ಲೋಕದರ್ಶನ ವರದಿ
ಕೊಪ್ಪಳ 08: ಕೊರೊನಾ ವೈರಾಣು ವ್ಯಾಪಕವಾಗಿ ಹರಡುತ್ತಿರುವುದರಿಂದ ತಡೆಗಟ್ಟುವ ನಿಮಿತ್ತ ರಾಜ್ಯ ಸೇರಿದಂತೆ ಇಡೀ ದೇಶವೇ ಲಾಕ್ಡೌನ್ ಘೋಷಣೆಯಾಗಿರುವುದರಿಂದ ಸಂಪೂರ್ಣ ಸ್ತಬ್ಧವಾಗಿದೆ. ಲಾಕ್ಡೌನ್ ಹಿನ್ನಲೆಯಲ್ಲಿ ಬುಧುವಾರ ಕೊಪ್ಪಳ ನಗರದ 5, 12, 22ನೇ ವಾಡರ್್ನಲ್ಲಿ ಕಿರ್ಲೊಸ್ಕರ್ ಕಂಪನಿವತಿಯಿಂದ ಬಡಜನರಿಗೆ ಆಹಾರ ಧಾನ್ಯದ ಕಿಟ್ ವಿತರಿಸಿದರು. ಲಾಕ್ಡೌನ್ನಿಂದ ಯಾರೂ ಮನೆಯಿಂದ ಹೊರಬರದಂತೆ ಆದೇಶಿಸಲಾಗಿದ್ದು, ಸಾರ್ವಜನಿಕರು ದಿನಬಳಕೆ ವಸ್ತುಗಳ ಖರೀದಿಗೆ ಪರಿತಪಿಸುವಂತಾಗಿದೆ. ಇಂತಹ ಕಷ್ಟಕರ ಪರಿಸ್ಥಿತಿಯಲ್ಲಿ ಕೊಪ್ಪಳ ನಗರದ 5,12 ಮತ್ತು 22ನೇ ವಾಡರ್್ನಲ್ಲಿ ಕಿರ್ಲೊಸ್ಕರ್ ಕಂಪನಿ ಸ್ವಂತ ಖಚರ್ಿನಲ್ಲಿ ವಾಡರ್್ನ ಮನೆಗಳಿಗೆ ಉಚಿತವಾಗಿ ಆಹಾರ ಧಾನ್ಯ ಕಿಟ್ಗಳನ್ನು ಹಂಚಿರುವುದು ವಾರ್ಡ್ ಜನರಮೆಚ್ಚುಗೆಗಳಿಸಿದೆ. ಕೂಲಿ ಕಾಮರ್ಿಕರೇ ಹೆಚ್ಚಿನ ಸಂಖ್ಯೆಯಲ್ಲಿರುವ ಈ ವಾಡರ್್ನ ಜನರು ಲಾಕ್ಡೌನ್ ದಿನಗಳಿಂದ ಕೆಲಸವಿಲ್ಲದೆ, ದುಡ್ಡು ಇಲ್ಲದೆ ಮನೆಯಲ್ಲಿ ಕುಳಿತು ಪರಿತಪಿಸುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಇದನ್ನು ಮನಗಂಡ ದಿನಸಿ ಕಿಟ್ ಹಂಚಿರುವುದು ಎಲ್ಲಾರಲ್ಲಿ ಮೆಚ್ಚುಗೆ ಪಾತ್ರವಾಗಿದೆ. ಈ ವೇಳೆ ಕಿಲರ್ೊಸ್ಕರ್ ಕಂಪನಿಯ ಉದಯ ಕುಲಕರ್ಣಿ, ಮನೋಜ ಶ್ರೀನಿವಾಸ, ನಗರ ಠಾಣೆಯ ಸಿಪಿಐ ಮೌನೇಶ್ ಪಾಟೀಲ್ ಸೇರಿದಂತೆ ಇತರರು ಇದ್ದರು.