ಡಿವೈಪಿಸಿ ಕಛೇರಿಯಲ್ಲಿ ಸನ್ಮಾನ ಕಾರ್ಯಕ್ರಮ


ಬಳ್ಳಾರಿ01: ಕಳೆದ ದಿನ ಡಿ.ವೈ.ಪಿ.ಸಿ ಕಛೇರಿಯ ಸಭಾಂಗಣದಲ್ಲಿ, ಕಛೇರಿಯ ಉಪನಿದರ್ೇಶಕರಾದ ಶ್ರೀಧರನ್ ಹಾಗೂ ಶ್ರೀನಿವಾಸ ಮೂತರ್ಿ ಇವರ ನೇತೃತ್ವದಲ್ಲಿ ಸೇವೆಯಲ್ಲಿ ನಿವೃತ್ತಿಯಾದವರಿಗೆ ಸನ್ಮಾನ, ಸ್ವಾಗತ ಹಾಗೂ ಬೀಳ್ಕೋಡುಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಸುಧೀರ್ಘ ಸೇವೆ ಸಲ್ಲಿಸಿ ನಿವೃತ್ತಿಯನ್ನು ಹೊಂದಿದ ವಿಷಯ ಪರಿವೀಕ್ಷಕರಾದ ಪುಟ್ಟಯ್ಯ ಇವರಿಗೆ ಸನ್ಮಾನ ಮಾಡಲಾಯಿತು. ವಿಷಯ ಪರಿವೀಕ್ಷಕರಾಗಿ ವಗರ್ಾವಣೆಗೊಂಡ ಹುಲಿಬಂಡಿ, ರಾಮಸ್ವಾಮಿ, ಸಿರಿಯಲ್ ಸಾಜರ್ೆಂಟ್, ಎಪಿಸಿ ಗಳಾದ ಖಾಸಿಂವಲಿ, ವೀರೇಶಪ್ಪ  ಇವರಿಗೆ  ಬೀಳ್ಕೊಡುಗೆ ಹಾಗೂ ವಿಷಯ ಪರಿವೀಕ್ಷಕರಾಗಿ ಆಗಮಿಸಿದ  ಎ.ಕೆ.ಸತ್ಯನಾರಾಯಣ(ಕನ್ನಡ), ಮತ್ತು ವೀರೇಶಪ್ಪ(ಸಮಾಜ ವಿಜ್ಞಾನ) ಇವರಿಗೆ ಸ್ವಾಗತ ಕಾರ್ಯಕ್ರಮವನ್ನು ಕಛೇರಿಯ ಸಿಬ್ಬಂದಿ ವತಿಯಿಂದ, ಸಂಘ-ಸಂಸ್ಥೆ ಹಾಗೂ ಅಭಿಮಾನಿ ಬಳಗದಿಂದ ಸನ್ಮಾನಿಸಲಾಯಿತು.

ಸಭೆಯಲ್ಲಿ ಆದರ್ಶ ವಿದ್ಯಾಲಯದ ಪ್ರಾಂಶುಪಾಲ ಕೆ.ಜಿ ಆಂಜನೇಯ ಸರಕಾರಿ ನೌಕರರ ಸಂಘದ ಅಧ್ಯಕ್ಷರಾದ ಡಾ. ಎಂ.ಡಿ.ಮಲ್ಲೇಶ್, ದೈ.ಶಿ ಜಿಲ್ಲಾ ಅಧೀಕ್ಷಕರಾದ ರಹಮತುಲ್ಲಾ ಹಾಗೂ ಎಲ್ಲ ಸಂಘ-ಸಂಸ್ಥೆಗಳ ಸಿಬ್ಬಂದಿ ವರ್ಗದವರು ಹಾಜರಾಗಿದ್ದರು.