ಕೆ.ಎಲ್‌.ಎಸ್ ಗೋಗಟೆ ಪದವಿ ಪೂರ್ವ ಮಹಾವಿದ್ಯಾಲಯದ ರಾ​‍್ಯಂಕ್ ಪಡೆದ ವಿದ್ಯಾರ್ಥಿಗಳ ಸನ್ಮಾನ ಸಮಾರಂಭ

Honor ceremony for the students who got ranks of KLS Gogate Pre-University College

ಲೋಕದರ್ಶನ ವರದಿ 

ಕೆ.ಎಲ್‌.ಎಸ್ ಗೋಗಟೆ ಪದವಿ ಪೂರ್ವ ಮಹಾವಿದ್ಯಾಲಯದ ರಾ​‍್ಯಂಕ್ ಪಡೆದ ವಿದ್ಯಾರ್ಥಿಗಳ ಸನ್ಮಾನ ಸಮಾರಂಭ 


ಬೆಳಗಾವಿ, ಎ 19: ಕರ್ನಾಟಕ ಕಾನೂನು ಸಂಸ್ಥೆಯ ಗೋಗಟೆ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ದ್ವೀತಿಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಕರ್ನಾಟಕ ರಾಜ್ಯಕ್ಕೆ ವಾಣಿಜ್ಯ ವಿಭಾಗದಲ್ಲಿ ಮೂರನೇಯ ರಾ​‍್ಯಂಕ್ ಪಡೆದ ಕುಮಾರಿ ತನ್ವಿ ಹೇಮಂತ ಪಾಟೀಲ (597/600  99.50ಅ) ಏಳನೇ ರಾ​‍್ಯಂಕ್ ಪಡೆದ ಕುಮಾರಿ ಪೂರ್ವಿ ವಿಜಯ ರಾಜಪುರೋಹಿತ (593/600  98.83ಅ) ಹಾಗೂ ಹತ್ತನೇ ರಾ​‍್ಯಂಕ್ ಪಡೆದ ಕುಮಾರಿ ಬ್ರಾಹ್ಮಿ ಭರತ ನರಸಗೌಡ (590/600  98.33ಅ) ವಿದ್ಯಾರ್ಥಿಗಳ ಸನ್ಮಾನ ಸಮಾರಂಭ ಇಂದು ಜರುಗಿತು. 

ಇಂದು ನಡೆದ ಕಾರ್ಯಕ್ರಮದಲ್ಲಿ ರಾಜ್ಯಕ್ಕೆ ಮೂರು ರಾ​‍್ಯಂಕ್ ಪಡೆದ ವಿದ್ಯಾರ್ಥಿನಿಯರಿಗೆ ಕೆ ಎಲ್ ಎಸ್ ಸಂಸ್ಥೆಯ ವತಿಯಿಂದ ಪ್ರಶಸ್ತಿ ಪತ್ರ ಹಾಗೂ 10 ಸಾವಿರ ರೂಪಾಯಿಗಳ ನಗದು ಬಹುಮಾನವನ್ನು ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಅದೇ ರೀತಿಯಾಗಿ ಬೆಳಗಾವಿ ಜಿಲ್ಲೆಗೆ ಹಾಗೂ ಕಾಲೇಜಿಗೆ ವಾಣಿಜ್ಯ ವಿಭಾಗದಲ್ಲಿ ಕು.ತನ್ವಿ ಪಾಟೀಲ, (1 ರಾ​‍್ಯಂಕ್) ಕು.ಪೂರ್ವಿ ರಾಜಪುರೋಹಿತ (2 ನೇ ರಾ​‍್ಯಂಕ್) ಕು. ಬ್ರಾಹ್ಮೀ ನರಸಗೌಡ (3ನೇ ರಾ​‍್ಯಂಕ್) ಕು. ಸಮೃದ್ದಿ ವೇರಣೇಕರ್ (4ನೇ ರಾ​‍್ಯಂಕ್), ಶ್ರಾವಣಿ ಪಾಟೀಲ (5ನೇ ರಾ​‍್ಯಂಕ್), ಕುಮಾರ ಅರುಣ ಉಚಗಾವಕರ್ (08 ನೇ ರಾ​‍್ಯಂಕ್), ಕು ಶ್ರೀನಿಧಿ ಅಣ್ವೇಕರ್ (8ನೇ ರಾ​‍್ಯಂಕ್), ಕು. ಸೌಂದರ್ಯ ಕುಲಕರ್ಣಿ (08 ನೇ ರಾ​‍್ಯಂಕ್), ಕು. ಮನಸ್ವಿ ಬಹೇತ (09 ನೇ ರಾ​‍್ಯಂಕ್), ಕು. ಅಸಾವರಿ ಪಾಟೀಲ (09ನೇ ರಾ​‍್ಯಂಕ್) ಕು. ಕೃಷ್ಣಾ ಕುಮಾರ (09 ನೇ ರಾ​‍್ಯಂಕ್) ಹಾಗೂ ಕು. ದೀಪ್ತೀ ಎಸ್ ಬಂಗೋಡಿ (10ನೇ ರಾ​‍್ಯಂಕ್) ಪಡೆದ ವಿದ್ಯಾರ್ಥಿಗಳಿಗೆ ಸಂಸ್ಥೆಯ ವತಿಯಿಂದ 05 ಸಾವಿರ ರೂಪಾಯಿಗಳ ನಗದು ಬಹುಮಾನವನ್ನು ನೀಡಿ ಸತ್ಕರಿಸಲಾಯಿತು. 

