ಹೊಸಪೇಟೆ: ಸಂಭ್ರಮದ ರಾಮ ಈಶ್ವರ ಜೋಡಿ ರಥೋತ್ಸವ

ಲೋಕದರ್ಶನ ವರದಿ

ಹೊಸಪೇಟೆ 14: ತಾಲ್ಲೂಕಿನ ಹಳೆಮಲಪನಗುಡಿಯಲ್ಲಿ ಶನಿವಾರ ಸಂಜೆ ರಾಮ-ಈಶ್ವರ ಸ್ವಾಮಿ ಜೋಡಿ  ರಥೋತ್ಸವ  ಶ್ರದ್ಧೆ ಭಕ್ತಿ ಹಾಗೂ ಸಡಗರ ಸಂಭ್ರಮದಿಂದ ಜರುಗಿತು. ಮಲಪನಗುಡಿ ಹಾಗೂ ಸುತ್ತಮುತ್ತಲಿನ ಊರುಗಳಿಂದ ಬಂದಂತಹ ಭಕ್ತರು ತೇರು ಎಳೆದರು.

ರಥೋತ್ಸವ ವೇಳೆ ಭಕ್ತರು ತೇರಿನ ಮೇಲೆ ಉತ್ತತ್ತಿ, ಬಾಳೆಹಣ್ಣು, ಹೂವು ಎಸೆದು ಭಕ್ತಿ ಸಮಪರ್ಿಸಿದರು. ರಾಮ ಮತ್ತು ಈಶ್ವರ ದೇವರಿಗೆ ಜಯವಾಗಲಿ ಎಂದು ಘೋಷಣೆಗಳನ್ನು ಕೂಗಿದರು. ರಥೋತ್ಸವದ ವೇಳೆ ಜಯಘೋಷ, ಶಿಳ್ಳೆ, ಕೇಕೆ, ಹಾಕಿ ಭಕ್ತರು ಸಂಭ್ರಮ ಸಂಭ್ರಮಿಸಿದರು. ಮೊಬೈಲಿನಲ್ಲಿ ಸೆಲ್ಫಿತೆಗೆದುಕೊಂಡು ಖುಷಿಪಟ್ಟರು. ಸಂಜೆ 5:30ಆರಂಭಗೊಂಡ ರಥೋತ್ಸವ ಆರಕ್ಕೆ ಕೊನೆಗೊಂಡಿತ್ತು.

ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರಿದ್ದು ಹಾಗೂ ಮುಖ್ಯ ರಸ್ತೆಯಲ್ಲಿ ತೇರು ಎಳೆದು ಕಾರಣ ಹೊಸಪೇಟೆ ಕಂಪ್ಲಿ ರಸ್ತೆಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಬೆಳಿಗ್ಗೆ ಸೀತಾರಾಮ ಕಲ್ಯಾಣ, ಪಾರ್ವತಿ ಪರಮೇಶ್ವರ ಕಲ್ಯಾಣ, ರಥಾಂಗ ಹೋಮ, ಪೂರ್ಣಹುತಿ ಮತ್ತು ಮಡಿತೇರು ನಡೆಯಿತು. ಜಾತ್ರೆ ಅಂಗವಾಗಿ ದೇವಸ್ಥಾನಕ್ಕೆ ವಿದ್ಯುತ್ ದೀಪಗಳಿಂದ ಅಲಂಕಾರಗೊಂಡಿತ್ತು. ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.