ಹಿರಿಯರು, ಕಿರಿಯರು, ಮಹಿಳೆಯರು, ಮಕ್ಕಳು ಸೇರಿದಂತೆ ಶಾಂತಿಯುತವಾಗಿ ಹೋಳಿ ಆಚರಣೆ

Holi celebrated peacefully, including the elderly, the young, women, and children.

ಹಿರಿಯರು, ಕಿರಿಯರು, ಮಹಿಳೆಯರು, ಮಕ್ಕಳು ಸೇರಿದಂತೆ ಶಾಂತಿಯುತವಾಗಿ  ಹೋಳಿ ಆಚರಣೆ  

ರಾಣಿಬೆನ್ನೂರ 20: ತಾಲೂಕಿನಾಧ್ಯಂತ  ಬಣ್ಣದಾಟ ಹೋಳಿಯನ್ನು ಒಬ್ಬರರಿಗೊಬ್ಬರು ಬಣ್ಣ ಎರಚುವ ಮೂಲಕ ಹಿರಿಯರು, ಕಿರಿಯರು, ಮಹಿಳೆಯರು, ಮಕ್ಕಳು ಸೇರಿದಂತೆ ಸಡಗರ ಸಂಭ್ರಮದಿಂದ ಮತ್ತು ಶಾಂತಿಯುತವಾಗಿ  ಹೋಳಿ ಆಚರಿಸಿ ಯಶಸ್ವಿಗೊಳಿಸಿದರು. ಬೆಳಿಗ್ಗೆಯಿಂದಲೇ  ನಗರದ ಬಹುತೇಕ ಬೀದಿಗಳಲ್ಲಿ ಹೋಳಿ ಹಬ್ಬದಲ್ಲಿ ಯುವಕರನೇಕರು ಪಾಲ್ಗೊಂಡಿದ್ದರು. ಕೆಲವೆಡೆ ಯುವತಿಯರೂ ಹೋಳಿಯಲ್ಲಿ ಭಾಗವಹಿಸಿ ಮೆರಗು ತಂದರು. ಆದರೆ ಮದ್ಯಾಹ್ನ 12 ಗಂಟೆಯ ಸುಮಾರಿಗೆ ಅರ್ಧದಷ್ಟು ಹೋಳಿ ಆಚರಣೆ ಮುಗಿದಂತೆ ಕಂಡು ಬಂದಿತು. ಜನನೀಬೀಡ ಪ್ರದೇಶಗಳಲ್ಲಿ 1 ಗಂಟೆಯವರೆಗೂ ಹೋಳಿ ಸಂಭ್ರಮಾಚರಣೆ ಇದ್ದದ್ದು ಸಾಮಾನ್ಯವಾಗಿತ್ತು. ನಗರದಲ್ಲಿ ಮದ್ಯಾಹ್ನ 1 ಗಂಟೆಯ ಸುಮಾರಿಗೆ ಇಲ್ಲಿನ ಹರಳಯ್ಯನಗರದಿಂದ ಬೆಂಕಿಯನ್ನು ತರುವ ಸಂಪ್ರದಾಯದ ಮೂಲಕ ಬೆಂಕಿ ತಂದು ಎಲ್ಲಡೆ ಕಾಮದಹನ ಮಾಡಿದ್ದು ಕಂಡು ಬಂದಿತು. ಶಾಸಕ ಪ್ರಕಾಶ ಕೋಳಿವಾಡ, ಮಾಜಿ ಶಾಸಕ ಅರುಣಕುಮಾರ ಜಾರ  ಅವರ ಅವರ ಬೆಂಬಗರೊಂದಿಗೆ  ಒಬ್ಬರರಿಗೊಬ್ಬರು ಬಣ್ಣ ಎರಚುವ ಮೂಲಕ ಹೋಳಿಯಲ್ಲಿ  ಮಿಂದೆದ್ದರು. ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಮತ್ತು ಇಲ್ಲಿನ ರಾಜೇಶ್ವರಿ ನಗರ, ಅಶೋಕ ನಗರ, ಉಮಾಶಂಕರ ನಗರ, ನೇಕಾರ ಕಾಲೂನಿ, ಅಡವಿ ಆಂಜನೇಯ ಭಡಾವಣಿ, ಮೃತ್ಯುಂಜಯ ನಗರ, ವಾಗೀಶ ನಗರ, ಚೌಡೇಶ್ವರಿ ಬಡಾವಣೆ, ಈಶ್ವರ ನಗರ, ಸುಭಾಷ ಚೌಕ್, ಕುಂಬಾರ ಓಣಿ, ರಂಗನಾಥ ನಗರ, ಸಂಗಮ್ಮ ಸರ್ಕಲ್, ಕೋಟೆ, ಪೋಸ್ಟ್‌ ಸರ್ಕಲ್, ವಾಲ್ಮೀಕಿ ಸರ್ಕಲ್, ಅಶೋಕ ಸರ್ಕಲ್, ದರ್ಗಾ ಮೆದಾನ, ಸಿದ್ದೇಶ್ವರ ನಗರ, ಮಾರುತಿ ನಗರ, ಕುರುಬಗೇರಿಯ ಸಂತೆ ಪೇಟೆ, ಹಲಗೇರಿ ಕ್ರಾಸ್ ಮತ್ತಿತರ ನಗರಗಳಲ್ಲಿ ಹೋಳಿಯಲ್ಲಿ ಯುವಕ ಯುವತಿಯರು, ಮಕ್ಕಳು ಮಿಂದೆದ್ದರು.