ಪ್ರಾಚಾರ್ಯ ನಾಗರಾಜಗೆ ಗೌರವ ಡಾಕ್ಟರೇಟ್

ಶಿಗ್ಗಾವಿ೦೫ : ಮುಂಬಯಿನ ಡಾ. ರಾಧಾಕೃಷ್ಣನ್ ಟೀಚರ್ಸ್ ವೆಲ್ಫೇರ್ ಆಶೋಷಿಯೇಷನ್ ಸಹಯೋಗದಲ್ಲಿ ಯುನಿವಸರ್ಿಟಿ ಆಫ್ ಸೆಂಟ್ರಲ್ ಅಮೇರಿಕಾ ದಿಂದ ಶಿಕ್ಷಣ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದವರನ್ನು ಗುರುತಿಸಿ ನೀಡಲಾಗುವ ಗೌರವ ಡಾಕ್ಟರೇಟ್ ಪ್ರಶಸ್ತಿಯನ್ನು ಪಟ್ಟಣದ ಶ್ರೀ ಚನ್ನಪ್ಪ ಕುನ್ನೂರ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ನಾಗರಾಜ ದ್ಯಾಮನಕೊಪ್ಪ ಅವರಿಗೆ ನೀಡಿ ಗೌರವಿಸಲಾಗಿದೆ ಕಳೆದ 25 ವರ್ಷಗಳಿಂದ ಅತ್ಯುತ್ತಮ ಪ್ರಾಚಾರ್ಯರಾಗಿ ಸಲ್ಲಿಸಿದ ಇವರ ಸೇವೆಯನ್ನು ಪರಿಗಣಿಸಿ ಹಾವೇರಿ ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್ ಸಿ ಫೀರಜಾದೆ ಇವರ ಶಿಪಾರಸ್ಸಿನ ಮೇರೆಗೆ ಪ್ರಾ. ನಾಗರಾಜ ದ್ಯಾಮನಕೊಪ್ಪ ಅವರನ್ನು ಗೌರವ ಡಾಕ್ಟರೇಟ್ ಗೌರವಕ್ಕೆ ಪರಿಗಣಿಸಲಾಗಿದೆ. ಪೆಬ್ರುವರಿ 26 ರಂದು ಮುಂಬಯಿನ ರೆನೆಶಿಯನ್ಸ್ ಕನ್ವೇನ್ಶನ್ ಸೆಂಟರ್ ನಲ್ಲಿ ನಡೆಯುವ ಘಟಿಕೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು.