ಮೇ ಸಾಹಿತ್ಯ ಮೇಳ ಬಳಗದಿಂದ ಕೊಪ್ಪಳದಲ್ಲಿ ಎಸ್ಐಆರ್ ಕುರಿತು ಬೃಹತ್ ಜಾಗೃತಿ ಕಾರ್ಯಕ್ರಮ
May Literary Festival Group organizes a massive awareness program on SIR in Koppal
ಕೊಪ್ಪಳ 30: ಕೇಂದ್ರ ಚುನಾವಣಾ ಆಯೋಗ ನಿಗದಿಪಡಿಸಿರುವ ಎಸ್ಐಆರ್ ಮತದಾರರ ವಿಶೇಷ ಪರಿಷ್ಕರಣೆ ಕಾರ್ಯಕ್ರಮ ನೆಪದಲ್ಲಿ ಅಹಿಂದ ವರ್ಗದ ಜನರ ಮತದಾರರ ಹಕ್ಕು ಕಿತ್ತುಕೊಳ್ಳುವ ಹೊನ್ನಾರ ದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸದುದ್ದೇಶ ದಿಂದ ಮೇ 2 ರ ಶನಿವಾರ ಮಧ್ಯಾಹ್ನ 3:30 ಗಂಟೆಗೆ ನಗರದ ಸಾಹಿತ್ಯ ಭವನದಲ್ಲಿ ಮೇ ಸಾಹಿತ್ಯ ಮೇಳ ಕೊಪ್ಪಳ ಬಳಗದ ವತಿಯಿಂದ ಎಸ್ಐಆರ್ ಜಾಗೃತಿ ಬೃಹತ್ ಸಮಾವೇಶ ಜರುಗಲಿದೆ ಎಂದು ಕಾರ್ಯಕ್ರಮ ಸಂಘಟಕ ಹೋರಾಟಗಾರ ಟಿ ರತ್ನಾಕರ್ ತಿಳಿಸಿದ್ದಾರೆ, ಅವರು ಗುರುವಾರ ನಗರದ ಪತ್ರಿಕಾ ಭವನದಲ್ಲಿ ಏರಿ್ಡಸಿದ ಸುದ್ದಿಗೋಷ್ಠಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿ ಈ ಕುರಿತು ಹೇಳಿಕೆ ನೀಡಿದ ಅವರು ಕಾರ್ಯಕ್ರಮದಲ್ಲಿ ಜನರಿಗೆ ವಿಶೇಷ ಜಾಗೃತಿ ನೀಡಲು ಹಿರಿಯ ಹೋರಾಟಗಾರ ಚಿಂತಕ ಶಿವಸುಂದರ್ ರವರು ವಿಶೇಷ ಉಪನ್ಯಾಸ ನೀಡಲಿದ್ದಾರೆ, ಇನ್ನೋರ್ವ ಹಿರಿಯ ಸಾಹಿತಿ ಹೋರಾಟಗಾರ ಚಿಂತಕ ಕೊಂ ವೀರಭದ್ರ್ಪ ರವರು ಅಧ್ಯಕ್ಷತೆ ವಹಿಸಲಿದ್ದಾರೆ ಇನ್ನು ಅನೇಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಎಂದು ಸಂಘಟಕರಾದ ಟಿ ರತ್ನಾಕರ್ ಅವರು ವಿವರಿಸಿದರು, ಕೇಂದ್ರ ದ ಕೋಮುವಾದಿ ಸರ್ಕಾರ ದಲಿತ ಸಮುದಾಯ ಆದಿವಾಸಿ ಜನಾಂಗ ಮತ್ತು ವಿಶೇಷವಾಗಿ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದವರನ್ನು ಚುನಾವಣೆ ಪ್ರಕ್ರಿಯೆಯಿಂದ ದೂರ ಇಡಲು ಅವರ ಹೆಸರನ್ನು ಮತದಾರರ ಪಟ್ಟಿಯಿಂದ ಹೊರಗಿಡಲು ಇದೊಂದು ದೊಡ್ಡ ಕುತಂತ್ರ ನಡೆದಿದೆ ಇದರ ಬಗ್ಗೆ ಸಾಮಾನ್ಯ ಜನರಲ್ಲಿ ಜಾಗೃತಿ ಮೂಡಿಸಲೂ ಈ ಬೃಹತ್ ಸಮಾವೇಶ ನಡೆಯಲಿದೆ ಸಾಮಾನ್ಯ ಜನರು ಸಾರ್ವಜನಿಕರು ದಲಿತ ಮತ್ತು ಅಲ್ಪಸಂಖ್ಯಾತ ಸಮುದಾಯದ ಸಂಘಟನೆಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯ ಕ್ರಮ ಯಶಸ್ವಿಗೊಳಿಸಬೇಕೆಂದು ಟಿ, ರತ್ನಾಕರ್ ಹೇಳಿದರು, ಪತ್ರಿಕಾಗೋಷ್ಠಿಯಲ್ಲಿ ದಲಿತ ಮುಖಂಡ ಹೋರಾಟಗಾರ ಸುಖರಾಜ್ ತಾಳಿಕೇರಿ, ಎಸ್ ಏ ಗಫಾರ್, ಫಾಸ್ಟರ್ ಅಸೋಸಿಯೇಷೇನ ಜಿಲ್ಲಾಧ್ಯಕ್ಷ ಚೆನ್ನಬಸಪ್ಪ ಅಪಣ್ಣವರ್, ವೆಲ್ಫೇರ್ ಪಾರ್ಟಿ ಮಹಿಳಾ ಘಟಕದ ರಾಜ್ಯ ಅಧ್ಯಕ್ಷರಾದ ಸಬಿಯ ಪಟೇಲ್, ಭೀಮಪ್ಪ ಹವಳೇ ಸೇರಿದಂತೆ ಅನೇಕರು ಉಪಸ್ಥಿತರಿದ್ದರು,
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 