ಮನೆಯಲ್ಲಿಯೇ ಪವಿತ್ರ ರಂಜಾನ್ ಹಬ್ಬ ಆಚರಣೆ

ಹೊಸಪೇಟೆ23: ನಗರದ ಚಿತ್ತವಾಡ್ಗಿ ಪೊಲೀಸ್ ಠಾಣೆಯಲ್ಲಿ ರಂಜಾನ್ ಹಬ್ಬದ ಪ್ರಯುಕ್ತ ಮುಸ್ಲಿಂ ಸಮಾಜದ ಮುಖಂಡರ ನೇತೃತ್ವದಲ್ಲಿ ಶಾಂತಿ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.  

ಈ ಸಂದರ್ಭದಲ್ಲಿ ಹೊಸಪೇಟೆ ಅಂಜುಮನ್ ಕಮಿಟಿಯ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಹೆಚ್.ಎನ್ ಮೊಹಮ್ಮದ್ ಇಮಾಮ್ ನಿಯಾಜಿರವರು ಮಾತನಾಡಿ ಪ್ರತಿ ವರ್ಷ ರಂಜಾನ್ ಹಬ್ಬದಲ್ಲಿ 30 ದಿನಗಳವರೆಗೆ ಉಪವಾಸವನ್ನು ಆಚರಿಸಿ ಕೊನೆಯದಿನ  ಎಲ್ಲರೂ ಸೇರಿ  ಹತ್ತಿರದ ಈದ್ಗಾ ಮೈದಾನದಲ್ಲಿ ಸಾಮೂಹಿಕವಾಗಿ ಪ್ರಾರ್ಥನೆ   ಸಲ್ಲಿಸುತ್ತಿದ್ದೆವು. ಆದರೆ ಈ ವರ್ಷ ಕರೋನ ವೈರಸ್ (ಕೋವಿಡ್ 19) ಎಂಬ ಮಹಾಮಾರಿ ಜಗತ್ತಿನಾದ್ಯಂತ ಲಕ್ಷಾಂತರ ಜನರನ್ನು ಬಲಿ ಪಡೆದಿದ್ದು ಹಾಗು ಭಾರತದಲ್ಲಿಯೂ ಸಹ ಸಾವಿರಾರು ಜನರನ್ನು ಬಲಿ ಪಡೆದಿದೆ. 

ಈ ಕರೋನದ ವಿರುದ್ಧವಾಗಿ ನೆಡೆಯುತ್ತಿರುವ ಹೋರಾಟ  ಸಲುವಾಗಿ ಕೇಂದ್ರ ಹಾಗು ರಾಜ್ಯ ಸರಕಾರಗಳು ಕೈಗೊಂಡ ಆದೇಶಗಳನ್ನು ಹಾಗು ವಕ್ಫ್ ಮಂಡಳಿ ಆದೇಶವನ್ನು  ಪಾಲನೆ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಯಾರೊಬ್ಬರೂ ರಂಜಾನ್ ಹಬ್ಬದ ಪ್ರಾರ್ಥನೆ ಸಲ್ಲಿಸುವದರ ಸಲುವಾಗಿ ಈದ್ಗಾ ಮೈದಾನಕ್ಕೆ ತೆರಳದೆ ತಮ್ಮ ತಮ್ಮ ಮನೆಯಲ್ಲಿಯೆ ಪ್ರಾರ್ಥನೆ ಸಲ್ಲಿಸಬೇಕಾಗುತ್ತದೆ. ಹಾಗು ರಂಜಾನ್ ಹಬ್ಬವನ್ನು ಚಂದ್ರ ದರ್ಶನದ ಆಧಾರದ ಮೇಲೆ ರವಿವಾರ ಅಥವಾ ಸೋಮವಾರ ಆಚರಿಸಲಾಗುತ್ತದೆ. ಆದ್ದರಿಂದ ನಮ್ಮ ಎಲ್ಲಾ ಮುಸ್ಲಿಂ  ಬಾಂಧವರು ರಂಜಾನ್ ಹಬ್ಬದ ಪ್ರಾರ್ಥನೆ  ಸಲ್ಲಿಸುವಾಗ ಪ್ರತಿಯೊಬ್ಬ ಭಾರತೀಯರು ಕೇಂದ್ರ ಹಾಗು ರಾಜ್ಯ ಸರಕಾರಗಳು  ಕರೋನದ ವಿರುದ್ಧ ಹೋರಾಟದ ಸಲುವಾಗಿ ಕೈಗೊಂಡ ಆದೇಶಗಳನ್ನು ಪಾಲನೆಯನ್ನು ಮಾಡುತ್ತಾ ಇಡೀ ದೇಶದಲ್ಲಿ  ಮಳೆ, ಬೆಳೆ ಸಮೃದ್ಧವಾಗಿ ಸುಖ, ಶಾಂತಿ , ನೆಮ್ಮದಿ, ಐಶ್ವರ್ಯ, ಆರೋಗ್ಯ  ಆ ಭಗವಂತನು  ನೀಡುವಂತಾಗಲಿ ಎಂದು ಪ್ರಾಥರ್ಿಸೋಣ ಎಂದರು.