ಲೋಕದರ್ಶನ
ವರದಿ
ಕಾಗವಾಡ 19: ವಿಜಯದಶಮಿ ದಿನದಂದು ಕಾಗವಾಡ ತಾಲೂಕಿನ ಉಗಾರ ಬುದ್ರುಕ ಗ್ರಾಮದೇವತೆ
ಶ್ರೀ ಪದ್ಮಾವತಿ ಮಾತೆಗೆ ಮಹಾಪೂಜೆ ಮತ್ತು ಕೃಷ್ಣಾ ನದಿಗೆ ಹೊಳೆ ಪೂಜೆ ಕಾರ್ಯಕ್ರಮ
ಗುರುವಾರ ರಂದು ಸುಮಾರು 3 ಗಂಟೆ
ಕಾಲ ಅಷ್ಟ ದ್ರವ್ಯಗಳಿಂದ, 1 ಸಾವಿರ
ಲಿಟರ್ ಹಾಲು, ಮೊಸರು, ತುಪ್ಪ, 2 ಸಾವಿರ ಶ್ರೀಫಳಗಳಿಂದ ಭಗವಾನ ಪಾಶ್ರ್ಚನಾಥ ಮೂತರ್ಿಗೆಮಂದಿರದ ಮುಖ್ಯಸ್ಥ ಶೀತಲ ಪಾಟೀಲ ಇವರಿಂದಹೊಳೆಯಲ್ಲಿ
ಅಭಿಷೇಕ ಮಾಡಿ ನದಿಗೆ ಅರ್ಪನೆ
ಮಾಡಿದರು.
ದಸರಾ ಹಬ್ಬದ ನಿಮಿತ್ಯ
ಉಗಾರ ಬುದ್ರುಕಗ್ರಾಮದೇವತೆ ಶ್ರೀ ಪದ್ಮಾವತಿದೇವಿಯಕನರ್ಾಟಕ ಹಾಗೂ ಮಹಾರಾಷ್ಟ್ರ
ರಾಜ್ಯಗಳಿಂದ ಸಾವಿರಾರು ಭಕ್ತರು ಈ ಪೂಜೆಯನ್ನು ವೀಕ್ಷಿಸಿ,
ಪುನಿತರಾದರು.
ಬೆಳಿಗ್ಗೆ ಮಂದಿರದಅರ್ಚಕ ಅಶೋಕ ಉಪಾಧ್ಯೆ ಇವರು
ಮಂದಿರದ ಮುಖ್ಯಸ್ಥ ಬಾಪುಗೌಡಾ ಪಾಟೀಲ, ಶೀತಲ ಪಾಟೀಲ, ದಂಪತಿಗಳಿಂದ
ಪೂಜೆ ಸಲ್ಲಿಸಿ ಸಾವಿರಾರು ಸದ್ಭಕ್ತರ ಸಮುಖದಲ್ಲಿ ಸಹವಾದ್ಯದೊಂದಿಗೆ ಕೃಷ್ಣಾ ನದಿಗೆ ತೆರಳಿ ಮಧ್ಯಾಹ್ನ ಹೊಳೆ ಪೂಜೆ ಕಾರ್ಯಕ್ರಮ
ನೇರವೆರಿಸಿದರು.
ನವರಾತ್ರಿಯ 9 ದಿನಗಳ ಕಾಲ ದೇವಿಯ ಮಂದಿರಕ್ಕೆ
ವಿದ್ಯುತ್ ದೀಪಾಲಂಕಾರ, ಮಾಡಿ 40 ಅಖಂಡತುಪ್ಪದ ಜ್ಯೋತಿಗಳನ್ನು ಬೆಳಗಿಸಿ ಮುಂಜಾನೆ ಪಂಚಾಮೃತ ಅಭಿಷೇಕ, ಮಹಾಶಾಂತಿ ಮಂತ್ರ, ದೇವಿಯಅಲಂಕಾರ, ಅಷ್ಟಕ ಸ್ತೋತ್ರ, ಕುಂಕುಮಾರ್ಚನೆ, ಸಾಯಂಕಾಲ ಅಭಿಷೇಕ ಹಾಗೂ ರಾತ್ರಿ 7 ಗಂಟೆಗೆಆದರ್ಶ
ಮಹಿಳಾ ಮಂಡಳದ ವತಿಯಿಂದ ದಾಂಡಿಯಾ ಹಾಗೂ ಗಭರ್ಾ ಸಾಂಸ್ಕೃತಿಕ
ಕಾರ್ಯಕ್ರಮಗಳು ಜರುಗಿದವು.
ಭಾವೈಕ್ಯತೆ
ಮೆರೆದಗ್ರಾಮ :
ಉಗಾರ ಗ್ರಾಮದೇವತೆ ಶ್ರೀ
ಪದ್ಮಾವತಿದೇವಿಯ ಸದ್ಭಕ್ತರುಯಾವುದೆಜಾತಿ, ಧರ್ಮ, ಮತ ಎನ್ನದೆ ಇದೊಂದು
ನಮ್ಮ ಹಬ್ಬಎಂದು ಭಾವಿಸಿಎಲ್ಲರು ಒಂದುಗೂಡಿ ದಸರಾ ಹಬ್ಬ ಆಚರಿಸಿದರು.
ಸ್ಥಳಿಯ ಗ್ರಾಮ ಪಂಚಾಯತಿ ಸಹಿತಎಲ್ಲಚುನಾಯಿತ ಸದಸ್ಯರು, ಸಂಘ ಸಂಸ್ಥೆಗಳ ಪ್ರಮುಖರುಒಂದುಗೂಡಿಗ್ರಾಮವನ್ನು
ಸ್ವಚ್ಚಗೊಳಿಸಿ, ಬೇರೆ ಗ್ರಾಮಗಳಿಂದ ಆಗಮಿಸಿರುವ
ಸದ್ಭಕ್ತರಿಗೆ ಸ್ವಾಗತಿಸಿದರು.
ಬಿಸಿಲು ಇದ್ದಿದ್ದರಿಂದ ಕೆಲವರು ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಪಾನಕ, ನೀಡುತ್ತಿರುವದೃಶ್ಯಕಂಡು ಬಂತು. ಹಿಂದೂ,
ಮುಸ್ಲಿಂ, ಜೈನ್ ಎಂಬ ಬೇಧ
ಭಾವವಿಲ್ಲದೇಎಲ್ಲ ವರ್ಗದ ಭಕ್ತರು ಈ ದೇವಿಯ ಮೆರವಣಿಗೆಯಲ್ಲಿ
ಭಾಗವಹಿಸಿ ಭಾವೈಕ್ಯತೆಯನ್ನು ಮೆರೆದರು.