ಲೋಕದರ್ಶನ ವರದಿ
ಗದಗ 03: ಗದಗ-ಬೆಟಗೇರಿ ನಗರದಲ್ಲಿಯ ಕೊಳಚೆ ಪ್ರದೇಶಗಳು ಮೂಲಭೂತ ಸೌಲಭ್ಯ ವಂಚಿತ ಪ್ರದೇಶಗಳಾಗಿವೆ, ನಮ್ಮ ಸ್ಲಂ ಪ್ರದೇಶಗಳ ಅಭಿವೃದ್ಧಿಗಾಗಿ ಸಂಘಟನಾತ್ಮಕ ಹೋರಾಟಗಳು ನಡೆಸಬೇಕಾಗಿದೆ. ಮುಖ್ಯವಾಗಿ ನಗರದಲ್ಲಿ ಸುಮಾರು ದಶಕಗಳ ಹಿಂದೆ ಘೋಷಣೆಯಾಗಿರುವ ಕೊಳಗೇರಿ ಪ್ರದೇಶದ ಕುಟುಂಬಗಳಿಗೆ ಈ ವರೆಗೊ ಮನೆ ಮಾಲಿಕತ್ವ ನೀಡುವಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದು, ನಗರದಲ್ಲಿ ಘೋಷಣೆಯಾಗಿರುವ ಸ್ಲಂ ಪ್ರದೇಶದ ಕುಟುಂಬಗಳಿಗೆ ಅವರು ವಾಸಿಸುತ್ತಿರುವ ಮನೆಗಳ ಮಾಲಿಕತ್ವ ನೀಡಬೇಕೆಂದು ಗದಗ ಜಿಲ್ಲಾ ಕೊಳಚೆ ನಿವಾಸಿಗಳ ಹಿತರಕ್ಷಣ ಸಮಿತಿಯ ಅಧ್ಯಕ್ಷರಾದ ಇಮ್ತಿಯಾಜ.ಆರ್.ಮಾನ್ವಿ ಒತ್ತಾಯಿಸಿದರು.
ಅವರು ನಗರದ ಖಾನತೋಟ್ ಜನತಾ ಕಾಲೋನಿಯಲ್ಲಿ ಆಯೋಜಿಸಲಾಗಿದ್ದ ಗದಗ ಜಿಲ್ಲಾ ಸ್ಲಂ ಸಮಿತಿಯ ಶಾಖೆ ಘಟಕವನ್ನು ಉದ್ಘಾಟಿಸಿ ಮಾತನಾಡುತ್ತ ಗದಗ-ಬೆಟಗೇರಿ ಅವಳಿ ನಗರದಲ್ಲಿ ಗುಡಿಸಲು ಪ್ರದೇಶಗಳ ಪುನರವಸತಿಗಾಗಿ ಹಾಗೂ ವಸತಿರಹಿತರ ವಸತಿ ಸೌಲಭ್ಯಕ್ಕಾಗಿ ಸಾವಿರಾರು ಮನೆಗಳನ್ನು ನಿಮರ್ಿಸಲಾಗಿದೆ, ಆದರೆ ಇದು ನಿಜವಾದ ಬಡ ಕುಟುಂಬಗಳಿಗೆ ಹಾಗೂ ಮೂಲ ಗುಡಿಸಲು ನಿವಾಸಿಗಳಿಗೆ ಸಿಗದೇ ಇರುವುದರಿಂದ ಇವತ್ತು ಗುಡಿಸಲು ಪ್ರದೇಶದ ಸಾವಿರಾರು ಕುಟುಂಬಗಳು ಅನಿವಾರ್ಯವಾಗಿ ಗುಡಿಸಲಗಳಲ್ಲಿ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ರಾಜ್ಯ ಸಕರ್ಾರದ ಸುತ್ತೋಲೆ ಪ್ರಕಾರ ಘೋಷಣೆಯಾಗಿರುವ ಎಲ್ಲಾ ಸ್ಲಂ ಪ್ರದೇಶದ ಕುಟುಂಬಗಳಿಗೆ ಪರಿಚಯ ಪತ್ರ ನೀಡಬೇಕೆಂದು ಆದೇಶಿಸಲಾಗಿದೆ.