ಇದೇ ರೀತಿಯಾಗಿ ವಿಜ್ಞಾನ ವಿಭಾಗದಲ್ಲಿ ಕಾಲೇಜಿಗೆ ಮೊದಲನೇಯ ರಾ​‍್ಯಂಕ್ ಹಾಗೂ ಬೆಳಗಾವಿ ಜಿಲ್ಲೆಗೆ 5ನೇ ರಾ​‍್ಯಂಕ್ ಪಡೆದ ಕು. ರೂಹಿ ಶಾನಬಾಗ್ ಅದೇ ರೀತಿಯಾಗಿ ಕುಮಾರ ಅಭಿಷೇಕ ಜೋಶಿ (02ನೇ ರಾ​‍್ಯಂಕ್), ಕು. ಜೋಶೇಪ್ ಮತ್ತೇವಾಡ (03ನೇರಾ​‍್ಯಂಕ್), ಕು. ವೇದಾ ಮಹಾಜನ್ (04 ನೇ ರಾ​‍್ಯಂಕ್) ಕು. ಜೂಹಿಸ್ ಚಂದಗಡಕರ್ (05 ನೇ ರಾ​‍್ಯಂಕ್), ಕು. ನಿಶ್ಚಲ್ ಸಕದೇವ್ (06 ನೇ ರಾ​‍್ಯಂಕ್), ಕು. ಅರುಣ ವಡೆಯರ್ (07 ನೇ ರಾ​‍್ಯಂಕ್) ಕು. ಚಿನ್ಮಯ ಸೈಕರ್ (08 ನೇ ರಾ​‍್ಯಂಕ್) ಕು. ಸೃಷ್ಟೀ ಪಾಟೀಲ (09 ನೇ ರಾ​‍್ಯಂಕ್) ಕು. ಸ್ವರ್ಣಾ ಎಸ್ (10 ನೇ ರಾ​‍್ಯಂಕ್) , ಕು.ಎಚ್ ವಿ ಸೌರವ್(10ನೇ ರಾ​‍್ಯಂಕ್) ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ 05 ಸಾವಿರ ನಗದು ಬಹುಮಾನ ನೀಡಿ ಗೌರವಿಸಿದರು. 

