ಪುರಸಭೆ ಅಧ್ಯಕ್ಷರಿಗೆ ಗೌರವ ಡಾಕ್ಟರೇಟ್ ಪದವಿ
ಬ್ಯಾಡಗಿ 05: ಮಾಜಿ ಶಾಸಕ ಸುರೇಶ್ ಗೌಡ ಪಾಟೀಲ್ ಅವರ ದ್ವಿತೀಯ ಪುತ್ರ ಹಾಗೂ ಪಟ್ಟಣದ ಪುರಸಭೆಯ ಅಧ್ಯಕ್ಷರಾದ ಬಾಲಚಂದ್ರ ಗೌಡ ಪಾಟೀಲ್ ಅವರಿಗೆ ಪ್ರತಿಷ್ಠಿತ ಅಮೇರಿಕಾ ಇಂಟರ್ನ್ಯಾಷನಲ್ ಯೂನಿವರ್ಸಿಟಿ (ಯು ಎಸ್ ಎ ಯು ಜಿ ಪಿ)ಅವರು ಗೌರವ ಡಾಕ್ಟರ್ ಪದವಿ ನೀಡಿ ಗೌರವಿಸಿದ್ದಾರೆ ತಾಲೂಕಿನಲ್ಲಿ ಬಾಲಚಂದ್ರ ಗೌಡ ಯುವ ಸೇನೆ ಮೂಲಕ ಸಾಕಷ್ಟು ಸಾಮಾಜಿಕ ಕಾರ್ಯ ಸೇವೆಗಳನ್ನು ಗುರುತಿಸಿ ದೆಹಲಿಯ ಗಾಲಿ ಅಡಿಟೋರಿಯಂ ಹಾಲಲ್ಲಿ ನಡೆದ ಸಮಾರಂಭದಲ್ಲಿ ಗೌರವ ಡಾಕ್ಟರೇಟ್ ಪ್ರಧಾನ ಮಾಡಲಾಗಿದೆ. ಪ್ರಶಸ್ತಿಗೆ ಭಾಜನರಾದ ಅಧ್ಯಕ್ಷರಾದ ಬಾಲಚಂದ್ರ ಗೌಡ ಪಾಟೀಲ್ ಅವರಿಗೆ ಪುರಸಭೆಯ ಎಲ್ಲಾ ಆಡಳಿತ ಸಿಬ್ಬಂದಿಗಳು ಮುಖ್ಯಾಧಿಕಾರಿಗಳು ಅಧಿಕಾರಿಗಳು ಹಾಗೂ ಪುರಸಭೆ ಸದಸ್ಯರುಗಳು ಶುಭ ಹಾರೈಸಿದ್ದಾರೆ