ಸೇವೆ ಸಲ್ಲಿಸುವವರಿಗೆ ಸತ್ಕರಿಸುವುದು ಸೌಜನ್ಯತೆ: ಪವಾರ

ಲೋಕದರ್ಶನವರದಿ

ಚನ್ನಮ್ಮನ ಕಿತ್ತೂರ 16; ರಾಜ್ಯದಲ್ಲಿ ಲಾಕ್ಡೌನ್ ಹಿನ್ನೆಲೆಯಲ್ಲಿ ಹನುಮಂತ ಕೊಟಬಾಗಿ ಅವರು ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಕೊರೊನಾ ವಾರಿಯರ್ರ್ಸಗೆ ನಿರಂತರ ಉಪಹಾರ ಹಾಗೂ ಅನ್ನದಾಸೋಹ ವ್ಯವಸ್ಥೆ ಮಾಡಿದ ಕಾರ್ಯ ಶ್ಲಾಘನೀಯ ಎಂದು ಬೆಳಗಾವಿಯ ಲೋಕೋಪಯೋಗಿ ಇಲಾಖೆಯ ಎಸ್ ಇ, ಬಿ ವಾಯ್ ಪವಾರ ಹೇಳಿದರು.

ಸ್ಥಳೀಯ ವಿಠ್ಠಲ ದೇವಸ್ಥಾನದಲ್ಲಿ ಲಾಕ್ಡೌನ ಸಂದರ್ಭದಲ್ಲಿ ಕೊರೊನಾ ವಾರಿಯರ್ಸಗೆ ಉಟೋಪಚಾರ ವ್ಯವಸ್ಥೆಯಲ್ಲಿ ಸೇವೆ ಸಲ್ಲಿಸಿದವರಿಗೆ ಸತ್ಕರಿಸಿ ಮಾತನಾಡಿದ ಅವರು, ದೇಶ ಲಾಕ್ಡೌನ್ ಆದ ದಿವಸದಿಂದ ಮೇ 17 ರವರೆಗೆ ಕೊರೊನಾ ವಾರಿಯರ್ಸಗಳಿಗೆ ಒಳ್ಳೆಯ ಬಗೆ ಬಗೆಯ ಉಟೋಪಚಾರವನ್ನು ಮಾಡಿದ್ದಾರೆ. ಕೊಟಬಾಗಿಯವರು ಅಡುಗೆ ಕೆಲಸ ಮಾಡುವರಿಗೆ ಬೇಕಾಗುವ ಎಲ್ಲ ಸಾಮಗ್ರಿಗಳನ್ನು ಒದಗಿಸಿದರೂ ತಿಂಗಳು ಗಟ್ಟಲೆ ಸಮಯಕ್ಕೆ ಸರಿಯಾಗಿ ಸ್ಪಂದಿಸಿ ಸೇವೆ ಸಲ್ಲಿಸುವವರಿಗೆ ಸತ್ಕರಿಸುವುದು ಸೌಜನ್ಯತೆ ಎಂದರು. 

ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಹನುಮಂತ ಕೊಟಬಾಗಿ ಮಾತನಾಡಿ, ಕೋರೊನಾ ವೈರಸ್ ಹರಡದಂತೆ ಮುಂಜಾಗ್ರತೆ ಕ್ರಮವನ್ನು ಕೈಗೊಳ್ಳಲು ಬಂದಂತ ಎಲ್ಲ ಅಧಿಕಾರಿಗಳಿಗೆ ಉಪಹಾರ ಮತ್ತು ಊಟದ ಕೆಲಸಕ್ಕೆ ಶ್ರಮಿಸಿದ ಎಲ್ಲರ ಪ್ರಾತ್ರ ಮುಖ್ಯವಾಗಿದೆ ಎಂದರು. ಹೇಳಿದರು.ಬಳಿಕ ಬಾಬು ಶೀರೊಮನಿ, ಈರಣ್ಣಾ ಪುಜೇರ, ವಾಸು ಚವ್ಹಾನ ಇವರನ್ನು ಸತ್ಕರಿಸಲಾಯಿತು. 

ಬೆಳಗಾವಿಯ ಲೋಕೋಪಯೋಗಿಯ ಇಲಾಖೆ ಇ ಇ ಸಂಜೀವಕುಮಾರ ಹುಲಕಾಯಿ, ಸ್ಥಳೀಯ ಎ ಇಇ ವ್ಹಿ ಎಸ್ ಆನಿಕಿವಿ, ಎ ಎಸ್ ಐ  ಜಿ ಜಿ ಹಂಪನ್ನವರ, ಮುಖ್ಯಪೇದೆ ಶೇಖರ ಜವಳಿ, ಕೃಷ್ಣಾ ಕೊಟಬಾಗಿ, ಶಿವಾನಂದ ಜಕಾತಿ, ಸುಧನ್ವ ಕೊಟಬಾಗಿ, ರಾಮು ಡವಳೆ, ಸೇರಿದಂತೆ ಹಲವರು ಉಪಸ್ಥಿತರಿದ್ದರು.