ಹುಕ್ಕೇರಿ ಪುರಸಭೆ ಕೈ, ಸಂಕೇಶ್ವರ ಪುರಸಭೆ ಕಮಲದ ಮುಡಿಗೆ

ಹುಕ್ಕೇರಿ ಮತ ಏಣಿಕೆ ಕೇಂದ್ರದ ಮುಂದೆ ನೆರೆದ ಜನ ಜಂಗುಳಿ

ಹುಕ್ಕೇರಿ 03: ಸರ್ವರ ಕುತೂಹಲ ಕೆರಳಿಸಿದ ಹುಕ್ಕೇರಿ ಹಾಗೂ ಸಂಕೇಶ್ವರ ಪುರಸಭೆಗಳ ಫಲಿತಾಂಶ ಇಂದು ಸೋಮವಾರ ಸ್ಥಳೀಯ ಸರಕಾರಿ ಉದರ್ು ಪ್ರೌಢ ಶಾಲೆಯಲ್ಲಿ ಮತ ಏಣಿಕೆ ಮುಂಜಾನೆ 8 ಗಂಟೆಗೆ ಪ್ರಾರಂಭಗೊಂಡು 10 ಗಂಟೆಗೆ ಫಲಿತಾಂಶ ಹೊರ ಬಂದಿತು.

 ಹುಕ್ಕೇರಿ ಪುರಸಭೆಗೆ 23 ಸ್ಥಾನಗಳ ಪೈಕಿೆ 12 ಕಾಂಗ್ರೇಸ, 8 ಭಾಜಪ ಹಾಗೂ 1 ಪಕ್ಷೇತರ ಅಭ್ಯಥರ್ಿ ಆಯ್ಕೆಗೊಂಡರೆ ಸಂಕೇಶ್ವರ ಪುರಸಭೆಗೆ 11 ಕಾಂಗ್ರೇಸ, 11 ಭಾಜಪ ಹಾಗೂ 1 ಪಕ್ಷೇತರ ಅಭ್ಯಥರ್ಿಗಳು ಅಯ್ಕೆಗೊಂಡರು. ಹುಕ್ಕೇರಿ ಪುರಸಭೆಗೆ ಕಾಂಗ್ರೇಸಿಗೆ ಸ್ಪಷ್ಟ ಬಹುಮತ ದೊರಕಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. 

ಸಂಕೇಶ್ವರ ಪುರಸಭೆಗೆ ಎರಡೂ ಪಕ್ಷಗಳಿಗೆ ಸಮಮತ ಬಿದ್ದಿದ್ದರಿಂದ ಪಕ್ಷೇತರ ಅಭ್ಯಥರ್ಿಯದು ನಿಣರ್ಾಯಕ ಪಾತ್ರವಾಗಿದೆ. ಶಾಸಕ ಹಾಗೂ ವಿಧಾನ ಪರಿಷತ್ ಸದಸ್ಯರಿಗೆ ಮತದಾನದ ಹಕ್ಕು ಇರುವದರಿಂದ ಸಂಕೇಶ್ವರ ಪುರಸಭೆ ಭಾಜಪದ ಮಡಲಿಗೆ ಹೋಗುವ ಸಾಧ್ಯತೆಯಿದೆ. ಮುಂಜಾನೆಯಿಂದ ಮತ ಏಣಿಕೆ ಕೇಂದ್ರದ ಮುಂದೆ ಅಭ್ಯಥರ್ಿಗಳ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದರು. ಐತಿಹಾಸಿಕ ಚುನಾವಣೆಯಲ್ಲಿ ಭಾಜಪಕ್ಕೆ ಮುಖಭಂಗವಾದತಾಂಗಿ ಕಾಂಗ್ರೇಸ ಪಕ್ಷ ಪ್ರಥಮ ಬಾರಿಗೆ ಹುಕ್ಕೇರಿ ಪುರಸಭೆಯ ಗದ್ದುಗೆ ಏರಲಿದೆ. ಜಯಶಾಲಿಗಳಾದ ಅಭ್ಯಥರ್ಿಗಳ ಬೆಂಬಲಿಗರು  ಪಟಾಕಿ ಹಾಗೂ ಗುಲಾಲು ಹಾರಿಸಿ ವಿಜಯೋತ್ಸವ ಆಚರಿಸಿದರು. 

