ವಸತಿರಹಿತರಿಗೆ ಮನೆ: ಆದ್ಯತೆ ನೀಡಿ ಯೋಜನೆ ಪೂರ್ಣಗೊಳಿಸಿ

ಗದಗ 25:  ಜಿಲ್ಲೆಯ 9 ಸ್ಥಳೀಯ ನಗರ ಪ್ರದೇಶಗಳಲ್ಲಿ ಹಾಗೂ 323ಗ್ರಾಮೀಣ ಪ್ರದೇಶಗಳಲ್ಲಿ ವಸತಿರಹಿತ ಕುಟುಂಬಗಳಿಗೆ ಪ್ರಧಾನ ಮಂತ್ರಿ / ಮುಖ್ಯಮಂತ್ರಿ ಆವಾಸ ಯೋಜನೆಯಡಿ ಮನೆ ಒದಗಿಸುವಾಗ ಪ್ರಥಮಾದ್ಯತೆ ನೀಡಲು ರಾಜ್ಯದ ಅಪರ ಮುಖ್ಯ ಕಾರ್ಯದರ್ಶಿ  ಉನ್ನತ ಶಿಕ್ಷಣ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ  ಡಾ. ರಾಜಕುಮಾರ  ಖತ್ರಿ ಅವರು ತಿಳಿಸಿದರು.

ಗದಗ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಜರುಗಿದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಜರುಗಿಸಿ ಅವರು ಮಾತನಾಡಿದರು.  ಈ ವಸತಿ ಯೋಜನೆಗಳು ಎಲ್ಲ ಮೂಲಭೂತ ಸೌಕರ್ಯ ಹೊಂದಿರಬೇಕು.  ಕಟ್ಟಡ ಗುಣಮಟ್ಟದ್ದಾಗಿರಬೇಕು ಹಾಗೂ  ಯಾವುದೇ ವಿಳಂಬವಿಲ್ಲದೇ ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಲು ಡಾ. ಖತ್ರಿ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಶಿಶು ಮರಣ ದರವನ್ನು ಇನ್ನಷ್ಟು ಕಡಿಮೆಗೊಳಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ವಲಸೆ ಹೋಗುವ ಉದ್ಯೋಗಸ್ಥ ತಾಯಂದಿರ ಚಲನವಲನ ಮೇಲೆ ನಿಗಾವಹಿಸಿ ಅಗತ್ಯದ ಸೌಲಭ್ಯಗಳು ತಾಯಿ ಮಗುವಿಗೆ ದೊರಕುವಂತೆ ಕ್ರಮ ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದಶರ್ಿಗಳು ಸೂಚನೆ ನೀಡಿದರು.

ಜಿಲ್ಲೆಯಲ್ಲಿ 1,41,968  ವಿವಿಧ ಮಾಸಾಶನ ಫಲಾನುಭವಿಗಳು ಇದ್ದು ಅವರಲ್ಲಿ 1,24,505 ಫಲಾನುಭವಿಗಳ ಆಧಾರ ಸೀಡಿಂಗ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದರು.  ಗದಗ, ರೋಣ, ಶಿರಹಟ್ಟಿ ತಾಲೂಕಾ ತಹಶೀಲ್ದಾರರು ತಮ್ಮ ವ್ಯಾಪ್ತಿಯ ಮಾಸಾಶನ ಫಲಾನುಭವಿಗಳ ಆಧಾರ ಸೀಡಿಂಗ್ ಕಾರ್ಯವನ್ನು ತೀವ್ರಗೊಳಿಸಬೇಕು.  ಇನ್ನೂ ಕೂಡ ಅಂಚೆ ಮೂಲಕ ವಿತರಿಸುವ ಮಾಸಾಶನವನ್ನು ಅವರ ಬ್ಯಾಂಕ್ ಖಾತೆಗಳಿಗೆ ನೇರ ಪಾವತಿಗೆ ಕ್ರಮ ಜರುಗಿಸಬೇಕು.  ರಾಜ್ಯ ಸರ್ಕಾರ ನೀಡುವ ಮಾಸಾಶನ ಫಲಾನುಭವಿಗಳಿಗೆ ನಿಗದಿತ ಅವಧಿಯಲ್ಲಿ ದೊರೆತರೆ  ಎಷ್ಟೋ ಅನುಕೂಲವಾಗುತ್ತದೆ.  

