ಲಿ ಹಾಗೂ ಅದರಿಂದ ಒಟ್ಟಾರೆ ಈ ಭಾಗದ ವಿಮಾನ ಸಂಪರ್ಕಗಳ ಮೇಲೆ ಆಗುವ ಪರಿಣಾಮದ ದೃಷ್ಟಿಯಿಂದ ಮತ್ತೆ ಪುನಃರಾಂಭಿಸುವ ಬಗ್ಗೆ ಪುನಃ ಪರಿಶೀಲನೆ ಮಾಡುವುದಾಗಿ ಸ್ಪೈಸ್ಜೆಟ್ ಸಂಸ್ಥೆಯ ಅಧ್ಯಕ್ಷ ಹಾಗೂ ಕಾರ್ಯನಿವರ್ಾಹಕ ನಿದರ್ೇಶಕ ಅಜಯಸಿಂಗ್ ಅವರು ತಮಗೆ ತಿಳಿಸಿದ್ದಾರೆಂದು ಸಂಸದ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.
ಸ್ಪೈಸ್ ಜೆಟ್ ಸಂಸ್ಥೆಯು ಹುಬ್ಬಳ್ಳಿ -ಹೈದ್ರಾಬಾದ ವಿಮಾನ ಸಂಪರ್ಕ ರದ್ದುಗೊಳಿಸಿದ ಬಗ್ಗೆ ಹಾಗೂ ಹುಬ್ಬಳ್ಳಿಯಿಂದ ಇತರ ನಗರಗಳಿಗೆ ಸ್ಪೈಸ್ಜೆಟ್ ವಿಮಾನಯಾನ ಸಂಪರ್ಕಗಳ ವಿಷಯದಲ್ಲಿ ಇಂದು ಸಂಸದ ಪ್ರಲ್ಹಾದ ಜೋಶಿ ಅವರ ಕೋರಿಕೆಯ ಮೇರೆಗೆ ನವದೆಹಲಿಯಲ್ಲಿ ಕೇಂದ್ರ ನಾಗರೀಕ ವಿಮಾನಯಾನ ಇಲಾಖೆ ರಾಜ್ಯ ಸಚಿವ ಜಯಂತಸಿನ್ಹಾ ಅವರ ನವದೆಹಲಿಯ ಕಛೇರಿಯಲ್ಲಿ ಸ್ಪೈಸ್ಜೆಟ್ ಕಂಪನಿಯ ಅಧ್ಯಕ್ಷ ಹಾಗೂ ಕಾರ್ಯನಿವರ್ಾಹಕ ನಿದರ್ೇಶಕ ಅಜೆಯ ಸಿಂಗ್ ಅವರೊಂದಿಗೆ ನಡೆದ ಸಭೆಯಲ್ಲಿ ಈ ವಿಷಯಗಳ ಬಗ್ಗೆ ಸುದೀರ್ಘ ಚಚರ್ೆ ನಡೆಸಿ ಹುಬ್ಬಳ್ಳಿ-ಹೈದ್ರಾಬಾದ ವಿಮಾನಯಾನ ಮುಂದುವರೆಸಲು ಮನವಿ ಮಾಡಿದಾಗ ಈ ವಿಮಾನಕ್ಕೆ ಪ್ರಯಾಣಿಕರ ಸಂಖ್ಯೆ ಉತ್ತಮವಾಗಿದ್ದರೂ ಕೆಲವು ತಾಂತ್ರಿಕ ಕಾರಣಗಳಿಂದ ಈ ಸಂಪರ್ಕವನ್ನು ಅನಿವಾರ್ಯವಾಗಿ ರದ್ದು ಪಡಿಸಬೇಕಾಗಿದೆ ಎಂದು ತಿಳಿಸಿದ್ದಾರೆಂದು ವಿವರಿಸಿರುವ ಜೋಶಿ ಈ ಬಗ್ಗೆ ಕೇಂದ್ರ ಸಚಿವರು ಕೂಡಾ ಮದ್ಯ ಪ್ರವೇಶಿಸಿ ಉಡಾನ್ ಯೋಜನೆ ಅಡಿ ಹುಬ್ಬಳ್ಳಿಯಿಂದ ಸದರಿ ಸಂಸ್ಥೆಯು ನಿರ್ವಹಣೆ ಮಾಡುತ್ತಿರುವ ವಿಮಾನ ಸಂಪರ್ಕಗಳನ್ನು ರದ್ದುಗೊಳಿಸದಿರಲು ಸೂಚಿಸಿದ ಕಾರಣ ಹುಬ್ಬಳ್ಳಿ-ಹೈದ್ರಾಬಾದ್ ಸಂಪರ್ಕ ರದ್ದುಗೊಳಿಸಿದ್ದನ್ನು ಪುನಃ ಪರಿಶೀಲಿಸಲಾಗುವುದೆಂದು ತಿಳಿಸಿದ್ದಾರೆ. ಅಲ್ಲದೇ ದಿನಪತ್ರಿಕೆಗಳಲ್ಲಿ ವರದಿಯಾದಂತೆ ಜನೆವರಿ ತಿಂಗಳ ದಿನಾಂಕ 6 ರಂದು ಬೆಳಗಿನ 9.35 ರ ಹುಬ್ಬಳ್ಳಿ-ಬೆಂಗಳೂರು ವಿಮಾನ ಸಂಪರ್ಕ ರದ್ದುಗೊಳಿಸಲಾಗುದಿಲ್ಲವೆಂಬ ಬಗ್ಗೆ ಭರವಸೆ ಕೂಡಾ ನೀಡಿದ್ದಾರೆಂದು ಸಂಸದ ಜೋಶಿ ನವದೆಹಲಿಯಿಂದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.