ನವದೆಹಲಿ, ಆಗಸ್ಟ್ 6 ಲೋಕಸಭೆಯಲ್ಲಿ ಮಂಗಳವಾರ ಆರಂಭದಿಂದಲೇ ಬಿಜೆಪಿ ಸದಸ್ಯರು ಹಾಗೂ ಕೇಂದ್ರ ಸಚಿವರಲ್ಲಿ ಸಂಭ್ರಮ, ಉತ್ಸಾಹ ಮನೆ ಮಾಡಿರುವುದು ಕಂಡುಬಂತು.. ಜಮ್ಮು - ಕಾಶ್ಮೀರ ಕುರಿತಂತೆ ಸರ್ಕಾರದ ಬಹುನೀರಿಕ್ಷಿತ ಶಾಸನಬದ್ಧ ನಿರ್ಣಯ ಹಾಗೂ ವಿದೇಯಕಗಳನ್ನು ಅನುಮೋದಿಸಲು ಅವರು ಸಿದ್ದವಾಗಿ ಬಂದಂತೆ ಕಂಡು ಬಂತು.
ಜಮ್ಮು ಕಾಶ್ಮೀರ ಪುನರ್ ವಿಂಗಡನೆ ವಿಧೇಯಕ, ಸಂವಿಧಾನ ಕಲಂ 370 ಕುರಿತ ಶಾಸನ ಬದ್ದ ನಿರ್ಣಯ ಹಾಗೂ ಜಮ್ಮು ಮತ್ತು ಕಾಶ್ಮೀರ ಮೀಸಲಾತಿ ವಿಧೇಯಕಗಳಿಗೆ ಸೋಮವಾರ ರಾಜ್ಯಸಭೆ ಅಂಗೀಕಾರ ನೀಡಿತ್ತು
ಲೋಕಸಭೆಯನ್ನು ಗೃಹಸಚಿವ ಅಮಿತ್ ಶಾ ಪ್ರವೇಶಿಸುತ್ತಿದ್ದಂತೆಯೇ ಆಡಳಿತಾರೂಡ ಬಿಜಿಪಿ ಸದಸ್ಯರು ಜೈ ಶ್ರೀ ರಾಂ ಎಂದು ಘೋಷಣೆ ಕೂಗುವ ಮೂಲಕ ಮೇಜು ಕುಟ್ಟಿ ಸ್ವಾಗತಿಸಿದರು
ಲೋಕಸಭೆ ಇಂದು ಬೆಳಗ್ಗೆ ಸಮಾವೇಶಗೊಳ್ಳುವ ಐದು ನಿಮಿಷಗಳ ಮುಂಚೆಯೇ ಗೃಹ ಸಚಿವ ಅಮಿತ್ ಶಾ, ಸದನಕ್ಕೆ ಆಗಮಿಸಿದರು ಹಲವು ಬಿಜೆಪಿ ಸದಸ್ಯರು, ಕೇಂದ್ರ ಸಚಿವರು ಸಹ ಕಲಾಪ ಆರಂಭಕ್ಕೆ ಮುನ್ನವೇ ಸದನ ಪ್ರವೇಶಿಸಿದ್ದರು.
ಅಮಿತ್ ಶಾ ಅವರ ಇಬ್ಬರ ಸಹಾಯಕ ರಾಜ್ಯ ಸಚಿವರಾದ ಜಿ. ಕಿಶನ್ ರೆಡ್ಡಿ ಹಾಗೂ ನಿತ್ಯಾನಂದ್ ರಾಯ್ ಸದನಕ್ಕೆ ಮೊದಲು ಬಂದವರಲ್ಲಿ ಸೇರಿದ್ದರು
ಒಂದು ಹಂತದಲ್ಲಿ ಕೇಂದ್ರ ಪಶುಸಂಗೋಪನಾ ಸಚಿವ ಗಿರಿರಾಜ್ ಸಿಂಗ್, ಎಐಎಂಐಎಂ ನಾಯಕ ಅಸಾದುದ್ದೀನ್ ಓವೈಸಿ ಅವರೊಂದಿಗೆ ದೊಡ್ಡ ಧ್ವನಿಯಲ್ಲಿ ಮಾತುಕತೆ ನಡೆಸುತ್ತಿದ್ದು ಕಂಡು ಬಂತು. ಇಬ್ಬರೂ ನಾಯಕರು ಲೋಕಸಭೆಯ ಇಂದಿನ ಕಲಾಪಕ್ಕೆ ಸೂಕ್ತ ಸಿದ್ಧತೆಮಾಢಿಕೊಳ್ಳುವಂತೆ ಖುಷಿಯಿಂದ ಹೇಳುತ್ತಿರುವುದು ಕೇಳಿ ಬಂತು.
ಲೋಕಸಭೆಯ ಉಪನಾಯಕರೂ ಆಗಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಹಿರಿಯ ಸದಸ್ಯರಾದ ರಾಹುಲ್ ಗಾಂಧಿ, ಸೋನಿಯಾಗಾಂಧಿ ಸಹ ಹಾಜರಿದ್ದರು.