ಪಟ್ಟಣದಲ್ಲಿ ಸಂಭ್ರಮದ ಹೋಳಿ ಬಣ್ಣದಾಟ

Holi celebrations in the city

ತಾಳಿಕೋಟಿ 15: ಪಟ್ಟಣದಲ್ಲಿ ಹೋಳಿ ಹಬ್ಬದ ಎರಡನೇ ದಿನದ ಅಂಗವಾಗಿ ಶನಿವಾರ ನಡೆದ ಬಣ್ಣದ ಆಟದಲ್ಲಿ ಮಕ್ಕಳು ಯುವಕರು ಮಹಿಳೆಯರು ಸೇರಿದಂತೆ ಎಲ್ಲರೂ ಸಡಗರದಿಂದ ಬಣ್ಣದಾಟ ಆಡಿ ಸಂಭ್ರಮಿಸಿದರು.  

ಕೆಲವು ಯುವಕರು ತಮ್ಮ ಮಿತ್ರರ ತಂಡಗಳನ್ನು ತೆಗೆದುಕೊಂಡು ಬಡಾವಣೆಗಳಲ್ಲಿ ತಿರುಗಿ ಬಣ್ಣದಾಟವನ್ನು ಆಡಿದರು. ಪಟ್ಟಣದಲ್ಲಿ ನಡೆದ ಹೋಳಿ ಹಬ್ಬದ ಬಣ್ಣದಾಟ ಶಾಂತಿಯುತವಾಗಿತ್ತು. ಜನರನ್ನು ಮನರಂಜಿಸಲು ಅಣಕು ಶವಯಾತ್ರೆ ಮಾಡಲಾಯಿತು. ಪ್ರತಿ ವರ್ಷ ಹೋಳಿ ಹುಣ್ಣಿಮೆ ಹಬ್ಬದಂದು ಬಣ್ಣ ಆಡಿ ಪಟ್ಟಣದ ಕೆಲವು ಬಡಾವಣೆಗಳಲ್ಲಿ ಸಾಯಂಕಾಲ ಅಣಕು ಶವಯಾತ್ರೆ ಮಾಡುವುದು ಇಲ್ಲಿನ ಪದ್ಧತಿ, ಅದೇ ರೀತಿ ಈ ವರ್ಷವೂ ಅಣಕು ಶವಯಾತ್ರೆ ಮಾಡಿ ಸಂಭ್ರಮದಿಂದ ಬಣ್ಣವಾಡಿದರು.  

ಬಣ್ಣದ ಈ ಸಂಭ್ರಮ ಸಮಯದಲ್ಲಿ ರಾಘು ಹಜೇರಿ, ಗೋವಿಂದಸಿಂಗ್ ಹಜೇರಿ, ಸುಧೀರ ತಿವಾರಿ, ಅಮಿತಸಿಂಗ್ ಮನಗೂಳಿ, ಸೂರಜ್ ಹಜೇರಿ, ಸಂತೋಷ ಹಜೇರಿ, ಸಂದೀಪ ಹಜೇರಿ ನಿತಿನ್ ವಿಜಾಪುರ ಮತ್ತೀತರರು ಇದ್ದರು.