ಹೊಸಪೇಟೆ: ಮತದಾನ ಮಾಡಿ ದೇಶದ ಭವಿಷ್ಯ ರೂಪಿಸಿ: ಪ್ರಭಯ್ಯ

ಲೋಕದರ್ಶನ ವರದಿ

ಹೊಸಪೇಟೆ 27: ಮತದಾನ ಪವಿತ್ರ ಕರ್ತವ್ಯ. ಇದನ್ನು ಎಲ್ಲರೂ ತಪ್ಪದೆ ತಮಗೆ ಸೂಕ್ತವೆನಿಸಿದ ವ್ಯಕ್ತಿಗೆ ಮತದಾನ ಮಾಡುವುದರ ಮೂಲಕ ದೇಶದ ಭವಿಷ್ಯವನ್ನು ರೂಪಿಸಬಹುದು" ಎಂದು ವಿಜಯನಗರ ಕಾಲೇಜಿನ ಪ್ರಾಂಶುಪಾಲ ಡಾ.ವಿ.ಎಸ್.ಪ್ರಭಯ್ಯ ಅಭಿಪ್ರಾಯಪಟ್ಟರು. ಎಂಪಿ.ಪ್ರಕಾಶ್ ನಗರದ 7ನೇ ವಾಡರ್್ನ ಸಕರ್ಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀ ಶಂಕರ್ ಆನಂದ್ ಸಿಂಗ್ ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನ ಎನ್.ಎಸ್.ಎಸ್.ಘಟಕದಿಂದ ನಡೆಯುತ್ತಿರುವ ವಿಶೇಷ ಶಿಬಿರದಲ್ಲಿ ಮತದಾನ ಜಾಗೃತಿ ಅಭಿಯಾನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಜಾಥಾದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಜಿ.ಕನಕೇಶಮೂತರ್ಿ, ಶಿಬಿರಾಧಿಕಾರಿಗಳಾದ ಕೆ.ಶಿವಪ್ಪ, ಡಿ.ಎಂ.ಮಲ್ಲಿಕಾಜರ್ುನಯ್ಯ, ಸಮಾಜಶಾಸ್ತ್ರ ಸಹ ಪ್ರಾಧ್ಯಾಪಕ ಎಂ.ಕೆ.ಗದ್ದಿಗೇಶ್, ಅತಿಥಿ ಉಪನ್ಯಾಸಕ ಮಂಜುನಾಥ್ ಆರ್, ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಶಿಬಿರಾಥರ್ಿಗಳು ನಗರದ ಬೀದಿಗಳಲ್ಲಿ ಅಭಿಯಾನದ ಮೂಲಕ ಬೀದಿನಾಟಕಗಳು, ಜಾಗೃತಿ ಗೀತೆಗಳನ್ನು ಹಾಡುವುದರೊಂದಿಗೆ ಜನಸಾಮಾನ್ಯರಲ್ಲಿ ಮತದಾನ ಜಾಗೃತಿ ಮೂಡಿಸಿದರು.

ದಿ: 26ರಂದು ನಡೆದ ಕಾರ್ಯಕ್ರಮದಲ್ಲಿ ಥಿಯೋಸಾಫಿಕಲ್ ಮಹಿಳಾ ಕಾಲೇಜಿನ ಡಾ. ಕಿಚಿಡಿ ಚನ್ನಪ್ಪ ಯುವಜನತೆ ಮತ್ತು ಮತದಾನ ವಿಷಯ ಕುರಿತು ಉಪನ್ಯಾಸ ನೀಡಿದರು.