ಮುಖ್ಯ ಅತಿಥಿಗಳಾಗಿ ಆಗಮಿಸಿದ ಧಾರವಾಡದ ಐಐಟಿ ನಿದೇಶಕರಾದ ಡಾ. ವೆಂಕಪ್ಪಯ್ಯ ಆರ್ ದೇಸಾಯಿ ಅವರು ಮಾತನಾಡಿ ನಿರಂತರ ಅದ್ಯಯನ, ಕಠಿಣ ಪರಿಶ್ರಮ, ಸದಾ ಕ್ರೀಯಾಶಿಲತೆ ತಾಳ್ಮೆ ಇವು ವಿದ್ಯಾರ್ಥಿಗಳು ಯಶಸ್ಸು ಸಾಧಿಸಲು ಸಾದ್ಯವೆಂದು ತಿಳಿಸಿದರು. 

ಗೌರವಾನ್ವಿತ ಅತಿಥಿಗಳಾದ ಆಗಮಿಸಿದ ಕರ್ನಾಟಕ ಕಾನೂನು ಸಂಸ್ಥೆಯ ಚೇರಮನ್ನರಾದ ಶ್ರೀ ಪಿ ಎಸ್ ಸಾವಕಾರ ಸರ್ ಮಾತನಾಡಿ ಈ ವಿದ್ಯಾರ್ಥಿಗಳು ಮಾಡಿದ ಸಾಧನೆ ಸಂತಸ ತಂದಿದ್ದು, ನಮ್ಮ ಸಂಸ್ಥೆಯಿಂದ ವಿದ್ಯಾರ್ಥಿಗಳಿಗೆ ಬೇಕಾದ ಸಹಾಯ ಸಹಕಾರ ನೀಡಲು ಎಲ್ಲ ಪ್ರಯತ್ನ ಮಾಡುತ್ತೆವೆಂದು ಹೇಳಿದರು. ಮುಂದೆ ವಿದ್ಯಾರ್ಥಿಗಳು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿ ನಮ್ಮ ಮಹಾವಿದ್ಯಾಲಯಕ್ಕೆ ಈ ದೇಶಕ್ಕೆ ಕೀರ್ತಿ ತರಬೇಕೆಂದು ಆಶಿಸಿದರು. 


ಕಾರ್ಯಕ್ರಮದ ಅದ್ಯಖ್ಷತೆಯನ್ನು ವಹಿಸಿದ ಕರ್ನಾಟಕ ಕಾನೂನು ಸಂಸ್ಥೆಯ ಅದ್ಯಕ್ಷರಾದ ಶ್ರೀ ಅನಂತ ಮಂಡಗಿ ಅವರು ಮಾತನಾಡಿ ವಿದ್ಯಾರ್ಥಿಗಳ ನಿರಂತರ ಪ್ರಯತ್ನಕ್ಕೆ ಹರ್ಷ ವ್ಯಕ್ತಪಡಿಸಿ ಆತ್ಮವಿಶ್ವಾಸ ಕಠಿಣ ಪರಿಶ್ರಮ ಸತತ ಅದ್ಯಯನದಿಂದ ದೊಡ್ಡ ಸಾಧನೆ ಮಾಡಲು ಸಾದ್ಯ ಅದರ ಹಿಂದೆ ಶಿಕ್ಷಕರ ನಿರಂತರ ಸಲಹೆ, ಸೂಚನೆ ಪ್ರಯತ್ನ ಮಾರ್ಗದರ್ಶನದಿಂದ ಇಂದು ರಾಜ್ಯಕ್ಕೆ ಮೂರು ರಾ​‍್ಯಂಕ್ ಪಡೆದ ಬೆಳಗಾವಿ ಜಿಲ್ಲೆಯ ಗೋಗಟೆ ಕಾಲೇಜಿನ ಕೀರ್ತಿಯನ್ನು ಬೆಳಗಿದರು ಎಂದು ಹರ್ಷ ವ್ಯಕ್ತಪಡಿಸಿದರು. 


ಕಾರ್ಯಕ್ರಮದಲ್ಲಿ ಶ್ರೀ ವಿವೇಕ ಕುಲಕರ್ಣಿ, ಶ್ರೀ ಎಸ್‌. ವಿ. ಗಣಾಚಾರಿ, ಶ್ರೀ ಆರ್ ಎಸ್ ಮುತಾಲಿಕ್, ಶ್ರೀ ರಾಜ್ ಬೆಳಗಾವಕರ್, ಶ್ರೀ ಪ್ರಶಾಂತ್ ಕುಲಕರ್ಣಿ, ಶ್ರೀಮತಿ ಉಜ್ವಲಾ ಮಂಡಗಿ, ಶ್ರೀ ಎ ಕೆ ತಗಾರೆ ಸೇರಿದಂತೆ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.  

