ಹುಕ್ಕೇರಿ ಪುರಸಭೆ ಚುನಾವಣೆ: ಶಾಂತಿಯುತ ಮತದಾನ

ಮತಗಟ್ಟೆಗಳ 200 ಮೀಟರ ದೂರದಲ್ಲಿ ಜಮಾಯಿಸಿದ ಅಭ್ಯಥರ್ಿಗಳ ಬೆಂಬಲಿಗರು. ಎರಡನೇ ಚಿತ್ರದಲ್ಲಿ ಉಮೇಶ ನಗರದಲ್ಲಿ 90 ವರ್ಷದ

ಹುಕ್ಕೇರಿ 01: ಸರ್ವರ ಕುತೂಹಲ ಕೆರಳಿಸಿದ ಹುಕ್ಕೇರಿ ಪುರಸಭೆ ಚುನಾವಣೆ ಶುಕ್ರವಾರದಂದು ಶಾಂತಿಯುತವಾಗಿ ಜರುಗಿತು. ಈ ಚುನಾವಣೆ ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಗಳನ್ನು ಮೀರಿಸಿತ್ತು. ಮತದಾರರು ಮುಂಜಾನೆ 7 ರಿಂದ ಸಂಜೆ 5 ಗಂಟೆ ವರೆಗೆ ನಿಭರ್ಿಡೆಯಿಂದ ತಮ್ಮ ಮತದಾನದ ಹಕ್ಕು ಚಲಾಯಿಸಿದರು. ನಗರದಲ್ಲಿ ಯಾವದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗೃತೆ ಕ್ರಮವಾಗಿ ಪೋಲಿಸ ಬಂದೋಬಸ್ತ ಮಾಡಲಾಗಿತ್ತು. ಅಭ್ಯಥರ್ಿಯ ಬೆಂಬಲಿಗರು ಕಾರು, ಅಟೋದಲ್ಲಿ ಮತದಾರರನ್ನು ಮತಗಟ್ಟೆ ವರೆಗೆ ತಂದು ಮತದಾನ ಮಾಡಿಸಿದರು. ಮತಗಟ್ಟೆಯಿಂದ 200 ಮೀಟರ ದೂರದಲ್ಲಿ ಚುನಾವಣಾ ಕಣದಲ್ಲಿದ್ದ ಅಭ್ಯಥರ್ಿಯ ಬೆಂಬಲಿಗರು ತಮ್ಮ ಅಭ್ಯಥರ್ಿಗೆ ಮತ ನೀಡುವಂತೆ ಮತದಾರರ ಮನ ಒಲಿಸುತ್ತಿದ್ದ ಚಿತ್ರ ಎಲ್ಲ 23 ಮತಗಟ್ಟೆಗಳಲ್ಲಿ ಸಾಮಾನ್ಯವಾಗಿತ್ತು.

