ಧಾರವಾಡ 17: 1971 ರಲ್ಲಿ ನಡೆದ ಬಾಂಗ್ಲಾ ವಿಮೋಚನಾ ಯುದ್ಧದಲ್ಲಿ ಪ್ರತ್ಯಕ್ಷವಾಗಿ ಭಾಗವಹಿಸಿ, ಅಂದು, ವೀರಮರಣವನ್ನಪಿ,್ಪ ಇಂದಿಗೂ ಜೀವಂತವಾಗಿರುವ ಅಪರೂಪದ ಯೋಧನನ್ನು ಇಲ್ಲಿಯ ಉತ್ತರ ಕನರ್ಾಟಕ ಸೈನಿಕರ ಕಲ್ಯಾಣ ಸಮಿತಿಯ ಇಂದು ಅವರ ಮನೆಯಲ್ಲಿ ಏರ್ಪಡಿಸಿದ ಸಮಾರಂಭದಲ್ಲಿ ಗೌರವ ಸಲ್ಲಿಸಲಾಯಿತು.
ಇಲ್ಲಿಯ ಸಪ್ತಾಪೂರ ಮಿಚಿಗನ ಕಂಪೌಂಡ ನಿವಾಸಿ ವಸಂತ ಲಾಡ ಇವರೇ ಆ ಅಪರೂಪದ ವೀರಯೋಧ.
ಆಗ... ಪೂರ್ವ ಪಾಕಿಸ್ತಾನವೆಂದೇ ಗುರುತಿಸಲ್ಪಡುತ್ತಿದ್ದ ಇಂದಿನ ಬಾಂಗ್ಲಾ ದೇಶವನ್ನು ಪಾಕಿಸ್ತಾನದ ಕಪಿಮುಷ್ಠಿಯಿಂದ ಬಿಡುಗಡೆಗೊಳಿಸಲು ಭಾರತ ಸರಕಾರವು ತನ್ನ ಸೈನಿಕರನ್ನು ಆ ಪ್ರದೇಶಕ್ಕೆ ಕಳಿಸಿತ್ತು. ಆ ಸೈನಿಕರಲ್ಲಿ ವಸಂತ ಲಾಡ ಅವರೂ ಒಬ್ಬರಾಗಿದ್ದರು.
ಜಸ್ಪೂರ ವಿಭಾಗದಲ್ಲಿ ಯುದ್ಧ ನಡೆದಿತ್ತು... ಪಾಕಿಸ್ತಾನವು ಹಾಕಿದ ಬಾಂಬ ದಾಳಿಯಲ್ಲಿ ಮಣ್ಣು ಗುಡ್ಡೆ ಎತ್ತರವಾಗಿ ಬಿದ್ದಿತ್ತು, ಅದರಲ್ಲಿ ಸಿಲುಕಿದವರೆಲ್ಲ ವೀರಮರಣ ಹೊಂದಿದ್ದಾರೆಂದು ಸೇನೆಯು ತಿಳಿದಿತ್ತು.
`ವಸಂತ ಲಾಡ ವೀರ ಮರಣ ಹೊಂದಿದ್ದಾರೆಂದು' ಸಕರ್ಾರ ತಂತಿ ಸಂದೇಶದ ಮೂಲಕ ತಿಳಿಸಿದ್ದಾಗ್ಗೆ, ಧಾರವಾಡದಲ್ಲಿ ಶೋಕದ ವಾತಾವರಣ ನಿಮರ್ಾಣವಾಯಿತು. ಅದರೊಂದಿಗೇ ವಸಂತ ಲಾಡರ ಬಗ್ಗೆ ಹೆಮ್ಮೆ, ಅಭಿಮಾನಗಳು ಉಕ್ಕಿ ಹರಿದವು.
ಧಾಮರ್ಿಕ ವಿಧಿ, ವಿಧಾನಗಳಂತೆ ಶ್ರಾದ್ಧ ಕಮರ್ಾದಿಗಳು ನಡೆಯುತ್ತಿದ್ದಾಗಲೇ `ವಸಂತ ಲಾಡ ಬದುಕಿದ್ದಾರೆ' ಧಾರವಾಡಕ್ಕೆ ಬರುತ್ತಲಿದ್ದಾರೆ ಎಂಬ ಸಂತಸದ ಸುದ್ದಿಯನ್ನು ತಂದ ತಂತಿ ಸಂದೇಶ ಸಂತೋಷದ ಹೊಳೆಯನ್ನೇ ಹರಿಸಿತು.