ಹುಕ್ಕೇರಿ ಪುರಸಭೆಗೆ ಕಾಂಗ್ರೆಸ, ಭಾಜಪ, ಜಾತ್ಯಾತೀತ ಜನತಾದಳ ಹಾಗೂ ಪಕ್ಷೇತರದ ಒಟ್ಟು 23 ಸ್ಥಾನಗಳಿಗೆ 79 ಅಭ್ಯಥರ್ಿಗಳು ಚುನಾವಣಾ ಕಣದಲ್ಲಿದ್ದರು. 11 ಜಾತ್ಯಾತೀತ ಜನತಾ ದಳದ ಅಭ್ಯಥರ್ಿಗಳಲ್ಲಿ ಒಬ್ಬರೂ ಆಯ್ಕೆಯಾಗಲಿಲ್ಲ. ಈ ಫಲಿತಾಂಶ ಲೋಕಸಭಾ ಚುನಾವಣೆ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಫಲಿತಾಂಶ ಹೊರಬರುವ ಹಿನ್ನಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಇಂದಿನ ಸೋಮವಾರದ ಸಂತೆಯನ್ನು ನಿಷೇಧಿಸಲಾಗಿತ್ತು. ಸರಕಾರದ ಅನುದಾನದ ಯೋಗ್ಯ ಬಳಕೆಯಾಗಿಲ್ಲ ಹಾಗೂ ನಗರದಲ್ಲಿ ಯಾವದೇ ಅಭಿವೃದ್ಧಿ ಕೆಲಸಗಳಾಗಿಲ್ಲವೆಂಬುದನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಧುರೀಣರು ಮತದಾರರಲ್ಲಿ ಮತಯಾಚನೆ ಮಾಡಿ ಮನ ಒಲಿಸಿದ್ದರು. ಭಾಜಪ ಪಕ್ಷ ಯೋಗ್ಯ ಅಭ್ಯಥರ್ಿಗಳನ್ನು ಕೊಡದ್ದರಿಂದ ಸೋಲನ್ನಪ್ಪಿದೆಯೆಂದು ಜನರಲ್ಲಿ ಚಚರ್ೆಯಿತ್ತು. ಇನ್ನು ಮುಂದೆ ಆಡಳಿತ ಹಿಡಿದ ಕಾಂಗ್ರೆಸ ಪಕ್ಕ ಯಾವ ರೀತಿಯಲ್ಲಿ ನಗರದಲ್ಲಿ ಅಭಿವೃದ್ಧಿ ಕೆಲಸ ಮಾಡುವದೆಂಬುದನ್ನು ಕಾಯ್ದು ನೋಡಬೇಕಷ್ಠೆ...! 

ಚುನಾವಣೆಗೆ ಸ್ಪಧರ್ಿಸಿದ ಮಾಜಿ ಅಧ್ಯಕ್ಷೆ ವಾಗ್ದೇವಿ ತಾರಳಿ ಕೇವಲ 112 ಮತಗಳನ್ನು ಪಡೆದು ಹೀನಾಯವಾಗಿ ಸೋಲನ್ನನುಭವಿಸಿದರೆ ಮಾಜಿ ಸದಸ್ಯರಾದ ಮಹಾವೀರ ನಿಲಜಗಿ ಹಾಗೂ ಪಕ್ಷೇತರ ಅಭ್ಯಥರ್ಿ ಗಜಬರ ಇಸ್ಮಾಯಿಲ ಮುಲ್ಲಾ ಆಯ್ಕೆಗೊಂಡಿದ್ದಾರೆ. ಒಟ್ಟಾರೆ ಈ ಬಾರಿ ಪುರಸಭೆಗೆ ಹೊಸ ಮುಖಗಳ ಪರಿಚಯವಾಗಿದೆ.

