ರಾಮದುರ್ಗ: ಉತ್ತರ ಕರ್ನಾಕದ ಸುಕ್ಷೇತ್ರಗಳಲ್ಲೊಂದಾದ ಗೊಡಚಿಯ ವೀರಭದ್ರ ದೇವಸ್ಥಾನದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೆನೆ ಎಂದು ಶಾಸಕ ಮಹಾದೇವಪ್ಪ ಯಾದವಾಡ ನುಡಿದರು.
ಗೊಡಚಿ ದೇವಸ್ಥಾನದಲ್ಲಿ ನಾಗಪ್ಪ ಅಥಣಿ ನೂತನ ಸಭಾ ಭವನದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಸಿ ಮಾತನಾಡಿ, ರಾಜ್ಯದ ಹಲವಾರು ಭಾಗಗಳಿಂದ ಆಗಮಿಸುವ ದೇವಸ್ಥಾನದ ಭಕ್ತರಿಗೆ ಅವಶ್ಯಕ ಇರುವ ಮೂಲ ಭೂತ ಸೌಲಭ್ಯಗಳನ್ನು ನೀಡಿ ಹಾಗೂ ಶಾಸಕರ ಅನುದಾನದಿಂದಲೂ ಹಣ ನೀಡಿ ಸುಕ್ಷೇತ್ರದ ಸರ್ವಾಂಗೀಣ ಬೆಳವಣಿಗೆಗೆ ಶ್ರಮಿಸುತ್ತೆನೆ ಎಂದು ಅವರು ಹೇಳಿದರು.
ಬಾಗಲಕೋಟೆಯ ಶಾಸಕ ವೀರಣ್ಣ ಚರಂತಿಮಠ ಮಾತನಾಡುತ್ತಾ ಬಾಗಲಕೋಟೆಯ ಅಥಣಿ ಕುಟುಂಬದ ಆದಿಕಾಲದಿಂದಲೂ ಧಾನ ಧರ್ಮದ ಕಾರ್ಯಗಳನ್ನು ಮಾಡುತ್ತಾ ಬಂದಿದ್ದಾರೆ ಅಂತಹ ಪರಂಪರೆ ಇಂದು ಮುಂದುವರೆದು ಇಂದು ಗೊಡಚಿಯಲಿ ್ಲನಾಗಪ್ಪ ಚ. ಅಥಣಿ ಎಂಬ ನೂತನ ಸುಂದರ ಸಭಾ ಭವನ ನಿರ್ವಾಸಿ ಸಮಾಜಕ್ಕೆ ಅರ್ಪಿಸುತ್ತಿರುವುದು ಶ್ಲಾಘನೀಯ ಎಂದು ಬಣ್ಣಿಸಿದರು. ಇಂತಹ ಕಾರ್ಯ ಅಥಣಿ ಕುಟುಂದಿಂದಾ ಮುಂದುವರೆದು ಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸಲಿ ಎಂದು ನುಡಿದರು.
ಶಿದ್ದಸಂಸ್ಥಾನಮಠ ನಿಡಸೋಸಿಯ ಜಗದ್ಗುರು ಶಿವಲಿಂಗೇಶ್ವರ ಮಹಾಸ್ವಾಮಿಜಿ ಮತನಾಡುತ್ತಾ ಇತಿಹಾಸವನ್ನು ಅವಲೋಕಿಸಿದಾಗ ಜೀವನದದಲ್ಲಿ ತ್ಯಾಗಕ್ಕೆ ಮಹತ್ವದ ಸ್ಥಾನ ಇದೆ, ಆ ದಿಶೆಯಲ್ಲಿ ಭಾಗಲಕೊಟದ ಅಥಣಿ ಕುಟುಂಬ ಸಂಪಾಸಿದ ಹಣದಲ್ಲಿ ಸಮಾಜದ ಒಳಿತಾಗ ನೂತನ ಸಭಾ ಭವನ ನಿರ್ಮಾಸಿದ್ದು ಶ್ರéééééೇಷ್ಠದ ಕಾರ್ಯವಾಗಿದೆ. ಇದೆ ರೀತಿ ಉಳ್ಳವರು ಧಾನ ಧರ್ಮ ಮಾಡುವದರಿಂದಾ ಮಠಗಳು ಇಂದು ದೇಶದಲ್ಲಿಯೇ ಉತ್ತಮ ಕೆಲಸ ಮಾಡಲು ಸಾಧ್ಯವಾಗಿದೆ ಎಂದು ನುಡಿದರು. ದುರದುಂಡೇಶ್ವರ ಶಿದ್ದಸಂಸ್ಥಾನಮಠ ಅರಬಾವಿಯ ಸಿದ್ದಲಿಂದ ಸ್ವಾಮಿಗಳು, ತೊರಗಲ್ಲದ ಮಹಾರಾಜ ಸಂಗ್ರಾಮಸಿಂಹ ಶಿಂಧೆ, ಗೊಡಚಿ ಶ್ರೀ ವೀರಭದ್ರೇಶ್ವರ ಸೇವಾ ಸಮಿತಿ ಕಾರ್ಯಾಧ್ಯಕ್ಷ ಈರಣ್ಣ ನಾಗಪ್ಪ ಅಥಣಿ ಹಾಗೂ ಇತರರು ವೇದಿಕೆಯ ಮೇಲೆ ಇದ್ದರು.