ಮನೆ ಹಾನಿ ಸಮೀಕ್ಷೆ ಆರಂಭ: ಡಿಸಿ

ಬಾಗಲಕೋಟೆ: ಜಿಲ್ಲೆಯಲ್ಲಿ ಉಂಟಾದ ಪ್ರಕೃತಿ ವಿಕೋಪದಿಂದ ಸಾಕಷ್ಟು ಮನೆಗಳು ಹಾನಿಗೊಳಗಾಗಿದ್ದು, ವಿವಿಧ ನುರಿತ ಇಂಜಿನೀಯರಗಳು ಒಳಗೊಂಡ ತಂಡದಿಂದ ಗ್ರಾಮವಾರು ಮನೆಗಳ ಹಾನಿ ಸಮೀಕ್ಷೆ ಕಾರ್ಯವನ್ನು ಆರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ತಿಳಿಸಿದ್ದಾರೆ.

ಉಪವಿಭಾಗ ಮಟ್ಟದಲ್ಲಿ ಉಪವಿಭಾಗಾಧಿಕಾರಿಗಳ ನೇತೃತ್ವದಲ್ಲಿ ಕಂದಾಯ, ಗ್ರಾಮೀಣಾಭಿವೃದ್ದಿ, ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಇವರ ಜೊತೆಗೆ ವಿವಿಧ ತಾಂತ್ರಿಕ ಕಾಲೇಜುಗಳ ಸಿವಿಲ್ ಇಂಜಿನೀಯರಿಂಗ್ ವಿಭಾಗದ ಪ್ರಾದ್ಯಾಪಕರು ಹಾಗೂ ತಾಂತ್ರಿಕ ಸಿಬ್ಬಂದಿಗಳನ್ನೊಳಗೊಂಡ ತಂಡದೊಂದಿಗೆ ಜಂಟಿಯಾಗಿ ಸಮೀಕ್ಷೆ ಮಾಡಿಸಲಾಗುತ್ತಿದೆ ಎಂದರು.

ಬಾಗಲಕೋಟೆಯ ಇಂಜಿನೀಯರ್ ಕಾಲೇಜ,  ಬಿ.ವಿ.ವಿ.ಎಸ್ ಪಾಲಿಟೆಕ್ನಿಕ್, ಸಕರ್ಾರಿ ಪಾಲಿಟೆಕ್ನಿಕ್, ಗುಳೇದಗುಡ್ಡದ ಬಿವಿವಿಎಸ್ ಪಾಲಿಟೆಕ್ನಿಕ್, ಹುನಗುಂದದ ಸಿ.ವಿ.ಚರಂತಿಮಠ ರೂರಲ್ ಪಾಲಿಟೆಕ್ನಿಕ್, ಮುಧೋಳದ ಬೀಳೂರು ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ಇಂಜಿನೀಯರಿಂಗ್ ಕಾಲೇಜ, ಮಹಾಲಿಂಗಪೂರದ ಕೆ.ಎಲ್.ಇ ಸೊಸೈಟಿ ಪಾಲಿಟೆಕ್ನಿಕ್, ಬೀಳಗಿ ಮತ್ತು ರಬಕವಿ-ಬನಹಟ್ಟಿಯ ಸಕರ್ಾರಿ ಪಾಲಿಟೆಕ್ನಿಕ್ನ ತಲಾ 6 ಜನ ತಾಂತ್ರಿಕ ಸಿಬ್ಬಂದಿ ಸೇರಿ ಒಟ್ಟು 54 ತಾಂತ್ರಿಕ ಸಿಬ್ಬಂದಿಗಳನ್ನು ಸಮೀಕ್ಷೆ ಕಾರ್ಯಕ್ಕೆ ನಿಯೋಜಿಸಲಾಗಿದೆ ಎಂದರು. 