           ತಮ್ಮ ಅಭ್ಯಥರ್ಿಗಳನ್ನು ಗೆಲ್ಲಿಸಲು ಕಾಂಗ್ರೇಸ, ಭಾಜಪ ಹಾಗೂ ಜೆಡಿಎಸ್ ಪಕ್ಷದ ಕಾರ್ಯಕರ್ತರು ಹಗಲಿರಳು ಶ್ರಮಿಸಿದರು. ಈಗ ಅವರ ಭವಿಷ್ಯ ಮತಪೆಟ್ಟಿಗೆಳಲ್ಲಿ ಭದ್ರವಾಗಿದ್ದು ಮತ ಎಣಿಕೆ ನಂತರ ಸ್ಪಷ್ಟ ಚಿತ್ರಣ ಹೊರ ಬೀಳಲಿದೆ. ಚುನಾವಣೆಯಲ್ಲಿ ಕಾಂಗ್ರೇಸ ಹಾಗೂ ಭಾಜಪ ಪಕ್ಷದ ಅಭ್ಯಥರ್ಿಗಳ ಮಧ್ಯ ನೇರ ಸ್ಪಧರ್ೆ ಏರ್ಪಟ್ಟಿದ್ದು ಫಲಿತಾಂಶ ಎಲ್ಲರ ಗಮನ ಸೆಳೆದಿದೆ. ಯಾವ ಮತಗಟ್ಟೆಯಲ್ಲಿ ಗದ್ದಲವಿರಲಿಲ್ಲ. ಕತ್ತಿ ಸಹೋದರರ ಕಪಿ ಮುಷ್ಠಿಯಲ್ಲಿದ್ದ ಪುರಸಭೆ ಸ್ವಲ್ಪ ಮಟ್ಟಿಗೆ ಸಡಿಲಾಗುವ ಸಾಧ್ಯತೆಯಿದೆ. 60 ವರ್ಷಗಳಲ್ಲಿ ನಡೆಯದೆಯಿರುವ ಚುನಾವಣೆ ಈ ಬಾರಿ ಕಂಡು ಬಂದಿತು. ಶಾಸಕ ಉಮೇಶ ಕತ್ತಿ ಹಾಗೂ ಮಾಜಿ ಮಂತ್ರಿ ನೇತೃತ್ವದ ಚುನಾವಣೆಯಲ್ಲಿ ಯಾವ ಪಕ್ಷದ ಅಭ್ಯಥರ್ಿ ಗದ್ದುಗೆ ಏರುತ್ತಾರೆಂಬುದನ್ನು ಗುಟ್ಟನ್ನು ಮಾತ್ರ ಮತದಾರರು ಬಿಟ್ಟು ಕೊಟ್ಟಿಲ್ಲ. ಅಭೂತಪೂರ್ಣ ತುರುಸಿನ ಚುನಾವಣೆಯಲ್ಲಿ ಪುರುಷ ಹಾಗೂ ಮಹಿಳಾ ಮತದಾರರು ಉತ್ಸಾಹದಿಂದ ಮತದಾನ ಮಾಡಿದರು. ಕಳೆದ ಚುನಾವಣೆಯಲ್ಲಿ 19 ಸ್ಥಾನಗಳ ಪೈಕಿ 18 ಸ್ಥಾನಗಳು ಭಾಜಪ ಪಾಲಾಗಿದ್ದವು. ಈ ಬಾರಿ 7-8 ಸ್ಥಾನಗಳು ಕಾಂಗ್ರೇಸ ಪಕ್ಷದ ಪಾಲಾಗುವ ಸಾಧ್ಯತೆ ಕಂಡು ಬರುತ್ತದೆ. ಉಮೇಶ ನಗರದಲ್ಲಿ 90 ವರ್ಷದ ಗೋದವ್ವ ಬಾಳಿಕಾರ ತಮ್ಮ ಮಕ್ಕಳು, ಮೊಮ್ಮಕ್ಕಳೊಂದಿಗೆ ಮತಗಟ್ಟೆಗೆ ಬಂದು ಮತದಾನ ಮಾಡಿದರು. ಸಂಜೆ 5 ಗಂಟೆ ವರೆಗೆ 23 ಮತಗಟ್ಟೆಗಳಲ್ಲಿ ಪ್ರತಿಶತ 70 ರಷ್ಟು ಮತದಾನವಾಗಿತ್ತು ಮಾಜಿ 19 ಸದಸ್ಯರ ಪೈರೀ ಬಾರಿ ಭಾಜಪದ ಮಹಾವೀರ ನಿಲಜಗಿ, ವಾಗ್ದೇವಿ ತಾರಳಿ ಹಾಗೂ ಸ್ವತಂತ್ರ ಅಭ್ಯಥರ್ಿ ಗಜಬರ ಮುಲ್ಲಾ ಚುನಾವಣೆಗೆ ಸ್ಪಧರ್ಿಸಿದ್ದಾರೆ. ಈ ಚುನಾವಣೆ ಶಾಸಕ ಉಮೇಶ ಕತ್ತಿ ಹಾಗೂ ಮಾಜಿ ಮಂತ್ರಿ ಎ.ಬಿ.ಪಾಟೀಲರಿಗೆ ಅಗ್ನಿ ಪರೀಕ್ಷೆಯಾಗಿದ್ದು ಇದು ಮುಂದಿನ ಲೋಕಸಭೆ ಚುನಾವಣೆ ಮೇಲೆ ಪರಿಣಾಮ ಬೀರುವದನ್ನು ಅಲ್ಲಗಳೆಯುವಂತಿಲ್ಲ. ಈ ಚುನಾವಣೆಯಲ್ಲಿ ಪ್ರಥಮ ಬಾರಿಗೆ 11 ಜೆಡಿಎಸ್ ಅಭ್ಯಥರ್ಿಗಳು ಚುನಾವಣೆ ಕಣಕ್ಕಿಳಿದಿರುವದು ವಿಶೇಷ.