ಕಾರ್ಯಕ್ರಮದಲ್ಲಿ ಗೋಗಟೆ ಪದವಿ ಪೂರ್ವ ಕಾಲೇಜಿನ ಚೇರಮನ್ನರಾದ ಶ್ರೀ ವಿ ಎಂ ದೇಶಪಾಂಡೆ ಅವರು ಸ್ವಾಗತಿಸಿ ಮಾತನಾಡಿ ವಿದ್ಯಾರ್ಥಿಗಳ ಸಾಧನೆಗೆ ಹರ್ಷ ವ್ಯಕ್ತಪಡಿಸಿದರು. ವಿಧ್ಯಾರ್ಥಿಗಳಿಗೆ ಬೇಕಾದ ಸಹಾಯ, ಸಹಕಾರ, ಪ್ರೇರಣೆ ನೀಡಲು ಮಹಾವಿದ್ಯಾಲಯ ಸದಾ ಸಿದ್ದವಾಗಿರುತ್ತದೆ ಎಂದರು. 


ಕಾಲೇಜಿನ ಪ್ರಾಚಾರ್ಯರಾದ ಡಾ. ಶ್ರೀಮತಿ ಎ ಎಸ್ ಕೇರೂರ ಅವರು ಮಾತನಾಡಿ ವಿದ್ಯಾರ್ಥಿಗಳ ಕಾಲೇಜಿಗೆ ಕೀರ್ತಿ ತಂದಿದ್ದು ಅವರು ಎಲ್ಲ ಕಾಲಕ್ಕೂ ಸ್ಮರಣೆಯಲ್ಲಿ ಇರುವಂತದ್ದು ಎಂದರು. ಭವಿಷ್ಯದಲ್ಲಿ ಮಹಾವಿದ್ಯಾಲಯ ಇನ್ನೂ ಹೆಚ್ಚಿನ ಸಾಧನೆಗೈಯಲಿದೆ ಎಂದು ಆತ್ಮವಿಶ್ವಾಸದ ನುಡಿಗಳನ್ನಾಡಿ ವಿದ್ಯಾರ್ಥಿಗಳನ್ನು ಹುರುದುಂಬಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರಾದ ಕು. ಪೂರ್ವಿ ರಾಜಪೂರೋಹಿತ್ ಹಾಗೂ ಕು. ಅಂತರಾ ಕುಲಕರ್ಣಿ ಪ್ರಾರ್ಥಿಸಿದರು. ಪ್ರೊ. ಪಿ ಜೆ ಅಮಾಥಿ ಹಾಗೂ ಪ್ರೊ. ಎಸ್ ಆರ್ ವಿಭೂತೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಕಾಲೇಜಿನ ಇಂಗ್ಲೀಷ್ ಪ್ರಾಧ್ಯಾಪಕಿ ಶ್ರೀಮತಿ ಅನಿತಾ ರಾಠೋಡ ಅತಿಥಿಗಳನ್ನು ಪರಿಚಯಿಸಿದರು. ರಾ​‍್ಯಂಕ್ ಪಡೆದ ವಿದ್ಯಾರ್ಥಿಗಳಾದ ಕು. ತನ್ವಿ ಪಾಟೀಲ ಹಾಗೂ ರೂಹಿ ಶಾನಬಾಗ್ ತಮ್ಮ ಅಭಿಪ್ರಾಯ ಹಂಚಿಕೊಂಡರು. ಕಾರ್ಯಕ್ರಮವನ್ನು ಶ್ರೀಮತಿ ಲಕ್ಷ್ಮೀ ದೇಶಪಾಂಡೆ ಸುಂದರವಾಗಿ ನಿರೂಪಿಸಿದರು. ಡಾ. ಬಿ. ಡಿ. ಪಾಟೀಲ ವಂದಿಸಿದರು.