'ಪೊಗರು' ಚಿತ್ರಕ್ಕಾಗಿ ಆಕ್ಷನ್ ಪ್ರಿನ್ಸ್ ಗೆ ಹಾಲಿವುಡ್ ಸ್ಟಂಟ್ ಮ್ಯಾನ್ ಟ್ರೈನಿಂಗ್

 ಬೆಂಗಳೂರು/ಹೈದರಾಬಾದ್, ಆ 24     ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ 'ಪೊಗರು' ಚಿತ್ರ ಕ್ಲೈಮಾಕ್ಸ್ ಹಂತ ತಲುಪಿದೆ       ರೊಮ್ಯಾಂಟಿಕ್ ಆಕ್ಷನ್ ಮಿಳಿತವಾದ ಮನರಂಜನಾತ್ಮಕ ಚಿತ್ರವಾಗಿರುವ 'ಪೊಗರು' ಈಗಾಗಲೇ ಅತ್ಯಂತ ಕುತೂಹಲ ಹಾಗೂ ನಿರೀಕ್ಷೆ ಉಂಟು ಮಾಡಿದೆ  ಚಿತ್ರದ ಕ್ಲೈಮಾಕ್ಸ್ ಗಾಗಿ ಡಬ್ಲೂ ಡಬ್ಲ್ಯೂ ಎಫ್ ಖ್ಯಾತಿಯ ಸ್ಟಂಟ್ ಮ್ಯಾನ್ ಮೋರ್ಗ್ರಟಿ ತರಬೇತಿ ನೀಡುತ್ತಿರುವುದು ವಿಶೇಷ    ಹೈದರಾಬಾದ್ ನ ರಾಮೋಜಿರಾವ್ ಫಿಲ್ಮ್ ಸಿಟಿಯಲ್ಲಿ 49 ದಿನ ಚಿತ್ರದ ಚಿತ್ರೀಕರಣ ನಡೆಯಲಿದ್ದು, ಈ ಸಂದರ್ಭದಲ್ಲೇ ಮೋಗರ್ೆರಿಟಿ ಅವರು ಧ್ರುವ ಸರ್ಜಾ ಅವರಿಗೆ ತರಬೇತಿ ನೀಡಿದ್ದಾರೆ  ಈ ವಿಷಯವನ್ನು ಸ್ವತಃ ಧ್ರುವ ಸರ್ಜಾ ಅವರೇ ಟ್ವಿಟರ್ ನಲ್ಲಿ ಅಪ್ ಲೋಡ್ ಮಾಡಿದ್ದಾರೆ    ಧ್ರುವ ಸಜರ್ಾ ಅವರ ಹಿಂದಿನ 'ಅದ್ದೂರಿ' 'ಬಹದ್ದೂರ್', 'ಭರ್ಜರಿ' ಚಿತ್ರಗಳಲ್ಲೂ ಆಕ್ಷನ್ ಗೆ ಪ್ರಾಮುಖ್ಯತೆ ನೀಡಲಾಗಿತ್ತು   ಅಂತೆಯೇ ಪೊಗರು ಚಿತ್ರದಲ್ಲಿಯೂ ಸಹ ಆಕ್ಷನ್ ಭರ್ಜರಿಯಾಗಿಯೇ ಇರಲಿದ್ದು, ಮೋಗರ್ೆರಟಿ ಅವರಿಂದ ಸಖತ್ತಾಗಿ ಟ್ರೈನಿಂಗ್ ಪಡೆದುಕೊಂಡು ಕ್ಲೈಮಾಕ್ಸ್ ದೃಶ್ಯಕ್ಕಾಗಿ ಧ್ರುವ ಸರ್ಜಾ ತಯಾರಾಗಿದ್ದಾರೆ    ಪಿ ಕೆ ಗಂಗಾಧರ್ ನಿರ್ಮಾಣದ ಚಿತ್ರಕ್ಕೆ ನಂದ ಕಿಶೋರ್ ನಿರ್ದೇಶನವಿದ್ದು, ತಾರಾಗಣದಲ್ಲಿ ಧ್ರುವ ಸರ್ಜಾ, ರಶ್ಮಿಕಾ ಮಂದಣ್ಣ, ಧನಂಜಯ್, ರವಿಶಂಕರ್, ಸಾಧು ಕೋಕಿಲ, ಚಿಕ್ಕಣ್ಣ, ಕುರಿ ಪ್ರತಾಪ್ ಮೊದಲಾದವರಿದ್ದಾರೆ   ವಿ ಹರಿಕೃಷ್ಣ ಸಂಗೀತ ಸಂಯೋಜನೆಯಿದೆ.