ಹೋಳಿಯನ್ನು ಯುವಕರು,ಮಹಿಳೆಯರು, ಚಿಣ್ಣರು ಪರಸ್ಪರ ಬಣ್ಣ ಎರಚಿ ಸಂಭ್ರಮ

Holi is celebrated by young men, women, and children by throwing colors at each other.

ಹೋಳಿಯನ್ನು ಯುವಕರು,ಮಹಿಳೆಯರು, ಚಿಣ್ಣರು ಪರಸ್ಪರ ಬಣ್ಣ ಎರಚಿ ಸಂಭ್ರಮ 

ಶಿಗ್ಗಾವಿ 20  : ಪಟ್ಟಣದಲ್ಲಿ ರಂಗಿನ ಹಬ್ಬ ಹೋಳಿ ಹುಣ್ಣಿಮೆಯನ್ನು ಯುವಕರು,ಮಹಿಳೆಯರು, ಚಿಣ್ಣರು ಪರಸ್ಪರ ಬಣ್ಣ ಎರಚಿ ಸಂಭ್ರಮಿಸಿದರು.ಶಿಗ್ಗಾವಿಯ ಐತಿಹಾಸಿಕ ಕಾಮಣ್ಣನ ಕಟ್ಟೆ, ಚೌಡಿ ಕಟ್ಟೆ, ಹಳೆ ಪೇಟೆಯ ಗಣೇಶನ ಕಟ್ಟೆ, ಜೋಳದ ಪೇಟೆ, ಜಯನಗರ ಬಳಿ ಪ್ರತಿಷ್ಟಾಪನೆ ಮಾಡಿದ್ದ ಕಾಮಣ್ಣನನ್ನು ಬೆಳಿಗ್ಗೆ 6 ಗಂಟೆಗೆ ಹಿರಿಯರ ಸಮ್ಮುಖದಲ್ಲಿ ವಿಶೇಷ ಪೂಜೆ, ವಾದ್ಯಮೇಳದೊಂದಿಗೆ ದಹಿಸಲಾಯಿತು.ಐತಿಹಾಸಿಕ ಕಾಮಣ್ಣನ ಕಟ್ಟೆ ಬಳಿ ಪ್ರತಿಷ್ಟಾಪನೆ ಮಾಡಿದ್ದ ಕಾಮಣ್ಣನ ಮೂರ್ತಿಯನ್ನು ಮೊದಲು ದಹಿಸಿದ ನಂತರ, ಅಲ್ಲಿನ ಬೆಂಕಿಯಿಂದ ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಪ್ರತಿಷ್ಠಾಪಿಸಿದ ಕಾಮಣ್ಣನ ಮೂರ್ತಿಗಳನ್ನು ದಹಿಸುವು ಮೂಲಕ ಪೂರ್ವಜರ ಹಬ್ಬದ ಸಂಪ್ರದಾಯ ಮುಂದುವರಿಸಿದರು.  ಹೋಳಿ ಹಬ್ಬದಲ್ಲಿ ಯುವಕರ ಮತ್ತು ಚಿಣ್ಣರ ಅಬ್ಬರ ಜೋರಾಗಿತ್ತು. ಪರಸ್ಪರ ಬಣ್ಣ ಎರಚಿ ಡಿಜೆ ಹಾಡಿಗೆ ಕುಣಿದು ಸಂಭ್ರಮಿಸಿದರು. ಬೈಕ್‌ಗಳಲ್ಲಿ ಹಲಗೆ ಬಾರಿಸುತ್ತ ಗುಂಪುಗಳಾಗಿ ಸಂಚರಿಸಿ, ಕೆಲವು ಯುವಕರು ತಲೆಗೆ ಮೊಟ್ಟೆ ಸಿಡಿಸಿ ಹಬ್ಬ ಆಚರಿಸಿದರು. ಬಣ್ಣದಲ್ಲಿ ಮಿಂದೆದ್ದ ಚಿಣ್ಣರು, ಯುವಕರು ವಿವಿಧ ವೇಷಗಳನ್ನು ಧರಿಸಿ ಅಣಕು ಶವಯಾತ್ರೆ ನಡೆಸಿದರು. ಬಾಯಿ ಬಡಿದುಕೊಳ್ಳುತ್ತ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಹೋಳಿ ಸಂಭ್ರಮ ಪಟ್ಟಣದಲ್ಲಿ ಸುಡು ಬಿಸಿಲ ನಡುವೆಯೂ ಸಂಭ್ರಮದಿಂದ ಆಚರಿಸಿದರು.