ಅಂಗವಿಕಲ  ಮಾಸಾಶನ ಕುರಿತಂತೆ ಇನ್ನೂ ಮಾಸಾಶನ ದೊರೆಯದ ನಿಜವಾದ ಫಲಾನುಭವಿಗಳಿಗೆ ಪರಿಹಾರ  ನೀಡಲು ತಹಶೀಲ್ದಾರರು, ಆರೋಗ್ಯ, ಕ್ಷೇತ್ರ ಶಿಕ್ಷಣಾಧಿಕಾಗಳ ಸಮನ್ವಯ ಸಭೆ ಜರುಗಿಸಬೇಕು.  ಸ್ಥಳೀಯ ಸಂಸ್ಥೆ  ಮುಖ್ಯಾಧಿಕಾರಿಗಳು ಮರಣ ಹೊಂದಿದ ಫಲಾನುಭವಿಗಳ ದಾಖಲೆಗಳನ್ನು  ವಿಳಂಬಿಸದೇ ತಹಶೀಲ್ದಾರರಿಗೆ ಒದಗಿಸಬೇಕು.  ಈ ಕುರಿತು ಜರುಗಿಸಿದ ಕ್ರಮಗಳ ಕುರಿತು ಮುಂದಿನ ತಿಂಗಳ ಸಭೆಯಲ್ಲಿ  ಮಾಹಿತಿ ನೀಡಲು ಡಾ. ರಾಜಕುಮಾರ  ಖತ್ರಿ ತಿಳಿಸಿದರು.  

ಜಿಲ್ಲೆಯ 343 ಗ್ರಾಮಗಳ ಪೈಕಿ 101 ಗ್ರಾಮಗಳಲ್ಲಿ ಸ್ಮಶಾನ  ಭೂಮಿ ಒದಗಿಸಲು  ಕ್ರಮ ಜರುಗಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.  ಜಿಲ್ಲೆಯ ಗ್ರಾಮಗಳಿಗೆ ಜನಸಂಖ್ಯೆ ಆಧರಿಸಿ ಅಗತ್ಯ  ಸ್ಮಶಾನ  ಜಾಗೆ ಗುರುತಿಸಲು ಡಾ. ಖತ್ರಿ  ಸೂಚನೆ ನೀಡಿದರು.

ರಾಷ್ಟ್ರೀಯ ಹೆದ್ದಾರಿ ಹಾಗೂ ರೈಲ್ವೆ ಅಧಿಕಾರಿಗಳು ಮುಂದಿನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಹಾಜರಿದ್ದು ಗದಗ - ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕುರಿತು ಹಾಗೂ ರೇಲ್ವೆ ಯೋಜನೆಗಳ ಕುರಿತು ಮಾಹಿತಿ ನೀಡುವಂತೆ ಕ್ರಮ ವಹಿಸಲು ಜಿಲ್ಲಾ ಉಸ್ತುವಾರಿ  ಕಾರ್ಯದಶರ್ಿಗಳು ನಿದರ್ೇಶನ ನೀಡಿದರು.  ಗ್ರಾಮದ ಅಭಿವೃದ್ಧಿ ಕುರಿತು ಆಯಾ  ಗ್ರಾ. ಪಂ. ಗಳಲ್ಲಿ  ಕ್ರಿಯಾ ಯೋಜನೆ  ಸಿದ್ಧಪಡಿಸುವ ಅವಕಾಶ ಇರುವ ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆಯಡಿ ಜಿಲ್ಲೆಯಲ್ಲಿ 17 ಗ್ರಾಮಗಳಿಗೆ 17 ಕೋಟಿ ರೂ. ಅನುದಾನ ನಿಗದಿಪಡಿಸಿದೆ.  ಇದರಲ್ಲಿ 3.03 ಕೋಟಿ ರೂ. ವೆಚ್ಚಮಾಡಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ ಕೆ  ತಿಳಿಸಿದರು.  ಈಗಾಗಲೇ  ಹೆಚ್ಚಿನ ಕಾಮಗಾರಿ ಆಗಿರುವ ಗ್ರಾಮಗಳ ಪಿಡಿಓಗಳು ಮುಂದಿನ ತಿಂಗಳು ಜಿಲ್ಲಾ  ಪರಿಶೀಲನಾ ಸಭೆಯಲ್ಲಿ ಹಾಜರಿದ್ದು  ಯಾವ ಯಾವ ಕಾಮಗಾರಿಗಳಾಗಿವೆ.  ಇದರಿಂದ ಗ್ರಾಮ ಅಭಿವೃದ್ಧಿ ಜನರಿಗೆ ಅನುಕೂಲ ಅಗಿದೆಯೇ ಎನ್ನುವ ಗುಣಾತ್ಮಕ ವರದಿ ನೀಡಲು  ಕ್ರಮ ಜರುಗಿಸಲು ಜಿಲ್ಲಾ ಉಸ್ತುವಾರಿ  ಕಾರ್ಯದಶರ್ಿಗಳು ಸೂಚನೆ ನೀಡಿದರು. 

