ಲೋಕದರ್ಶನ ವರದಿ
ಹೊಸಪೇಟೆ 24: ಡಾನ್ ಬಾಸ್ಕೊ ಸಂಸ್ಥೆಯ ಟಿ.ಡಿ.ಹೆಚ್. ಯೋಜನೆಯ ವತಿಯಿಂದ ಫ್ರೈಡೆ ಫಾರ್ ಫ್ಯೂಚರ್ ಎನ್ನುವ ಶಿಷರ್ಿಕೆಯಡಿಯಲ್ಲಿ ಡಾನ್ ಬಾಸ್ಕೊ ಸಂಸ್ಥೆಯ ವತಿಯಿಂದ ಮಕ್ಕಳು, ಯುವಕರು ಹಾಗೂ ಮಹಿಳೆಯರನ್ನೋಳಗೊಂಡಂತೆ ಜಾಗೃತಿ ಜಾಥಾವನ್ನು ಹಮ್ಮಿಕೊಳ್ಳಲಾಗಿತ್ತು.
ರ್ಯಾಲಿಯ ಉದ್ಘಾಟನೆಯಲ್ಲಿ ಸಂಸ್ಥೆಯ ನಿದರ್ೆಶಕ ಫಾ/ಲಾರೆನ್ಸ್, ಟಿ.ಡಿ.ಹೆಚ್ ಯೋಜನೆಯ ಸಂಯೋಜಕಿ ಸಾವಿತ್ರಿ, ಸಿಸ್ಟರ್ ಸೀಮಾ, ಸಿಸ್ಟರ್ ಮೆರ್ಲಿನ್ ಹಾಗು ಸಿಬ್ಬಂದಿವರ್ಗದವರು ಹಾಗೂ ಯುವಕರು ಶಾಲಾ ಶಿಕ್ಷಕಿಯರು, ಮಕ್ಕಳು ಹಾಜರಾಗಿ ಹಸಿರು ನಿಶಾನೆ ತೋರಿಸುವುದರ ಮೂಲಕ ರ್ಯಾಲಿ ಚಾಲನೆಯನ್ನು ನೀಡಿದರು.
ಪ್ರಾಸ್ಥವಿಕವಾಗಿ ಮಾತನಾಡಿದ ಫಾ/ಲಾರೆನ್ಸ್ ಇಂದು "ಫ್ರೈಡೆ ಫಾರ್ ಫ್ಯೂಚರ್ ಎನ್ನುವ ಹೆಸರಿನಲ್ಲಿ ಗ್ರಟಾ ಥನ್ಬಗರ್್ ಎನ್ನುವ ಬಾಲಕಿ ಸ್ವೀಡನ್ ಧೇಶದಲ್ಲಿ ಪರಿಸರ ಸಂರಕ್ಷಣೆ ಕುರಿತು ಹವಾಮಾನ ಬದಲಾವಣೆಗೆ ಸಕರ್ಾರದ ವತಿಯಿಂದ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಶಾಲಾ ದಿನಗಳಲ್ಲಿ ಪ್ರತಿ ಶುಕ್ರವಾರ ಸಕರ್ಾರಕ್ಕೆ ಒತ್ತಾಯ ಮಾಡುವ ಉದ್ದೇಶದಿಂದ ಧರಣಿಯನ್ನು ಕುಳಿತುಕೊಂಡು ಪರಿಸರ ಸಂರಕ್ಷಣೆ ಕುರಿತು ಹೋರಾಟವನ್ನು ಮಾಡುತ್ತಿದ್ದಾಳೆ. ಇವರ ಈ ಪ್ರತಿಭಟನೆಗೆ ಮೊಟ್ಟಮೊದಲನೇ ವಿಶ್ವ ವ್ಯಾಪಿ ಹೋರಾಟವಾಗಿ ಮಾಚರ್್ 18 2019 ರಂದು 120 ದೇಶಗಳಿಂದ ಪ್ರೋತ್ಸಹ ದೊರೆತಿದೆ. ಈ ಚಳುವಳಿಯ ಎರಡನೇ ವಿಶ್ವ ವ್ಯಾಪಿ ಆಂದೋಲನದ ದಿನವಾಗಿದ್ದು ನಮ್ಮ ಸಂಸ್ಥೆಯ ವತಿಯಿಂದ ರ್ಯಾಲಿಯನ್ನು ಕೈಗೊಂಡು ನಗರಸಭೆ ಆಯುಕ್ತರಿಗೆ ಮನವಿ ಪತ್ರವನ್ನು ಸಲ್ಲಿಸುವುದರ ಮೂಲಕ ಪರಿಸರದ ಸಂರಕ್ಷಣೆಗೆ ಇನ್ನೂ ಹೆಚ್ಚಿನ ಮಟ್ಟದಲ್ಲಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಕರ್ಾರಕ್ಕೆ ಒತ್ತಾಯಿಸುತ್ತಿದ್ದೇವೆ ಎಂದು ತಿಳಿಸಿದರು.
