ಪ್ರೊ ಎಂ.ಸಿ.ಕೋಟಿಗೆ ಸನ್ಮಾನ
Honored for Prof. M.C. Koti
ಹುಬ್ಬಳ್ಳಿ 30: ರಾಷ್ಟ್ರೀಯ ಗಣಿತ ದಿನ, ವಿಶ್ವದ ಶ್ರೇಷ್ಠ ಭಾರತೀಯ ಗಣಿತ ತಜ್ಞರಾದ ಪ್ರೊ ಶ್ರೀನಿವಾಸ ರಾಮಾನುಜನ್ ಅವರ ಜನ್ಮದಿನ ಅಂಗವಾಗಿ ಕೆ.ಎಲ್.ಇ ಸಂಸ್ಥೆಯಲ್ಲಿ ಮೂರು ದಶಕಗಳ ಕಾಲ ಶಿಕ್ಷಕರಾಗಿ ಗಣಿತ ವಿಷಯದಲ್ಲಿ ಭೋಧನೆ ಮಾಡಿದ ಅಪಾರ ಜ್ಞಾನವುಳ್ಳ, ನುರಿತ ಶ್ರೇಷ್ಠ ಪ್ರಾಧ್ಯಾಪಕರು, ಪ್ರೊ ಎಂ.ಸಿ.ಕೋಟಿ ಅವರನ್ನು ಭೇಟಿ ಮಾಡಿದ ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಸದಸ್ಯರು ಪ್ರೊ ಎಂ.ಸಿ.ಕೋಟಿ ಅವರಿಗೆ ಶಾಲು, ಮಾಲಾರೆ್ಣ ಮಾಡಿ, ಗ್ರಂಥಗಳನ್ನು ನೀಡಿ ಗೌರವ ಪೂರ್ವಕವಾಗಿ ಶ್ರದ್ಧಾ ಭಕ್ತಿಯಿಂದ ನಮನಗಳನ್ನು ಸಲ್ಲಿಸಿದರು. ರಾಷ್ಟ್ರೀಯ ಗಣಿತ ದಿನ ಶುಭಾಶಯಗಳನ್ನು ಕೋರಿದರು.
ಪ್ರೊ ಅನುರಾಧಾ ಎಂ .ಕೋಟಿ, ಸುಜಯ ಸುರೇಶ ಹೊರಕೇರಿ, ಸೋಹನ ಸುರೇಶ ಹೊರಕೇರಿ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಅಧ್ಯಕ್ಷರು, ಸಾಹಿತಿ ಪ್ರೊ ಎಸ್.ಎಂ.ಸಾತ್ಮಾರ, ಉಪಾಧ್ಯಕ್ಷ ಚನ್ನಬಸಪ್ಪ ಧಾರವಾಡಶೆಟ್ಟರ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ್ಯದರ್ಶಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್ನ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ, ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ ಅವರು ಸ್ವಾಗತಿಸಿ, ನಿರೂಪಿಸಿದರು. ವಿಶ್ವದ ಶ್ರೇಷ್ಠ ಭಾರತೀಯ ಗಣಿತ ತಜ್ಞರಾದ ಪ್ರೊ ಶ್ರೀನಿವಾಸ ರಾಮಾನುಜನ್ ಅವರು ಗಣಿತ ವಿಷಯದಲ್ಲಿ ಮಾಡಿದ ಸಾಧನೆಗಳನ್ನು ಸ್ಮರಿಸಿದರು. ಅವರಿಗೆ ಶತಕೋಟಿ ನಮನಗಳನ್ನು ಸಲ್ಲಿಸಿದರು.
ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ ಅವರು ಮಾತನಾಡಿ ಪ್ರೊ ಎಂ.ಸಿ.ಕೋಟಿ ಸರ್ ಅವರು ಕೆ.ಎಲ್.ಇ ಸಂಸ್ಥೆಯ ಪಿ.ಸಿ.ಜಾಬಿನ್ ವಿಜ್ಙಾನ ಮಹಾವಿದ್ಯಾಲಯದಲ್ಲಿ 26 ವರ್ಷಗಳ ಕಾಲ ಸುದೀರ್ಘ ಗಣಿತ ಶಿಕ್ಷಕರಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ಗಣಿತ ವಿಷಯದಲ್ಲಿ ಪರಿಣತಿ ಹೊಂದಲು ಮಾರ್ಗದರ್ಶನ ಮಾಡಿದ್ದಾರೆ. ನಾನು ಬಿ.ಎಸ್ಸಿ ಕಲಿಯುವ ಸಂದರ್ಭದಲ್ಲಿ ಅವರ ವಿದ್ಯಾರ್ಥಿ ಆಗಿದ್ದೆ ಎಂದು ಸ್ಮರಣೆ ಮಾಡಿದರು. ಹಿರಿಯರು, ಮಾರ್ಗದರ್ಶಕರು, ಹಿತೈಸಿಗಳಾದ ಪ್ರೊ ಎಂ.ಸಿ.ಕೋಟಿ ಸರ್ ಅವರು ಈಗ 75ನೇ ವರ್ಷಕ್ಕೆ ಕಾಲಿಡುವ ಹಂತದಲ್ಲಿದ್ದಾರೆ. ಸರ್ ಅವರಿಗೆ ಪರಮಾತ್ಮ ಇನ್ನೂ ಹೆಚ್ಚಿನ ಆರೋಗ್ಯ ಭಾಗ್ಯ ಕರುಣಿಸಲಿ ಎಂದು ಪ್ರಾರ್ಥಿಸಿದ್ದಾರೆ. ಸರ್ ಅವರಿಗೆ ಶುಭ ಕೋರಿದ್ದಾರೆ. ಗಣಿತಶಾಸ್ತ್ರವು ರಾಷ್ಟ್ರೀಯ ಅಭಿವೃದ್ದಿ, ತಂತ್ರಜ್ಞಾನ ಪ್ರಗತಿ, ಆರ್ಥಿಕ ಸೇರಿದಂತೆ ಮುಂತಾದ ಹಲವಾರು ಕ್ಷೇತ್ರಗಳ ಯೋಜನೆಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದೆ. ಇಂದಿನ ಡಿಜಿಟಲ್ ಸಂದರ್ಭದಲ್ಲಿಯು ದತ್ತಾಂಶ ವಿಶ್ಲೇಷಣೆ, ಕೃತಕ ಬುದ್ದಿಮತ್ತೆ, ಅಂತರಿಕ್ಷ ಸಂಶೋಧನೆ ಹಾಗೂ ಸೈಬರ್ ಭದ್ರತೆ ಒಳಗೊಂಡಂತೆ ಎಲ್ಲ ಕ್ಷೇತ್ರಗಳೂ ಗಣಿತಶಾಸ್ತ್ರದ ಮೇಲೇಯೇ ಅವಲಂಬಿತವಾಗಿವೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 