ಗಂಗಾ ಕಲ್ಯಾಣ ಯೋಜನೆಯಡಿ ವಿವಿಧ ನಿಗಮಗಳಿಂದ ಬಾಕಿ ಉಳಿದ ವಿದ್ಯುತ್ ಜೋಡಣಿ  ಕಾರ್ಯ ಕುರಿತಂತೆ ಹೆಸ್ಕಾಂ ಅಧಿಕಾರಿಗಳ ವಾಸ್ತವ ವರದಿ ನೀಡಬೇಕು.   ವಿದ್ಯಾರ್ಥಿ  ವಸತಿ ನಿಲಯಗಳ ಶಾಲಾ ಕೊಠಡಿ ಇತ್ಯಾದಿ ಯಾವುದೇ ಇಲಾಖೆ ಕಟ್ಟಡ ಕಾಮಗಾರಿ ಕುರಿತಂತೆ ಆಯಾ ಇಲಾಖಾ ಜಿಲ್ಲಾ ತಾಲೂಕಾ ಅಧಿಕಾರಿಗಳು ಆಸ್ಥೆ ವಹಿಸಿ ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಕ್ರಮ ವಹಿಸಬೇಕು.  ದೇವಸ್ಥಾನ,  ಮಸೀದಿ ಮುಂತಾದ ಧಾಮರ್ಿಕ ಸ್ಥಳಗಳ  ಸಾಮೂಹಿಕ ಮಾಲೀಕತ್ವದ ಆಸ್ತಿಗಳನ್ನು ಮುಜರಾಯಿ ಹಾಗೂ  ವಕ್ಫ ಬೋರ್ಡ ಮುಂದಿನ ಪೀಳಿಗೆಗಾಗಿ ಸಂರಕ್ಷಣೆಗೆ ಕ್ರಮ ವಹಿಸಬೇಕು.   ಸಂಸದರು, ಶಾಸಕರು, ಪ್ರದೇಶಾಭಿವೃದ್ಧಿ ಅನುದಾನ ಬಳಕೆಯಲ್ಲಿ ಜಿಲ್ಲೆ ಕೆಳಗಿನಿಂದ 5 ಸ್ಥಾನದಲ್ಲಿದ್ದು ಅನುದಾನ ಬಿಡುಗಡೆ, ಕಾಮಗಾರಿ ಆರಂಭಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು.  ಭಾರತ ಹತ್ತಿ ನಿಗಮ ಜಿಲ್ಲೆಯಲ್ಲಿ ಉದ್ಯೋಗ ಹೆಚ್ಚಿಸುವ ಅವಕಾಶ ಇರುವ ಉದ್ದಿಮೆಗಳ  ಸ್ಥಾಪನೆ ಕುರಿತು ಕನ್ಸಲ್ಟೇಶನ್ ಪ್ರಸ್ತಾವನೆಯನ್ನು  ಡಿಸೆಂಬರ್ 5 ರ ಒಳಗಾಗಿ ತಮಗೆ ಸಲ್ಲಿಸಲು  ಜಿಲ್ಲಾ ಉಸ್ತುವಾರಿ ಕಾರ್ಯದಶರ್ಿ ಡಾ. ರಾಜಕುಮಾರ ಖತ್ರಿ ನಿರ್ದೇಶನ ನೀಡಿದರು.   

ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರುದ್ರೇಶ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು , ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಸಭೆಯಲ್ಲಿ ಭಾಗವಹಿಸಿದ್ದರು.