ಪಿಕೆಪಿಎಸ್ ನೂತನ ಅಧ್ಯಕ್ಷ ಗುರುಸಂಗಪ್ಪ ಕಶೆಟ್ಟಿಗೆ ಸನ್ಮಾನ

Honors to new PKPS President Gurusangappa Kashetti

ತಾಳಿಕೋಟಿ 18: ಪಟ್ಟಣದ ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘ ಇದರ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಗುರಸಂಗಪ್ಪ ಕಶಟ್ಟಿ ಇವರನ್ನು ತಾಳಿಕೋಟಿ ಪಂಚಮಸಾಲಿ ಸಮಾಜದ ವತಿಯಿಂದ ಗುರುವಾರ ಸಂಜೆ ಸನ್ಮಾನಿಸಿ ಗೌರವಿಸಲಾಯಿತು.  

ಈ ಸಂದರ್ಭದಲ್ಲಿ ಪಂಚಮಸಾಲಿ ಸಮಾಜದ ತಾಲೂಕ ಅಧ್ಯಕ್ಷರಾದ ಡಾ.ವಿ.ಎಸ್‌.ಕಾರ್ಚಿ ಮಾತನಾಡಿ ನಮ್ಮ ಸಮಾಜದವರೇ ಆದ ಕಶೆಟ್ಟಿ ಅವರು ಪಟ್ಟಣದ ಸಹಕಾರಿ ಸಂಘಕ್ಕೆ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುವುದು ಸಂತಸದ ವಿಷಯ,ಆದರೆ ಇದನ್ನು ಅಧಿಕಾರವೆಂದು ಭಾವಿಸದೆ ಸೇವೆ ಮಾಡಲು ಸಿಕ್ಕಿರುವ ಅವಕಾಶ ಎಂದು ಭಾವಿಸಿ ಸಂಘದ ಅಭಿವೃದ್ಧಿಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದರು. ನೂತನ ಅಧ್ಯಕ್ಷ ಗುರುಸಂಗಪ್ಪ ಕಶಟ್ಟಿ ಸನ್ಮಾನ ಸ್ವೀಕರಿಸಿ ಮಾತನಾಡಿ ಸಂಘದ ಸದಸ್ಯರು ನನ್ನನ್ನು ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ ಅವರ ಸಹಕಾರ ಹಾಗೂ ತಮ್ಮೆಲ್ಲರ ಮಾರ್ಗ ದರ್ಶನದಲ್ಲಿ ನಾನು ಸಂಘದ ಅಭಿವೃದ್ಧಿಗೆ ಶಕ್ತಿಮೀರಿ ಪ್ರಯತ್ನಿಸುತ್ತೇನೆ ಎಂದರು. 

ಈ ಸಮಯದಲ್ಲಿ ಸಮಾಜದ ಮುಖಂಡರಾದ ಕಾಶಿನಾಥ ಮುರಾಳ, ಕಲ್ಲನಗೌಡ ಪಾಟೀಲ, ಭೀಮನಗೌಡ ಪಾಟೀಲ, ನಾಗಪ್ಪ ಚಿನಗುಡಿ, ಸಿದ್ದಲಿಂಗಪ್ಪ ಸರೂರ, ಮಲ್ಲು ಕೋರಿ, ರಾಮನಗೌಡ ಬಾಗೇವಾಡಿ, ಪಿ.ಬಿ.ಪಾಟೀಲ, ವೀರೇಶ ಬಾಗೇವಾಡಿ, ಪ್ರಭು ಬಿಳೆಭಾವಿ, ನಿಂಗಪ್ಪ ಕುಂಟೋಜಿ, ಅಶೋಕ ಪಾಟೀಲ, ಜಗದೀಶ ಬಿಳೆಭಾವಿ, ಪ್ರಕಾಶ ಸಾಸಬಾಳ, ಅಶೋಕ ಚಿನಗುಡಿ, ಮುತ್ತು ಕಶೆಟ್ಟಿ, ಅಪ್ಪುಗೌಡ ಪಾಟೀಲ, ಸುರೇಶ ಸರೂರ ಮತ್ತಿತರರು ಇದ್ದರು.