ಲೋಕದರ್ಶನ ವರದಿ
ಶಿಗ್ಗಾವಿ 07: ಶಿಕ್ಷಕ ಸರದಿ ಸವಾಲುಗಳನ್ನು ಎದುರಿಸಿದಾಗ ಮಾತ್ರ ಅವನೊಬ್ಬ ಆದರ್ಶ ಶಿಕ್ಷಕನಾಗಲು ಸಾದ್ಯವಿದೆ, ಆ ಎದುರಿಸಿದ ಸವಾಲಿನ ಘಟನೆಗಳು ಮುಂದೋಂದು ದಿನ ಜೀವನವನ್ನೆ ವಿಶೇಷ ರೀತಿಯಲ್ಲಿ ರೂಪಿಸುತ್ತವೆ ಎಂದು ಧಾರವಾಡ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹ ನಿದರ್ೇಶಕರಾದ ಬಿ ಕೆ ಎಸ್ ವರ್ಧನ ಹೇಳಿದರು.
ಪಟ್ಟಣದ ಗುರುಭವನದಲ್ಲಿ ಡಾ. ಎಚ್ ಎಫ್ ಕಟ್ಟಿಮನಿ ಫ್ರೌಢ ಶಿಕ್ಷಣ ಪ್ರತಿಷ್ಠಾನ, ಆಯುಕ್ತರ ಕಛೇರಿ, ಸಾರ್ವಜನಿಕ ಶಿಕ್ಷಣ ಇಲಾಖೆ ದಾರವಾಡ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಲಯ ಶಿಗ್ಗಾವಿ ಇವರ ಸಹಯೋಗದಲ್ಲಿ ಹಮ್ಮಿಕೊಂಡ "ಶಿಕ್ಷಣ ಪರಿಶ್ರಮ ಹಿರಿಮೆಗೆ ಗೌರವ" ಎಂಬ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ಸುಂದರ ಜಗತ್ತಿನಲ್ಲಿ ಅನುಭವಿಸುವುದು ಬಹಳ ಇದೆ ಆ ಅನುಭವಿಸುವಿಕೆಗೆ ಕೊನೆಯೂ ಇಲ್ಲ ಅದನ್ನು ನಾವು ಹೊತ್ತು ಒಯ್ಯಲು ಸಾದ್ಯವಿಲ್ಲ ಅದನ್ನು ಮಕ್ಕಳಿಗೆ ಧಾರೆ ಎರೆದರೆ ನಮ್ಮ ಜೀವನ ಸಾರ್ಥಕ ಜೊತೆಗೆ ಆ ಮಕ್ಕಳೋಂದಿಗೆ ನಮ್ಮ ಶಿಕ್ಷಕರ ಜೀವನವೂ ಸಾರ್ಥಕವಾಗುತ್ತದೆ ಎಂದರು.
ನಮ್ಮ ಶಿಕ್ಷಕರು ಯೋಜನೆ ಮತ್ತು ನಡತೆಯಲ್ಲಿ ಬದಲಾವಣೆ ಕಂಡುಕೊಳ್ಳಬೇಕಿದೆ, ಅದೇ ರೀತಿ ಶಿಕ್ಷಕರಲ್ಲಿ ಗಮನಾರ್ಹ ಗುಣಗಳುಳ್ಳ ಶಿಕ್ಷಕರೂ ಇದ್ದಾರೆ ಆದರೆ ಆ ಗುಣಗಳನ್ನು ಮಕ್ಕಳಲ್ಲಿ ಸರಿಯಾದ ರೀತಿಯಲ್ಲಿ ತಿಳಿಸಿಕೊಡುತ್ತಿಲ್ಲ ಎಂದು ವಿಷಾಧಿಸಿದ ಅವರು ಗುರುವಾದವರು ಸಮರ್ಪಣಾ ಮನೋಭಾವನೆ ಇರಬೇಕು, ಕಲಿಸುವಿಕೆಯಲ್ಲಿ ಅನುಭವಿಸುವಿಕೆಯ ಗುಣವುಳ್ಳವರಾಗಿರಬೇಕು ಮಕ್ಕಳು ಈ ದೇಶದ ಮುಂದಿನ ಆಸ್ತಿ, ಆ ಮಕ್ಕಳ ಮನೋಭಾವನೆಗೆ ತಕ್ಕಂತೆ ಪಾಠ ಮಾಡಿದಾಗ ಮಾತ್ರ ಶಿಕ್ಷಕ ಯಶಸ್ವಿಯಾಗಲು ಸಾದ್ಯವಿದೆ ಶಿಕ್ಷಕ ವೃತ್ತಿ ಮಾಡಲು ಹುದ್ದೆ ಮುಖ್ಯವಲ್ಲ ಬದಲಾಗಿ ಕಲಿಸುವ ಮನಸ್ಸು ಇರಬೇಕು ಎಂದು ಕಿವಿ ಮಾತು ಹೇಳಿದರು.
