ಆಯುಷ ಇಲಾಖೆಯಿಂದ ಹೋಮಿಯೋಪತಿ ಔಷಧಿ ವಿತರಣೆ

ಬಾಗಲಕೋಟೆ10 : ಜಿಲ್ಲಾ ಆಯುಷ ಇಲಾಖೆಯಿಂದ ಬಾದಾಮಿ ತಾಲೂಕಿನಲ್ಲಿ ಕ್ವಾರಂಟೈನ್ನಲ್ಲಿರುವ 136 ಜನರಿಗೆ ರೋಗ ನಿರೋಧಕ ಶಕ್ತಿಯನ್ನು ವೃದ್ದಿಸುವ ಅರಸೇನಿಕಮ್-30 ಹೋಮಿಯೋಪತಿ ಮಾತ್ರೆಗಳನ್ನು ವಿತರಿಸಲಾಯಿತು.

ಬಾದಾಮಿ ತಾಲೂಕಿನ ಚಿಕ್ಕ ಮುಚ್ಚಳಗುಡ್ಡದ ಆದರ್ಶ ವಿದ್ಯಾಲಯದಲ್ಲಿ ಕ್ವಾರಂಟೈನ್ನಲ್ಲಿರುವ ಢಾಣಕಶಿರೂರ ಗ್ರಾಮ ಹಾಗೂ ಬಾದಾಮಿ ಸೇರಿ ಒಟ್ಟು 93 ಜನರಿಗೆ ಹಾಗೂ ಮತ್ತೊಂದು ಕ್ವಾರಂಟೈನ್ ಕೇಂದ್ರದಲ್ಲಿದ್ದ 43 ಜನರಿಗೆ ಉಚಿತವಾಗಿ ಹೋಮಿಯೋಪತಿ ಮಾತ್ರೆಗಳನ್ನು ವಿತರಿಸಲಾಯಿತು. 

ಜಿಲ್ಲಾ ಆಯುಷ ಅಧಿಕಾರಿ ಡಾ.ಮಲ್ಲಣ್ಣ ತೋಟದ ಮಾತನಾಡಿ ಕೋವಿಡ್-19 ಬಗ್ಗೆ ಯಾವುದೇ ರೀತಿಯ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಮುನ್ನೆಚ್ಚರಿಕೆ ಇರಬೇಕು. ಪ್ರತಿ ದಿನ ಯೋಗ, ಪ್ರಾಣಾಯಾಮ, ಧ್ಯಾನ, ದೇವರ ಆರಾಧನೆ ಮಾಡಬೇಕು. ಬಿಸಿ ನೀರು ಹಾಗೂ ಕಷಾಯವನ್ನು ಕುಡಿಯಬೇಕು. ಪ್ರಧಾನಮಂತ್ರಿಗಳು ಸೂಚಿಸಿರುವ ಆಯುಷ್ ಸಪ್ತ ಸೂತ್ರಗಳನ್ನು ಕಡ್ಡಾಯವಾಗಿ ಅನುಸರಿಸಬೇಕು. ಆಯುಷ ಚಿಕಿತ್ಸಾ ಪದ್ದತಿಯನ್ನು ದಿನನಿತ್ಯ ಅನುಸರಿಸಲು ತಿಳಿಸಿದರು.

ಆಯುಷ ಇಲಾಖೆಯ ಹಿರಿಯ ವೈದ್ಯಾಧಿಕಾರಿ ಡಾ.ಸಿ.ಪಿ.ರಕ್ಕಸಗಿ ಮಾತನಾಡಿ ಕೋವಿಡ್ನ್ನು ದೂರವಿಡಲು ಮುನ್ನೆಚ್ಚರಿಕಾ ಕ್ರಮಗಳಾದ ಕಡ್ಡಾಯವಾಗಿ ಮಾಸ್ಕ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಸಾಬೂನಿನಿಂದ ಚೆನ್ನಾಗಿ ಕೈಗಳನ್ನು ತೊಳೆದುಕೊಳ್ಳಲು ತಿಳಿಸಿದರು. ಇನ್ನೋರ್ವ ಹೋಮಿಯೋಪತಿ ತಜ್ಞ ಡಾ.ಸಿ.ಬಿ.ಕಂಬಾಳಿಮಠ ಮಾತನಾಡಿ ಕೊರೊನಾ ಸೋಂಕು ತಡೆಯಲು ಆಯುಷ ಪದ್ದತಿಯನ್ನ ಅನುಸರಿಸುವ ಮೂಲಕ ಔಷಧಿ ತೆಗೆದುಕೊಳ್ಳುವ ಹಾಗೂ ಪತ್ಯ, ದಿನಚರ್ಯಗಳ ಬಗ್ಗೆ ತಿಳಿಸಿಕೊಟ್ಟರು.

ಚಿತ್ತವಾಡಗಿಯ ಸರಕಾರಿ ಆಯುವರ್ೇಧಿಕ್ ಚಿಕಿತ್ಸಾಲಯದ ವೈದ್ಯಾಧಿಕಾರಿ ಡಾ.ಎಸ್.ಪಿ.ನಿಡಗುಂದಿ ಮಾತನಾಡಿ ಕೋವಿಡ್ನಿಂದ ದೂರವಿರಲು ಆರೋಗ್ಯದ ದೃಷ್ಠಿಯಿಂದ ಆಹಾರದ ಪದ್ದತಿಗಳ ಬಗ್ಗೆ ತಿಳಿಸಿಕೊಟ್ಟರು. ಇದೇ ಸಂದರ್ಭದಲ್ಲಿ ಸಹಾಯಕ ಸಿಬ್ಬಂದಿಗಳಾದ ರಫೀಕ್ ಅಹ್ಮದ, ಸಿ.ಐ.ಗದ್ದಿಗೌಡರ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿದರ್ೇಶಕ ಆರ್.ಎಸ್.ಆದಾಪೂರ, ಬಾದಾಮಿ ಅಕ್ಷರ ದಾಸೋಹ ಯೋಜನಾಧಿಕಾರಿ ಸಂಜಯ ಮಬ್ರುಮಕರ, ಪೊಲೀಸ್ ಇಲಾಖೆಯ ಬಿ.ಎಚ್.ಪಾಟೀಲ, ಕ್ಷೇತ್ರ ಸಮನ್ವಯಾಧಿಕಾರಿ ಎಂ.ಪಿ.ಮಾಗಿ, ಸಹ ಶಿಕ್ಷಕರಾದ ರಾಮ್ರಾವ್ ಕುಲಕಣರ್ಿ, ಅಶೋಕ ಪೂಜಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.