ಆದರೆ ಈವರೆಗೊ ನಗರದ ಸ್ಲಂ ಪ್ರದೇಶದ ಕುಟುಂಬಗಳಿಗೆ ಪರಿಚಯ ಪತ್ರ ನೀಡಲು ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ, ಸಕರ್ಾರಗಳ ಕೊಳಗೇರಿ ಪ್ರದೇಶದ ಅಭಿವೃಧ್ದಿ ಮತ್ತು ವಸತಿ ಯೋಜನೆಗಳನ್ನು ನಮ್ಮ ಪ್ರದೇಶದ ನಿವಾಸಿಗಳು ಪಡೆದುಕೊಳ್ಳಬೇಕಾದರೆ ಮೂದಲು ಸಂಘಟಿತರಾಗಬೇಕು, ಸಂಘಟನೆಯ ಮೂಲಕ ತಮ್ಮ ಮೂಲಭೂತ ಹಕ್ಕುಗಳನ್ನು ಪಡೆಯಲು ಅನುಕೊಲವಾಗುತ್ತದೆ, ಖಾನತೋಟ್ ಜನತಾ ಕಾಲೋನಿಯು 2003ರಲ್ಲಿ ಅಧಿಕೈತವಾಗಿ ಸ್ಲಂ ಘೋಷಣೆಯಾಗಿದ್ದು. ಆದರೆ ಈವರೆಗೊ ಸ್ಥಳೀಯ ಕುಟುಂಬಗಳಿಗೆ ಮನೆಯ ಮಾಲಿಕತ್ವ ನೀಡಲು ಅಧಿಕಾರಿಗಳು ವಿಳಂಭ ನೀತಿಯನ್ನು ಅನುಸರಿಸುತ್ತಿದ್ದಾರೆ, ನಗರದಲ್ಲಿರುವ ಕೊಳಗೇರಿಗಳು ಸಮಸ್ಯರಹಿತ ಪ್ರದೇಶಗಳಾಗಬೇಕಾದರೆ ನಮ್ಮ ಸ್ಲಂ ನಿವಾಸಿಗಳು ಜಾಗೃತರಾಗಿ ಸಂಘಟನಾತ್ಮಕ ಸ್ಲಂ ಜನಪರವಾದ ಹೋರಾಟಗಳಿಗೆ ಕೈ ಜೋಡಿಸಬೇಕೆಂದು ಇಮ್ತಿಯಾಜ ಮಾನ್ವಿ ತಿಳಿಸಿದರು, ಮಾಜಿ ನಗರಸಭಾ ಸದಸ್ಯರಾದ ದಾವಲಸಾಬ ಈಟಿ ಮಾತನಾಡಿ ಈ ಹಿಂದೆ ಖಾನತೋಟ್ ಜನತಾ ಕಾಲೋನಿಯ ಅಭಿವೃಧ್ದಿಗಾಗಿ ಸಾಕಷ್ಟು ಕೆಲಸಗಳನ್ನು ನಡೆಸಲಾಗಿದೆ, ಸ್ಲಂ ಸಂಘಟನೆಯಿಂದ ಸ್ಥಳೀಯ ಜನರ ಬೇಡಿಕೆಗಳ ಅನುಗುಣವಾಗಿ ಕಾರ್ಯ ಚಟುವಟಿಕೆಗಳನ್ನು ನಡೆಸಬೇಕು, ಸ್ಲಂ ಸಮಿತಿಯ ಜನರಪರ ಕಾರ್ಯಗಳಿಗೆ ನಾವು ಸಂಪೂರ್ಣ ಸಹಕಾರ ನೀಡುತ್ತೇವೆ ಎಂದು ಹೇಳಿದರು.
ಹಜರತಸಾಬ ಗಚ್ಚಿ, ಹನುಮಂತಪ್ಪ ಮುಂಡರಗಿ, ಚಾಂದಸಾಬ ಕೊಟ್ಟೂರು, ಪರತಪ್ಪ ಕಮತರ, ಮುಜಫರ ಮುಲ್ಲಾ, ಮೆಹಬೂಬ ಮುಲ್ಲಾ, ಉಸ್ಮಾನ ಚಿತ್ತಾಪೂರ ವೇದಿಕೆ ಮೇಲೆ ಉಪಸ್ಥಿತರಿದ್ದು ಮಾತನಾಡಿದರು, ಶಾಖೆ ಸಮಿತಿ ಅಧ್ಯಕ್ಷರಾದ ಮೌಲಾಸಾಬ ಗಚ್ಚಿ, ಉಪಾಧ್ಯಕ್ಷರಾದ ಮಹ್ಮದಸಾಬ ಬೆಟಗೇರಿ, ಕಾರ್ಯದಶರ್ಿ ಖಾಜಾಸಾಬ ಬಳ್ಳಾರಿ, ಸಹ ಕಾರ್ಯದಶರ್ಿ ಮೌಲಾಸಾಬ ನದಾಫ, ರಮಜಾನಸಾಬ ನದಾಫ, ಖಾಜಾಸಾಬ ಉಮಚಗಿ, ಮಂಜುನಾಥ ಹೊಂಬಳ, ಸುಲೇಮಾನ ದೊಡ್ಡಮನಿ, ಮಾಬುಸಾಬ ಎಲಿಗಾರ, ಬಸವರಾಜ ಚಲವಾದಿ, ರಾಯೇಸಾಬ ಬೆಟಗೇರಿ, ಮಹ್ಮದರಫೀಕ ಧಾರವಾಡ ಹಾಗೂ ಸ್ಥಳೀಯ ನೂರಾರು ಸ್ಲಂ ನಿವಾಸಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.