23 ವಾರ್ಡಗಳಲ್ಲಿ ವಿಜಯಶಾಲಿಗಳಾದ ಅಭ್ಯಥರ್ಿಗಳು ಪಡೆದ ಮತಗಳು ಪಕ್ಷ ಇಂತಿವೆ ವಾರ್ಡ ನಂ 1 :  ಮಹಾವೀರ ನಿಲಜಗಿ (342) ವಿಠ್ಠಲ ಮುತ್ನಾಳಿ (191) ವಾರ್ಡ ನಂ 2 :  ಜ್ಯೋತಿ ಬಡಿಗೇರ (167) ಶೋಭಾ ಬಡಿಗೇರ (162) ವಾರ್ಡ ನಂ 3 : ಶಂಕರ ಗೊಟೂರಿ (334) ಈಷರ್ಾದ ಮೊಕಾಶಿ (322), ವಾರ್ಡ ನಂ 4 : ಪಾರವ್ವಾ ಲಠ್ಠಿ (368) ಅನ್ನಪೂಣರ್ಾ ನಾಯಿಕ (359) ವಾರ್ಡ ನಂ 5 :  ಸಂಗೀತಾ ಹುಕ್ಕೇರಿ (256) ರಾಜಶ್ರೀ ಭೈರಣ್ಣವರ (151)  ವಾರ್ಡ ನಂ 6 : ಅಣ್ಣಪ್ಪ ಪಾಟೀಲ (301) ರಾಮಗೌಡಾ ಪಾಟೀಲ (97) ವಾರ್ಡ ನಂ 7 :  ರುಕ್ಷ್ಮೀಣಿ ಹಳಿಜೋಳ (384) ಮೀನಾಕ್ಷಿ ಮುತ್ನಾಳಿ (259), ವಾರ್ಡ ನಂ 8 :  ಭೀಮಪ್ಪಾ ಗೋರಖನಾಥ (224) ತಮ್ಮಣಗೌಡ ಪಾಟೀಲ (200) ವಾರ್ಡ ನಂ 9 : ಸಿದ್ದಲಿಂಗಪ್ಪ ಮುನ್ನೋಳಿ (369) ಬಸಗೌಡ ಪಾಟೀಲ (261) ವಾರ್ಡ ನಂ 10 :  ಸರಫರಾಜ ಮಕಾನದಾರ (296) ಆಲಮಶಾ ಮಕಾನದಾರ (116) ವಾರ್ಡ ನಂ 11 :  ಫರೀದಾ ಮುಲ್ಲಾ (317) ರೇಶ್ಮಾ ಮುಜಾವರ (233) ವಾರ್ಡ ನಂ 12 : ನನಿಮಾ ಮಕಾನದಾರ (233) ಜರೀನಾ ಮುಲ್ಲಾ (221) ವಾರ್ಡ ನಂ 13 :  ಇಮ್ರಾನ ಮೋಮಿನ (329), ಇಲಿಯಾಸ ಅತ್ತಾರ (170)  ವಾರ್ಡ ನಂ 14 :  ಸುರೇಖಾ ಗಳತಗಿಮಠ (326) ವಾಗ್ದೇವಿ ತಾರಳಿ (112) ವಾರ್ಡ ನಂ 15 : ಸದಾಶಿವ ಕರೆಪ್ಪಗೋಳ (430) ಉದಯ ಬಸ್ತವಾಡಕರ (268) ವಾರ್ಡ ನಂ 16 :  ಶಬಾನುಭಾನು ಡಾಲಾಯತ (268) ಜೈನುಬಿ ಮುಲ್ಲಾ (251)  ವಾರ್ಡ ನಂ 17 :  ಮಹಾಂತೇಶ ತಳವಾರ (232) ಗೋಪಿನಾಥ ಶಿಂಧೆ (202) ವಾರ್ಡ ನಂ 18 :  ರೇಖಾ ಚಿಕ್ಕೋಡಿ (264) ಪೂಜಾ ಏಣಗಿಮಠ (199)  ವಾರ್ಡ ನಂ 19 : ರುಬೀನಾ ಮೋಮಿನ (275) ಮುಶ್ರಫ ಕಾಜಿ (176) ವಾರ್ಡ ನಂ 20 :  ಚಂದ್ರಪ್ಪ ಮುತ್ನಾಳಿ (337) ರಾಜು ನಾಯಿಕ (168) ವಾರ್ಡ ನಂ 21 : ಶಿವಲಿಂಗಪ್ಪ ಗಂಧ (209) ನೀಲಕಂಠ ಕೋಲೆ (184)  ವಾರ್ಡ ನಂ 22 :  ಗೌಸ ಮೋಮಿನದಾದಾ (255)  ದಸ್ತಗೀರ ಕಾಜಿ (202) ವಾರ್ಡ ನಂ 23 : ಇಸ್ಮಾಯಿಲ ಗಜಬರ ಮುಲ್ಲಾ (309) ಉಸ್ಮಾನಗಣಿ ಬಾಗವಾನ (252)