ಶ್ರಾದ್ಧ ಕಮರ್ಾದಿ ಕಾರ್ಯಗಳನ್ನು ಕ್ಷಣಾರ್ಧದಲ್ಲಿಯೇ ರದ್ದುಗೊಳಿಸಿ, ಅಲ್ಲಿಯೇ ಸತ್ಯನಾರಾಯಣ ಪೂಜೆಯನ್ನು ನೆರವೇರಿಸಲಾಯಿತು. ಪ್ರಸಾದ ವಿತರಿಸಿ, ಪಟಾಕಿ ಸಿಡಿಸಿ, ಸಂತೋಷ ವ್ಯಕ್ತಪಡಿಸಲಾಯಿತು.
ಅಂದಿನ ಕಾರ್ಯಕ್ರಮವನ್ನು ಸಂಘಟಿಸಿದ್ದ, ಇಂದಿನ ಕಾರ್ಯಕ್ರಮವನ್ನೂ ಸಂಘಟಿಸಿದ್ದ ಸಮಿತಿಯ ಪ್ರಧಾನ ಕಾರ್ಯದಶರ್ಿ ಕೃಷ್ಣ ಜೋಶಿ ಆ ರೋಚಕ ಘಟನೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಾಗ ಜನರಿಗೆ ಅಚ್ಚರಿಯೇ ಅಚ್ಚರಿ. ಅವರಿಗೆ ಗೊತ್ತಿಲ್ಲದಂತೆಯೇ ಭಾರತ ಮಾತಾಕಿ ಜೈ ಎಂಬ ಘೋಷಣೆ ಮುಗಿಲು ಮುಟ್ಟಿತು.
ಪ್ರತಿ ವರುಷವು ಡಿಸೆಂಬರ 16 ರಂದು ಬಾಂಗ್ಲಾ ವಿಮೋಚನಾ ದಿವಸ `ವಿಜಯ ದಿವಸ' ಎಂದು ಆಚರಿಸುತ್ತಾ ಬಂದಿರುವ ಉತ್ತರ ಕನರ್ಾಟಕ ಸೈನಿಕ ಕಲ್ಯಾಣ ಸಮಿತಿಯು ಇಂದೂ ಸಹ ವಸಂತ ಲಾಡ ಅವರನ್ನು ಅವರ ಮನೆಯಲ್ಲಿ ಸನ್ಮಾನಿಸಲಾಯಿತು. ಆ ಯುದ್ಧದಲ್ಲಿ ಭಾಗವಹಿಸಿ ಬದುಕಿ ಉಳಿದ ಧಾರವಾಡದ ಏಕೈಕ ಸೈನಿಕ ವಸಂತ ಲಾಡ ಇಂದು ನಮ್ಮ ಮಧ್ಯದಲ್ಲಿರುವುದು ಹೆಮ್ಮೆಯ ವಿಷಯ.
ಸಮಿತಿಯ ಅಧ್ಯಕ್ಷ ಚಂದ್ರಶೇಖರ ಅಮಿನಗಡ ಅಂದು ಮತ್ತು ಇಂದು ನಡೆದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು ಸಹ ಒಂದು ವೈಶಿಷ್ಟ್ಯ. ಇಂದು ನಡೆದ ಕಾರ್ಯಕ್ರಮದಲ್ಲಿ ಬಿ. ವಾಯ್. ಪೂಜಾರ, ಟಿ. ಡಿ. ಘೋಗರೆ, ಸಂಪತ ರಾಜಗಿರೆ, ಪಾಲಿಕೆಯ ಮಾಜಿ ಸದಸ್ಯ ಉದಯ ಲಾಡ, ಮಾಜಿ ಉಪಮಹಾಪೌರೆ ನಂದಾ ಘೋಗರೆ ಹಾಗೂ ಮರಾಠಾ ಸಮಾಜದ ಗಣ್ಯರ ಜೊತೆಗೆ, ಭಾರತಿ ಮಾನೆ, ನಾಗರತ್ನಾ ಅಮಿನಗಡ, ಪಂಡಿತ ಮುಂಜಿ, ವಿಜಯ ತೋಡಕರ ಮತ್ತಿತರರು ಉಪಸ್ಥಿತರಿದ್ದರು.