ಹಾಲಿವುಡ್ ದಂತಕಥೆ, ಶತಾಯುಷಿ ಕಿರ್ಕ್ ಡೌಗ್ಲಾಸ್ ನಿಧನ

ವಾಷಿಂಗ್ಟನ್, ಫೆ 06, ಹಾಲಿವುಡ್‌ನ ದಂತಕಥೆ ನಟ ಕಿರ್ಕ್ ಡೌಗ್ಲಾಸ್ ನಿಧನರಾಗಿದ್ದಾರೆ  ಅವರಿಗೆ 103ವರ್ಷ ವಯಸ್ಸಾಗಿತ್ತುಆಸ್ಕರ್ ಪ್ರಶಸ್ತಿ ವಿಜೇತ ನಟ ಮೈಕೆಲ್ ಡೌಗ್ಲಾಸ್ ಅವರ ತಂದೆಯೂ ಆಗಿರುವ, ಕಿರ್ಕ್ 6 ದಶಕಗಳ ಕಾಲ ಹಾಲಿವುಡ್ ಅನ್ನು ಆಳಿದ್ದರು  "ಕಿರ್ಕ್ ಡೌಗ್ಲಾಸ್ ಇಂದು ನಮ್ಮನ್ನು ತೊರೆದಿದ್ದಾರೆ ಎಂದು ನನ್ನ ಸಹೋದರರು ಮತ್ತು ನಾನು ತೀವ್ರ ದುಃಖದಿಂದ ಪ್ರಕಟಿಸುತ್ತಿದ್ದೇವೆ” ಎಂದು ಮೈಕೆಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.  ಇಸ್ಸೂರ್ ಡೇನಿಯೊಲೊವಿಚ್ ನಲ್ಲಿ ಜನಿಸಿದ್ದ ಕಿರ್ಕ್,  90 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಪಾತ್ರಗಳನ್ನು ಹೊಂದಿದ್ದರು, ಇದರಲ್ಲಿ ಸ್ಟಾನ್ಲಿ ಕುಬ್ರಿಕ್ ಅವರ “ಸ್ಪಾರ್ಟಕಸ್” (1960) ನಲ್ಲಿ ಮುಖ್ಯ ಪಾತ್ರವಿದೆ. "ಲಸ್ಟ್ ಫಾರ್ ಲೈಫ್" (1956), "ಬ್ಯಾಡ್ & ದಿ ಬ್ಯೂಟಿಫುಲ್" (1952) ಮತ್ತು "ಚಾಂಪಿಯನ್" (1949) ಚಿತ್ರಗಳಿಗಾಗಿ ಅವರು ಮೂರು ಬಾರಿ ಅಕಾಡೆಮಿ ಪ್ರಶಸ್ತಿಗಳಿಗೆ ನಾಮನಿರ್ದೇಶನಗೊಂಡರು. ಇದಲ್ಲದೆ, ಅವರು 1996 ರಲ್ಲಿ ಅಕಾಡೆಮಿ ಗೌರವ ಪ್ರಶಸ್ತಿಗೂ ಭಾಜನರಾದರು..