ತೋಟಗಾರಿಕೆ ಬೆಳೆ ನಾಶ: ಶಾಸಕ ಯಶವಂತರಾಯಗೌಡ ಪರಿಶೀಲನೆ

ಇಂಡಿ12: ಲಾಕ್ಡೌನ್ ಜಾರಿಯಲ್ಲಿ ಇರುವದರಿಂದ ತೋಟಗಾರಿಕಾ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲದೆ ರೈತರು ಸಂಕಷ್ಟ ಅನುಭವಿಸುತ್ತಿರುವ ಸಂದರ್ಭದಲ್ಲಿ  ಬಿರುಗಾಳಿ ಆಲಿಕಲ್ಲಿನ ಮಳೆಯಿಂದಾಗಿ ತೋಟಗಾರಿಕೆ ಬೆಳೆಗಳು ನಾಶವಾಗಿವೆ. ರೈತರು  ಆತಂಕ ಪಡುವ ಅಗತ್ಯವಿಲ್ಲ ಸರಕಾರ ನಿಮ್ಮ ಸಹಕಾರಕ್ಕೆ ಬರುತ್ತದೆ ನಾನು ನಿಮ್ಮೊಂದಿಗೆ ಇದ್ದೇನೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ತಾಲೂಕಿನ ಅಕಾಲಿಕ ಮಳೆ, ಗಾಳಿಯಿಂದ ಹಾನಿಯಾದ ತಾಲೂಕಿನ ಲಿಂಗದಳ್ಳಿ, ತಡವಲಗಾ ಗ್ರಾಮದ ರೈತರಾದ ತಮ್ಮಣ್ಣಾ ಪೂಜಾರಿ ಮತ್ತು ಬಸಪ್ಪಾ ಕಲಘಟಗಿಯವರ 5 ಎಕರೆ ಪ್ರದೇಶದಲ್ಲಿ ಪಪ್ಪಾಯಿ ಬೆಳೆಗಳು ಬಿರುಗಾಳಿ ಹಾಗೂ ಆಲಿಕಲ್ಲಿನ ಮಳೆಗೆ ನಾಶವಾಗಿರುವದನ್ನು ವೀಕ್ಷಿಸಿ ರೈತರನ್ನುದ್ದೇಶಿಸಿ ಮಾತನಾಡಿದರು.

ಪ್ರತಿಯೊಂದು ಕ್ಷೇತದಲ್ಲಿ ಅತ್ಯಂತ ಸಂಕಷ್ಟದಲ್ಲಿರುವವರಲ್ಲಿ ಅನ್ನಧಾತ ಒಂದು ಕಡೆ. ಸೂಕ್ತ ಮಾರುಕಟ್ಟೆ ಹಾಗೂ ಬೆಂಬಲ ಬೆಲೆ ಇಲ್ಲದೆ ಇರುವುದು ಇನ್ನೊಂದು ಕಡೆಯಾದರೆ ಪದೆ ಪದೆ ನೈಸಗರ್ಿಕ ವಿಕೋಪಗಳಿಗೆ ತುತಾಗುತ್ತಿದ್ದಾರೆ. ಇಂತಹ ಪರಸ್ಥಿತಿಯಲ್ಲಿ ರೈತರ ಬದುಕು ದುಸ್ತರವಾಗಿದೆ. ವಿಪರಿತ ಗಾಳಿ ಆಲಿಕಲ್ಲಿನ ಮಳೆಯಿಂದ ಪಪ್ಪಾಯಿ, ದ್ರಾಕ್ಷಿ, ಲಿಂಬೆ, ಬಾಳೆ, ಮಾವು ನೆಲಕ್ಕುರುಳಿರುವದು ಅತ್ಯಂತ ವಿಷಾದನೀಯ ಸಂಗತಿ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಕಳವಳಿ ವ್ಯಕ್ತಪಡಿಸಿದರು.

ನಾನು ಸದಾ ನಿಮ್ಮೊಂದಿಗೆ ಇದ್ದೇನೆ. ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ ನಿಮಗಾದ ಹಾನಿಯನ್ನು ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ನಾನು ಕೂಡಾ ರೈತನ ಮಗನಾಗಿದ್ದು ಬದ್ದತೆ ಪ್ರಮಾಣಿಕತೆ ಇದೆ. ರೈತರ ಕಷ್ಟ ನಷ್ಟ ಹತ್ತಿರದಿಂದ ಕಂಡಿದ್ದೇನೆ. ತಾಲೂಕಿನಲ್ಲಿ ಮಳೆ ಗಾಳಿಯಿಂದ ರೈತರು ಬೆಳೆದ ತೋಟಗಾರಿಕೆ ಬೆಳೆಗಳ ಹಾನಿ ಎಷ್ಟು?   ಹಾಗೂ   ಆಸ್ತಿ- ಪಾಸ್ತಿ, ಶೆಡ್ಡುಗಳು, ಜಾನುವಾರಗಳು ಹಾನಿಯಾಗಿದ್ದರೆ ಸರಿಯಾಗಿ ಸವರ್ೆ ಕಾರ್ಯ ಮಾಡಿ ಶಿಘ್ರ ವರದಿ ಸಲ್ಲಿಸುವಂತೆ ತೋಟಗಾರಿಕಾ ಹಾಗೂ ಕೃಷಿ  ಮತ್ತು ಪಶು ವೈಧ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.ಸವರ್ೆ ಕಾರ್ಯದಲ್ಲಿ ಯಾವುದೇ ಪ್ರಮಾದ ಆಗದಂತೆ ಬದ್ದತೆ ಪ್ರಮಾಣಿಕತೆಯಿಂದ ಅನ್ನಧಾತನಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಿ ಸರಿಯಾಗಿ ಮಾಹಿತಿ ಅಧಿಕಾರಿಗಳು ನೀಡಿ ಸರಕಾರದ ಮಟ್ಟದಲ್ಲಿ ನಾನು ಹೋರಾಟ ಮಾಡುತ್ತೇನೆ ಎಂದು ತಿಳಿಸಿದರು. 

