ಗೃಹ ಸಚಿವನಾದರೂ ಜಿಲ್ಲೆಯ ನೀರಾವರಿಗೆ ಶ್ರಮಿಸುವೆ

ಲೋಕದರ್ಶನ ವರದಿ

ವಿಜಯಪುರ 4: ನಾನು ಗೃಹ ಸಚಿವನಾಗಿದ್ದರೂ, ನೀರಾವರಿ ನನ್ನ ನೆಚ್ಚಿನ ವಿಷಯ. ಜಿಲ್ಲೆಯ ನೀರಾವರಿ ಯೋಜನೆಗಳ ಅನುಷ್ಠಾನಕ್ಕಾಗಿ ನಾನು ಸದಾ ಶ್ರಮಿಸುತ್ತೇನೆ ಎಂದು ಗೃಹ ಸಚಿವ ಎಂ.ಬಿ.ಪಾಟೀಲ ಹೇಳಿದರು.

   ನಗರದ ಜ್ಞಾನಯೋಗಾಶ್ರಮಕ್ಕೆ ಗುರುವಾರ ಸಂಜೆ ಭೇಟಿ ನೀಡಿದ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಪರಮಪೂಜ್ಯರಾದ ಭಂಥನಾಳ ಶ್ರೀಗಳು, ಡಾ.ಫ.ಗು.ಹಳಕಟ್ಟಿಯವರು, ನನ್ನ ತಂದೆ ಬಿ.ಎಂ.ಪಾಟೀಲರು ಹಾಗೂ ಪೂಜ್ಯ ಸಿದ್ಧೇಶ್ವರ ಶ್ರೀಗಳ ಆಶೀವರ್ಾದದಿಂದ ನನಗೆ ಈ ಖಾತೆ ದೊರೆತಿದ್ದು, ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ನೀರಾವರಿ ಇಲಾಖೆಯಂತೆ ಇಲ್ಲಿಯೂ ಕೂಡಾ ಅತ್ಯುತ್ತಮ ಕಾರ್ಯಮಾಡಿ ವಿಜಯಪುರ ಜಿಲ್ಲೆಯ ಜನತೆಗೆ ಹೆಸರು ತರುತ್ತೇನೆ ಎಂದರು.

   ಗೃಹ ಇಲಾಖೆ ಅತ್ಯಂತ ಸೂಕ್ಷ್ಮವಾಗಿದ್ದು, ಈ ಖಾತೆಯನ್ನು ಜವಾಬ್ದಾರಿಯಿಂದ ನಿರ್ವಹಿಸಿ, ವಿಜಯಪುರ ಜಿಲ್ಲೆಗೆ ಹೆಸರು ತರುತ್ತೇನೆ. ಜಿಲ್ಲೆಯಲ್ಲಿ ನಾನು ಆರಂಭಿಸಿದ ಎಲ್ಲ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವತ್ತ ಸಹ ನಾನು ಲಕ್ಷ್ಯ ವಹಿಸುತ್ತೇನೆ ಎಂದರು. 

    ಜ್ಞಾನಯೋಗಾಶ್ರಮದ ಅಧ್ಯಕ್ಷರಾದ ಬಸವಲಿಂಗ ಶ್ರೀಗಳು ಮಾತನಾಡಿ, ಬರದ ಈ ನಾಡಿಗೆ ನೀರು ಹರಿಸಿ, ಭಗೀರಥರೆನಿಸಿಕೊಂಡು ರೈತರ ಪಾಲಿಗೆ ಎಂ.ಬಿ.ಪಾಟೀಲರು ಸಾಕ್ಷಾತ್ ದೇವರಾಗಿದ್ದಾರೆ. 

  ಅಷ್ಟು ಪ್ರಮಾಣದಲ್ಲಿ ರೈತರು ಇವರನ್ನು ಸ್ಮರಿಸುತ್ತಾರೆ. ಗೃಹ ಇಲಾಖೆಯನ್ನು ಕೂಡಾ ಇವರು ಸಮರ್ಥರಾಗಿ ನಿಭಾಯಿಸುತ್ತಾರೆ. ಇವರಿಗೆ ಬಸವಾದಿ ಶರಣರ, ಮಲ್ಲಿಕಾಜರ್ುನ ಶಿವಯೋಗಿಗಳ, ಸಿದ್ಧೇಶ್ವರ ಶ್ರೀಗಳ ಆಶೀವರ್ಾದ ಇದೆ ಎಂದರು.

   ಇದೇ ಸಂದರ್ಭದಲ್ಲಿ ಬಿ.ಎಲ್.ಡಿ.ಇ ನೌಕರರ ಬಡಾವಣೆಯ ಪರವಾಗಿ ಸಚಿವರನ್ನು ಸನ್ಮಾನಿಸಲಾಯಿತು. 

  ಡಾ.ಶ್ರದ್ಧಾನಂದ ಶ್ರೀಗಳು, ಅಭಯಾನಂದ ಶ್ರೀಗಳು ವೇದಿಕೆಯಲ್ಲಿದ್ದರು. ವಿ.ಸಿ.ನಾಗಠಾಣ ಸ್ವಾಗತಿಸಿದರು,ಎಂ.ಆಯ್.ಕುಮಟಗಿ, ಜಂಬುನಾಥ ಕಂಚ್ಯಾಣಿ, ಬಿ.ಎಚ್.ಹಿರೇಮಠ, ಡಾ.ಎಂ.ಎಸ್.ಮದಭಾವಿ, ಎ.ಎಸ್.ಪಾಟೀಲ ಹೊನ್ನುಟಗಿ ಮತ್ತಿತರರು ಉಪಸ್ಥಿತರಿದ್ದರು.