ಸಾಧನೆಗೆ ಸನ್ಮಾನ ಪ್ರೇರಣೆ ನೀಡುತ್ತದೆ: ಶಾಸಕ ರಾಜುಗೌಡ
Honors inspire achievement: MLA Rajugowda
ದೇವರಹಿಪ್ಪರಗಿ 04: ಪ್ರಶಸ್ತಿ ಅಭಿನಂದನೆ, ಸನ್ಮಾನ, ಸತ್ಕಾರಗಳು ವ್ಯಕ್ತಿಗೆ ಪ್ರೋತ್ಸಾಹಿಸುವುದರ ಜತೆಗೆ ಸಾಧನೆ ಮಾಡಲು, ಸಮಾಜ ಮುಖಿಯಾಗಲು ಪ್ರೇರಣೆ ನೀಡುತ್ತದೆ ಎಂದು ಶಾಸಕ ರಾಜುಗೌಡ ಪಾಟೀಲ ಕುದರಿಸಾಲವಾಡಗಿ ಹೇಳಿದರು.
ಪಟ್ಟಣದ ಸಮೃದ್ಧಿ ಸಹಕಾರ ಸಂಘದ ಆವರಣದಲ್ಲಿ ಬುಧವಾರದಂದು ಶಾಸಕರು ಹಾಗೂ ಸಂಘದ ವತಿಯಿಂದ ಆಯೋಜಿಸಿದ್ದ 2025-26ನೇ ಸಾಲಿನ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನಿಸಿ ಮಾತನಾಡಿದ ಅವರು, ಕಠಿಣ ಶ್ರಮ, ಶಿಸ್ತು ಹಾಗೂ ಸಾಮರ್ಥ್ಯದಿಂದ ಉತ್ತಮ ಸಾಧನೆ ಮಾಡಲು ಸಾಧ್ಯವಾಗಿದೆ. ನೀವೆಲ್ಲರೂ ನಿಮ್ಮಿಷ್ಟದ ಕ್ಷೇತ್ರವನ್ನು ಆಯ್ಕೆ ಮಾಡಿ, ನಿರಂತರ ಶ್ರಮ ಹಾಕಿಇಂತಹ ಸಾಧನೆ ಮಾಡಲು ಸಾಧ್ಯವಾಗಿದೆ, ತಾಲೂಕಿನ ಕೀರ್ತಿ ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಮಿಂಚುವಂತಾಗಲಿ ಎಂದು ಸಾಧಕರಿಗೆ ಶುಭ ಹಾರೈಸಿದರು.
ಸಮೃದ್ಧಿ ಸಹಕಾರ ಸಂಘದ ಅಧ್ಯಕ್ಷ ಸಂಗೀತ ಆರ್.ನಾಯಕ ಸಾಧಕರಿಗೆ ಸನ್ಮಾನ ಸಮಾಜಮುಖಿಯಾಗಿ ಕೆಲಸ ಮಾಡಲು ಇನ್ನಷ್ಟು ಸ್ಪೂರ್ತಿ ನೀಡಿದಂತಾಗುತ್ತದೆ ಸಮೃದ್ಧಿ ಸಹಕಾರ ಸಂಘದ ಆಡಳಿತ ಮಂಡಳಿಯ ಪರವಾಗಿ ಸಾಧಕರಿಗೆ ಶುಭ ಹಾರೈಸಿದರು. ಪ್ರಾಸ್ತಾವಿಕವಾಗಿ ಖ್ಯಾತ ವೈದ್ಯರು ಹಾಗೂ ಸಹಕಾರಿ ಕ್ಷೇತ್ರದ ದಿಗ್ಗಜರಾದ ಡಾ.ಆರ್.ಆರ್.ನಾಯಕ ಅವರು ಮಾತನಾಡಿ ಸಾಧಕರಿಗೆ ಶುಭ ಹಾರೈಸಿದರು.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಬಸಣ್ಣ ಕರಬಂಟನಾಳ, ಮಲ್ಲಿಕಾರ್ಜುನ ಪಟ್ಟಣಶೆಟ್ಟಿ ಹಾಗೂ ವಿವಿಧ ಕ್ಷೇತ್ರದ ಸಾಧಕರಾದ ಡಾ.ಸತೀಶ ನಾಡಗೌಡ, ಪಿ.ಎಸ್. ಮಿಂಚನಾಳ, ಗುರುನಾಥ ಮುರಡಿ, ಸಂಗಪ್ಪ ತಡವಲಗಾ, ಗೊಲ್ಲಾಳ ಹಿಟ್ನಳ್ಳಿ, ಸುನೀಲ ಕನಮಡಿ, ಕಾಶಿನಾಥ ತಳಕೇರಿ, ಪ್ರಕಾಶ ಮಲ್ಹಾರಿ, ನಾಗರಾಜ ಸಂಗಣ್ಣವರ, ಬಸಣ್ಣ ದೇವಣಗಾಂವ, ಅವಿನಾಶ ತಳಕೇರಿ ಸೇರಿದಂತೆ ಹಲವಾರು ಮುಖಂಡರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಮೃದ್ಧಿ ಸಹಕಾರ ಸಂಘದ ಉಪಾಧ್ಯಕ್ಷ ರಿಯಾಜ ಅಹ್ಮದ್ ತಾಂಬೋಳಿ, ಆಡಳಿತ ಮಂಡಳಿಯ ಪದಾಧಿಕಾರಿಗಳಾದ ಪ್ರಭುದೇವ ಹಿರೇಮಠ, ಮಂಜುನಾಥ ಒಂಟೆತ್ತಿನ, ಕೆ.ಎಸ್.ಕೋರಿ, ಬಸಪ್ಪ ಬಬಲೇಶ್ವರ, ಅಮರನಾಥ ಹಿರೇಮಠ, ವೆಂಕಟೇಶ ಕುಲಕರ್ಣಿ, ಉಮೇಶ ಹಳಪಾಣಿ, ಗುರುಲಿಂಗಪ್ಪ ಕರಭಂಟನಾಳ, ಸುಭಾಸ ಜಾಧವ್, ಶಕುಂತಲಾ ಬಿರಾದಾರ, ಪ್ರಭಾರಿ ಸಿಇಒ ಬಸವರಾಜ ಸಜ್ಜನ್ ಸೇರಿದಂತೆ ಪಟ್ಟಣದ ಪ್ರಮುಖರು, ಗಣ್ಯರು ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 