ತೋಟಗಾರಿಕಾ ಅಧಿಕಾರಿ ಆರ್. ಟಿ ಹಿರೇಮಠ ಹಾಗೂ ಕೃಷಿ ಅಧಿಕಾರಿ ಮಹಾದೇವಪ್ಪ ಏವೂರ ಜಟಿಯಾಗಿ ಸೂಕ್ತ ಸವರ್ೆ ಮಾಡಿ ರೈತರ ಹಾನಿಯಾದ ಸ್ಪಷ್ಠ ಮಾಹಿತಿ ಒದಗಿಸುವದಾಗಿ ಶಾಸಕರಿಗೆ ತಿಳಿಸಿದರು.

ಇಂಡಿ, ಸಿಂದಗಿ ಚಡಚಣ ಹಾಗೂ ಇತರೆ ತಾಲೂಕಾಗಳಲ್ಲಿ ರೈತರ ತೋಟಗಾರಿಕೆ ಬೆಳೆಗಳಾದ ಪಪ್ಪಾಯಿ ,ಬಾಳೆ, ದ್ರಾಕ್ಷಿ, ಮಾವು, ಲಿಂಬೆ ನುಗ್ಗೆ ಇಂತಹ ಅನೇಕ ತೋಟಗಾರಿಕೆ ಬೆಳೆಗಳು ಬಿರುಗಾಳಿ, ಆಲಿಕಲ್ಲಿನ ಮಳೆಯಿಂದಾಗಿ ನೆಲಕ್ಕುರುಳಿವೆ ಇದರ ಮಾಹಿತಿ ಜಿಲ್ಲಾಧಿಕಾರಿಗಳು ಸರಕಾರಕ್ಕೆ ಸಲ್ಲಿಸುವಂತೆ ಕ್ರಮಕೈಗೊಳ್ಳಲು ಸೂಚಿಸುತ್ತೇನೆ. ರೈತರು ಆತಂಕಪಡಬೇಡಿ ಸರಕಾರದಿಂದ ಸೂಕ್ತ ಪರಿಹಾರ ಪ್ಯಾಕೇಜ ಕೊಡಿಸುವದಾಗಿ ಶಾಸಕ ಯಶವಂತರಾಯಗೌಡರು ಭರವಸೆ ನೀಡಿದರು.

ಗ್ರಾ. ಪಂ ಅಧ್ಯಕ್ಷ ಕಲ್ಯಾಣಿ ಗಣವಲಗಾ,  ತಹಶೀಲ್ದಾರ ಚಿದಂಬರಂ ಕಲಕಣರ್ಿ, ಸಹಾಯಕ ಕೃಷಿ ನಿದೇರ್ಶಕ ಮಹದೇಪ್ಪ ಏವೂರ, ತೋಟಗಾರಿಕಾಧಿಕಾರಿ ಆರ್.ಟಿ ಹಿರೇಮಠ, ತಾಲೂಕಾ ಪಶು ವೈಧ್ಯಾಧಿಕಾರಿ ಸಿ.ಬಿ ಕುಂಬಾರ, ಕೆಬಿಜೆಎನ್ಎಲ್ ಅಧಿಕಾರಿ ಮನೋಜಕುಮಾರ ಗಡಬಳ್ಳಿ,  ಮಾಜಿ ಗ್ರಾ.ಪಂ ಅಧ್ಯಕ್ಷ ತಮ್ಮಣ್ಣಾ ಪೂಜಾರಿ, ಮುದಕಪ್ಪ ಗಣವಲಗಾ, ಎ.ಪಿ.ಎಂ.ಸಿ ಅಧ್ಯಕ್ಷ ಬಸವರಾಜ ಕಾಸಬಾಗ, ರಾಮಗೊಂಡ ಚವ್ಹಾಣ, ಉಸ್ಮಾನ ಖಸಾಬ, ಸೋಮಶೇಖರ ಬ್ಯಾಳಿ, ಅಶೋಕ ಮಿಜರ್ಿ, ರಾಜು ದಡೇದ, ಪ್ರಶಾಂತ ಪಾಟೀಲ, ರವಿ ಹೊಸಮನಿ ಸೇರಿದಂತೆ ಅನೇಕ ತಾಲೂಕಾಧಿಕಾರಿಗಳು ರೈತರು ಗ್ರಾಮಸ್ಥರು ಬೆಳೆ ವೀಕ್ಷಣೆಯಲ್ಲಿದ್ದರು.