ಭರತ ಸೇವಾ ಸಂಸ್ಥೆಯ ಅದ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಮಾತನಾಡಿ, ನಾವು ಹುಟ್ಟಿದ ಮೇಲೆ ಸಮಾಜಕ್ಕೆ ಏನಾದರೂ ಕೊಡುಗೆಯನ್ನು ನೀಡುವಂತವರಾಗಿರಬೇಕು, ಪ್ರತಿಯೋಬ್ಬರಲ್ಲಿ ಒಂದೋಂದು ಸಾಮಥ್ರ್ಯ ಅಡಗಿರುತ್ತದೆ ಅದು ಅವರ ವಿವೇಚನೆಯ ಮೇಲೆ ಅವಲಂಬನೆಯಾಗಿರುತ್ತದೆ, ಮಕ್ಕಳಿಗೆ ಸಾಧನೆ ಮಾಡುವ ಗುಣವನ್ನು ಶಿಕ್ಷಕರು ಹೇಳಿದಾಗ ಅವರಿಗೆ ಅರಿವಿಲ್ಲದೆಯೇ ಆ ಶಿಕ್ಷಕ ಎತ್ತರದ ಮಟ್ಟಕ್ಕೆ ಬೆಳೆದು ನಿಂತಿರುತ್ತಾರೆ ಅಂಥ ಶಿಕ್ಷಕರನ್ನು ಇಂದು ನಾವು ಸ್ಮರಿಸುತ್ತಿದ್ದೇವೆ ಎಂದರು.
ಧಾರವಾಡದ ನಿವೃತ್ತ ಸಹ ನಿದರ್ೇಶಕ ಶಿವಶಂಕರ ಹಿರೇಮಠ ಮಾತನಾಡಿದರು, ಅದ್ಯಕ್ಷತೆಯನ್ನು ಕಟ್ಟಿಮನಿ ಪ್ರತಿಷ್ಟಾನ ಗೌರವ ಸಂಚಾಲಕರಾದ ಎಸ್ ಬಿ ಕೊಡ್ಲಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಉತ್ತಮ ಶಿಕ್ಷಕರನ್ನು ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಶಿವಾನಂದ ಹೆಳವರ, ಕ್ಷೇತ್ರ ಸಮನ್ವಯಾಧಿಕಾರಿ ಮಂಜುಳಾ ಚಂದ್ರಗಿರಿ, ಐ ಆರ್ ಬಳ್ಳಾರಿ, ಡಿ ಪಿ ಕರೂರ ಸೇರಿದಂತೆ ತರಾಲೂಕಿನ ಶಿಕ್ಷಕರು ಮತ್ತು ವಿದ್ಯಾಥರ್ಿಗಳು ಹಾಜರಿದ್ದರು, ಶಿಕ್ಷಕ ರಫಿಕಸಾ ಮೀರಾನಾಯಕ ಸ್ವಾಗತಿಸಿದದರು, ಶಿಕ್ಷಕ ಗುರುರಾಜ ಹುಚ್ಚಣ್ಣವರ ನಿರೂಪಿಸಿ ವಂದಿಸಿದರು.