ನಂತರ ಡಾನ್ ಬಾಸ್ಕೊ ಸಂಸ್ಥೆಯಿಂದ ಪರಿಸರ ಸಂರಕ್ಷಣೆ ಕುರಿತಾದ ಬೀದಿ ನಾಟಕ ಮತ್ತು ಘೋಷಣೆಗಳನ್ನು ಕೂಗುತ್ತಾ ಹಾಗು ಪರಿಸರ ಕುರಿತಾದ ಮುಖವಾಡಗಳನ್ನು ಹಾಕಿಕೊಂಡಿದ್ದ ಮಕ್ಕಳು ನಗರದ ಮೇನ್ ಬಜಾರ್ ಮೂಲಕ ನಗರಸಭೆಗೆ ತೆರಳಿದ ರ್ಯಾಲಿಯು ನಗರಸಭೆಯಲ್ಲಿ ಆಯುಕ್ತರ ಪರವಾಗಿ ಂ.ಇ.ಇ. ರವರಾದ ಶ್ರೀಯುತ ಮನ್ಸೂರ್ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು. ಮನವಿ ಪತ್ರವನ್ನು ಸ್ವೀಕರಿಸಿ ಮಾತನಾಡಿ ಈಗಾಗಲೇ ಪರಿಸರ ಸಂರಕ್ಷಣೆಗೆ ಸಕರ್ಾರದ ವತಿಯಿಂದ ಹತ್ತು ಹಲವಾರು ಯೋಜನೆಗಳನ್ನು ಹಮ್ಮಿಕೊಂಡು ಯಶಸ್ವೀಯಾಗಿ ನಿರ್ವಹಿಸಲಾಗುತ್ತಿದೆ. ಆದರೂ ಸಹ ಪರಿಸರವನ್ನು ಇನ್ನೂ ಹೆಚ್ಚಿನ ಮಟ್ಟಿಗೆ ಸಂರಕ್ಷಣೆ ಮಾಡುವುದರ ಬಗ್ಗೆ ಮಕ್ಕಳು, ಡಾನ್ ಬಾಸ್ಕೊ ಸಂಸ್ಥೆಯ ವತಿಯಿಂದ ಇಂದು ಮನವಿ ಪತ್ರವನ್ನು ಸಲ್ಲಿಸುತ್ತಿರುವುದು ಸ್ವಾಗತಾರ್ಹ. ನಮ್ಮ ಇಲಾಖೆಯ ವತಿಯಿಂದ ಪರಿಸರ ಸಂರಕ್ಷಣೆಗೆ ಏನೆಲ್ಲ ಕ್ರಮಗಳನ್ನು ಕೈಗೊಳ್ಳಬೇಕೊ ಆ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತೇವೆ ಹಾಗು ಸಾರ್ವಜನಿಕರು ಸಹ ಸಂಸ್ಥೆಯ ಹಾಗು ಇಲಾಖೆಯ ವತಿಯಿಂದ ಪರಿಸರ ಸಂರಕ್ಷಣೆಗೆ ಕೈಗೊಳ್ಳುವ ಕೆಲಸ ಕಾರ್ಯಗಳಲ್ಲಿ ಸಹಕಾರ ಕೊಟ್ಟಾಗ ಪರಿಸರವನ್ನು ಇನ್ನೂ ಹೆಚ್ಚಿನ ಪಟ್ಟದಲ್ಲಿ ಸಂರಕ್ಷಣೆ ಮಾಡಲು ಸಾಧ್ಯ ಎಂದು ತಿಳಿಸಿದರು.
ಪರಿಸರ ಸಂರಕ್ಷಣೆ ಕುರಿತಾದ ಜಾಗೃತಿ ಜಾಥಾದಲ್ಲಿ ಡಾನ್ ಬಾಸ್ಕೊ ವಸತಿ ನಿಲಯ ಸ್ನೇಹಾಲಯ, ಅಂಬೇಡ್ಕರ್ ಶಾಲೆ ಹಾಗು ಸಂಸ್ಥೆಯ ವತಿಯಿಂದ ನಡೆಸಲಾಗುತ್ತಿರುವ ಸಂಜೆ ತರಗತಿಗಳಿಂದ ಒಟ್ಟು 85 ಮಕ್ಕಳು ಹಾಗು ಸಂಸ್ಥೆಯ ಸಿಬ್ಬಂದಿವರ್ಗದವರು ಒಟ್ಟು 20 ಸಿಬ್ಬಂದಿಯವರು ಒಟ್ಟು 105 ಜನರು ಪಾಲ್ಗೊಂಡು ಪರಿಸರ ಸಂರಕ್ಷಣೆ ಕುರಿತಾದ ಹಮ್ಮಿಕೊಂಡಿದ್ದ ಜಾಗೃತಿ ಜಾಥಾವನ್ನು ಯಶಸ್ವೀಗೊಳಿಸಿದರು.
ಒಟ್ಟಿನಲ್ಲಿ ವಿಶ್ವದಾದ್ಯಂತ ಹಮ್ಮಿಕೊಂಡಿರುವ "ಈಖಆಂಙ ಈಔಖ ಈಗಖಿಗಖಇ" ಅಚಿಟಠಿಚಿರಟಿ ಗೆ ಡಾನ್ ಬಾಸ್ಕೊ ಸಂಸ್ಥೆಯ ವತಿಯಿಂದ ಬೆಂಬಲವನ್ನು ಸೂಚಿಸುವುದರ ಮೂಲಕ ಪರಿಸರ ಸಂರಕ್ಷಣೆಗೆ ಹೆಚ್ಚಿನ ಆದ್ಯತೆಯ ಒಂದು ಉತ್ತಮ ಕಾರ್ಯವನ್ನು ಸಂಸ್ಥೆಯ ವತಿಯಿಂದ ನಡೆಸಲಾಯಿತು