ಲೋಕದರ್ಶನವರದಿ
ಮಹಾಲಿಂಗಪುರ : ರಾಜಕಾರಣಿಗಲು ಬರಿ ಕೆವಲ ರಾಜಕಾರಣಿಗಳನ್ನು ಸನ್ಮಾನ ಮಾಡುವುದಕ್ಕೆ ಸೀಮಿತರಾಗಿರದೆ. ನಾಡಿನ ಗೌರವವನ್ನು ಹೆಚ್ಚಿಸಿರತಕ್ಕಂತ ಕಲೆ,ಸಂಗೀತ,ಜಾನಪದ, ಸಾಹಿತ್ಯ,ಸಂಸ್ಕೃತಿಗಳಲ್ಲಿ ಗುರುತಿಸಿಕೊಂಡು ಜನಪ್ರೀಯತೆಯನ್ನು ಪಡೆದು ಹಲವು ಪದವಿಗಳನ್ನು ಪಡೆದವರನ್ನು ಸತ್ಕರಿಸುವುದು ನಮ್ಮ ಕಾಂಗ್ರೆಸ್ನ ಇರಬೇಕು ಎನ್ನುವುದು ನಮ್ಮ ಆಸೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಎಸ್.ಜಿ ನಂಜಯ್ಯನಮಠ ಹೇಳಿದರು.
ಶನಿವಾರ ಮುಂಜಾನೆ ಸ್ಥಳೀಯ ಸುತಾರ ಅವರ ಮನೆಯಲ್ಲಿ ನಡೆದ ಸನ್ಮಾನ ಸಮಾರಂಭ ಕಾರ್ಯಕ್ರಮದಲ್ಲಿ ಪದ್ಮಶ್ರೀ ಪುರಸ್ಕ್ರತ ಇಬ್ರಾಹಿಂ ಸುತಾರ ಅವರನ್ನು ಶಾಲು ಹೊದಿಸಿ ಸನ್ಮಾನ ಮಾಡಿ ಸಾರ್ವಜನಿಕರೊಂದಿಗೆ ಮಾತನಾಡಿದ ಅವರು ನಾವು ರಾಜಕಾರಣಕ್ಕೆ ಅಷ್ಟೆ ಸೀಮಿತರಾಗುವ ಬದುಲು ದೇಶಕ್ಕೆ ಗೌರವ ತಂದ ಮಹಾನ್ ವ್ಯೆಕ್ತಿಗಳನ್ನು ಗುರುತಿಸಿ ಗೌರವಿಸುವ ಕಾರ್ಯ ಮಾಡಬೇಕು.
ಪದ್ಮಶ್ರೀ ಪದವಿ ರಾಷ್ಟ್ರವ್ಯಾಪಿ ಕೊಡತಕ್ಕ ಮಹಾನ್ ಪದವಿ, ಇದನ್ನು ಪಡೆಯಲು ಸಾಕಷ್ಟು ಓದಿ, ಮನನ ಮಾಡಿಕೊಂಡಿರಬೇಕು. ಪದ್ಮಶ್ರೀ ಪ್ರಶಸ್ತಿಗೆ ಯೋಗ್ಯರನ್ನು ಹುಡುಕಿ ಈ ಪ್ರಶಸ್ತಿ ನೀಡಲಾಗಿದೆ. ಕಾರಣ ಇಂಥ ಮಹಾನ್ ವ್ಯೆಕ್ತಿಗಳಿಗೆ ಎಲ್ಲರೂ ಗೌರವ ನೀಡಬೇಕು ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರ ನಂಜಯ್ಯನಮಠ ಅವರು ಸರ್ವಧರ್ಮಗಳ ಸಾಕಾರ ಮೂತರ್ಿಗಳು, ಭಾವ್ಯಕ್ಯೆತೆ ಹಿನ್ನೆಲೆಯಲ್ಲಿ ಅವರು ತಮ್ಮ ಬದುಕನ್ನ ಮೀಸಲಾಗಿಟ್ಟು ದುಡಿಯುತ್ತ ಬಂದವರು, ಪಕ್ಷದಲ್ಲಿ ಅತ್ಯಂತ ನಿಷ್ಟಾವಂತರಾಗಿ ಉಳಿದು ಸೇವೆ ಮಾಡುತ್ತಾ ಬಂದವರು. ಇಂಥವರು ನಮ್ಮ ಮನೆಗೆ ಬಂದು ನಮ್ಮನ್ನು ಸತ್ಕರಿಸಿದ್ದು ಕೂಡ ನಮಗೆ ಹೆಮ್ಮೆಯಾಗಿದೆ ಎಂದರು.
ಈ ಸಂದರ್ಭದಲ್ಲಿ ಇಬ್ರಾಹಿಂ ಸುತಾರ ಅವರು ಕೂಡಾ ಕಾಂಗ್ರೆಸ ಅಧ್ಯಕ್ಷ ಎಸ್.ಜಿ ನಂಜಯ್ಯನಮಠ ಹಾಗೂ ಮಾಜಿ ಸಚಿವೆ ಉಮಾಶ್ರೀಯವರನ್ನು ಸನ್ಮಾನಿಸಿ ಗೌರವಿಸಿದರು.
ಬ್ಲಾಕ ಕಾಂಗ್ರೆಸ್ ಅಧ್ಯಕ್ಷ ಮಲ್ಲಪ್ಪ ಸಿಂಗಾಡಿ,ಡಾ. ಎ.ಆರ್. ಬೆಳಗಲಿ, ಪುರಸಭೆ ಮಾಜಿ ಅಧ್ಯಕ್ಷ ಬಸವರಾಜ ರಾಯರ, ಪ್ರಕಾಶ ಮಮದಾಪುರ, ಯಲ್ಲನಗೌಡ ಪಾಟೀಲ, ಎಸ್.ಎಂ ಉಳ್ಳೆಗಡ್ಡಿ, ಸಿದ್ದು ಕೊಣ್ಣೂರ,ಈಶ್ವರ ಚಮಕೇರಿ, ಬಸೀರ ಸೌದಾಗರ, ನಜೀರ ಅತ್ತಾರ, ಅರವಿಂದ ಮಾಲಬಸರಿ, ಸೈಯದ ಯಾದವಾಡ, ರಾಜೇಶ ಬಾವಿಕಟ್ಟಿ, ಬಸೀರ ಸೌದಾಗರ, ಜ್ಯೋತೆಪ್ಪ ಕಪರಟ್ಟಿ, ಸಿದ್ದು ಬೆನ್ನೂರ, ರಾಜು ಬಾರಕೋಲ ಸೇರಿದಂತೆ ಹಲವರು ಉಪಸ್ಥಿತಿರಿದ್ದರು.