194 ಗ್ರಾಮಗಳು ಪ್ರವಾಹ ಪೀಡಿತ ಗ್ರಾಮಗಳಾಗಿದ್ದು, ನಗರ ಮತ್ತು ಗ್ರಾಮೀಣ ಪ್ರದೇಶ ಸೇರಿ ಒಟ್ಟು 24800 ಮನೆಗಳು ಹಾನಿಗೊಳಗಾಗಿದ್ದು, ಪ್ರತಿಯೊಂದು ಗ್ರಾಮಕ್ಕೆ ತೆರಳಿ ಯಾವುದೇ ರೀತಿಯಲ್ಲಿ ಲೋಪಕ್ಕೆ ಅವಕಾಶ ನೀಡದಂತೆ ಸಮೀಕ್ಷೆ ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ. ಸರಕಾರದ ಆದೇಶದನ್ವಯ ಶೇ.15 ರಿಂದ ಶೇ.25 ರಷ್ಟು ಮೂಲ ರಚನೆಗೆ ದಕ್ಕೆಯಾಗದೆ ಅಲ್ಪ ಸ್ವಲ್ಪ ಹಾನಿಗೀಡಾದ ಮನೆಗಳಿಗೆ 25 ಸಾವಿರ ಹಾಗೂ ಶೇ.25 ರಿಂದ ಶೇ.75 ರಷ್ಟು ಮನೆಯ ಗೋಡೆ ಅಥವಾ ತಾರಸಿ ಪುನರ್ ನಿಮರ್ಾಣ ಅಗತ್ಯವಿರುವ ಬಾಗಶಃ ಹಾನಿಗೀಡಾದ ಮನೆಗಳಿಗೆ 1 ಲಕ್ಷ ರೂ.ಗಳ ಪರಿಹಾರಧನ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಸಂಪೂರ್ಣ ಹಾನಿಗೊಳಗಾದ ಅಥವಾ ತೀವ್ರವಾಗಿ ಹಾನಿಗೊಳಗಾದ ಮನೆಗಳ ಸಂಪೂರ್ಣ ಪುನರ್ ನಿಮರ್ಾಣಕ್ಕಾಗಿ ಪ್ರತಿ ಮನೆಗಳಿಗೆ 5 ಲಕ್ಷ ರೂ.ಗಳ ವರೆಗಿನ ಪರಿಹಾರಧನ ನೀಡಲಾಗುವುದು. ಸಂಪೂರ್ಣ ಮನೆಹಾನಿ ಗೊಳಗಾದವರು ತಮ್ಮ ತಮ್ಮ ಮನೆಗಳನ್ನು ತಾವೇ ನಿಮರ್ಿಸಿಕೊಳ್ಳಲು ಬಯಸಿದಲ್ಲಿ 5 ಲಕ್ಷ ರೂ.ಗಳನ್ನು ಹಂತ ಹಂತವಾಗಿ ಅವರ ಖಾತೆಗಳಿಗೆ ಜಮಾ ಮಾಡಲಾಗುತ್ತದೆ. ಜಿಲ್ಲೆಯಲ್ಲಿ 2009ರ ಪ್ರವಾಹ ನಂತರ ನಿಮರ್ಿಸಲಾದ ಆಸರೆ ಮನೆಗಳು ಬಳಸದೇ ಖಾಲಿಯಾಗದ ಹಿನ್ನಲೆಯಲ್ಲಿ ಸಾವಿರಾರು ಮನೆಗಳನ್ನು ಆಗಿನ ಸಂತ್ರಸ್ತರು ಬಳಸಿಲ್ಲ. ಆದರೆ ಈ ಬಾರಿ ತಮ್ಮ ಮನೆಗಳನ್ನು ತಾವೇ ನಿಮರ್ಿಸಿಕೊಳ್ಳುವ ನಿಟ್ಟಿನಲ್ಲಿ ಪ್ರವಾಹ ಸಂತ್ರಸ್ತರಿಗೆ ಪರಿಹಾರ ಒದಗಿಸುವಲ್ಲಿ ಸಕ್ರಿಯವಾಗಿರುವ ಜಿಲ್ಲಾಡಳಿತ ಗ್ರಾಮ ಪಂಚಾಯತ ವ್ಯಾಪ್ತಿಗಳ ಆಶ್ರಯ ಮನೆ ಮಾದರಿಯಲ್ಲಿಯೇ ಹಂತ ಹಂತವಾಗಿ ಅನುದಾನ ಬಿಡುಗಡೆ ಮಾಡಲು ಯೋಜಿಸಲಾಗಿದೆ ಎಂದರು. 

ರಾಜೀವ ಗಾಂಧಿ ಹೌಸಿಂಗ್ ನಿಗಮದ ಜೊತೆ ಚಚರ್ಿಸಲಾಗಿದ್ದು, ಮನೆ ಹಾನಿ ವರದಿಗಳನ್ನು ಪ್ರತಿದಿನ ತಂತ್ರಾಂಶದಲ್ಲಿ ಅಪ್ಲೋಡ್ ಮಾಡಲಾಗುತ್ತಿದೆ. ಈ ಕುರಿತು ನಿಗಮದ ಆಯುಕ್ತರಾದ ರವಿಕುಮಾರ ಜೊತೆ ದೂರವಾಣಿ ಮೂಲಕ ಸಂಭಾಷಣೆ ನಡೆಸಿರುವುದಾಗಿ ತಿಳಿಸಿದ್ದಾರೆ.

ಅನಧಿಕೃತವಾಗಿ ಕೃಷಿ ಭೂಮಿಗಳಲ್ಲಿ ನಿಮರ್ಿಸಿಕೊಂಡಿರುವ ಮನೆಗಳನ್ನು ಸಹ ಸಮೀಕ್ಷೆಯಲ್ಲಿ ತೆಗೆದುಕೊಳ್ಳಲಾಗುತ್ತಿದೆ. ಇಲ್ಲಿವರೆಗೆ 40292 ಸಂತ್ರಸ್ತರಾಗಿದ್ದು, 232 ಪರಿಹಾರ ಕೇಂದ್ರದ ಮೂಲಕ ಊಟ, ಆರೋಗ್ಯ ಸೌಲಭ್ಯ ಒದಗಿಸಲಾಗುತ್ತಿದೆ ಎಂದರು.