ನವದೆಹಲಿ, ಆ 31 ಒಲಿಂಪಿಕ್ಸ್ ಅರ್ಹತೆ ಹಾಗೂ ಬೆಲ್ಜಿಯಂ ಪ್ರವಾಸದ ಪೂರ್ವ ತಯಾರಿ ಅಂಗವಾಗಿ ಸೆ.2 ರಿಂದ ಆರಂಭವಾಗುವ ರಾಷ್ಟ್ರೀಯ ಹಿರಿಯ ಪುರುಷರ ಹಾಕಿ ಶಿಬಿರಕ್ಕೆ 33 ಸಂಭಾವ್ಯ ಆಟಗಾರರನ್ನು ಆಯ್ಕೆ ಮಾಡಿ ಹಾಕಿ ಇಂಡಿಯಾ ಶನಿವಾರ ಪ್ರಕಟಿಸಿದೆ.
ಬೆಂಗಳೂರಿನ ಮೈಸೂರು ರಸ್ತೆಯಲ್ಲಿರುವ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ಭಾರತ ತಂಡದ ಕೋಚ್ ಗ್ರಹಾಮ್ ರೀಡ್ ಅವರ ಸಾರಥ್ಯದಲ್ಲಿ ಮೂರು ವಾರಗಳ ಕಾಲ ಶಿಬಿರ ನಡೆಯಲಿದೆ.
ಇತ್ತೀಚಿಗಷ್ಟೆ ಒಲಿಂಪಿಕ್ ಟೆಸ್ಟ್ ಸರಣಿ ಗೆದ್ದು ಸ್ವದೇಶಕ್ಕೆ ಮರಳಿರುವ ಭಾರತ ಪುರುಷರ ಹಾಕಿ ತಂಡವನ್ನು ಇನ್ನಷ್ಟು ಬಲಿಷ್ಟಗೊಳಿಸಲು ಹಾಗೂ ಸ್ಥಿರ ಪ್ರದರ್ಶನ ಮುಂದುವರಿಸುವ ಉದ್ದೇಶದಿಂದ ಹಾಕಿ ಇಂಡಿಯಾ ಕಾರ್ಯ ಸನ್ನದ್ಧವಾಗಿದೆ.
ಶಿಬಿರಾರ್ಥಿಗಳ ಪಟ್ಟಿ ಇಂತಿದೆ
ಗೋಲ್ ಕೀಪರ್ಗಳು: ಪಿ.ಆರ್ ಶ್ರೀಜೇಶ್, ಸೂರಜ್ ಕರ್ಕರೆ ಹಾಗೂ ಕೃಷ್ಣನ್ ಬಹದ್ದೂರ್ ಪಠಾಕ್.
ಡಿಫೆಂಡರ್ಗಳು: ಹರ್ಮನ್ಪ್ರೀತ್ ಸಿಂಗ್, ಬೀರೇಂದ್ರ ಲಕ್ರಾ, ಸುರೇಂದರ್ ಕುಮಾರ್, ಅಮಿತ್ ರೋಹಿದಾಸ್, ವರುಣ್ ಕುಮಾರ್, ರೂಪಿಂದರ್ ಪಾಲ್ ಸಿಂಗ್, ಗುರಿಂದರ್ ಸಿಂಗ್, ಕೊಥಾಜಿತ್ ಸಿಂಗ್ ಖದಂಗ್ಬಾಮ್, ನೀಲಂ ಸಂಜೀಪ್ ಕ್ಸೆಸ್, ಜರ್ಮನ್ಪ್ರೀತ್ ಸಿಂಗ್ ಮತ್ತು ಡಿಸ್ಪನ್ ಟಿರ್ಕಿ.
ಮಿಡ್ಫೀಲ್ಡರ್ಗಳು: ಮನ್ಪ್ರೀತ್ ಸಿಂಗ್, ಸುಮಿತ್, ನೀಲಕಂಠ ಶರ್ಮಾ, ಜಸ್ಕರನ್ ಸಿಂಗ್, ಹಾರ್ದಿಕ್ ಸಿಂಗ್, ವಿವೇಕ್ ಸಾಗರ್ ಪ್ರಸಾದ್, ಆಶಿಶ್ ಕುಮಾರ್ ಟೊಪ್ನೊ, ಸಯ್ಯದ್ ನಿಯಾಜ್ ರಹೀಮ್ ಮತ್ತು ರಾಜ್ ಕುಮಾರ್ ಪಾಲ್.
ಮುಂಚೂಣಿ ಆಟಗಾರರು: ಮಂದೀಪ್ ಸಿಂಗ್, ಆಕಾಶ್ದೀಪ್ ಸಿಂಗ್, ಶಿಲಾನಂದ್ ಲಕ್ರಾ, ಗುರ್ಸಾಹಿಬ್ಜಿತ್ ಸಿಂಗ್, ಸಿಮ್ರಾನ್ಜೀತ್ ಸಿಂಗ್, ಎಸ್.ವಿ ಸುನಿಲ್, ಗುರ್ಜಂತ್ ಸಿಂಗ್, ರಮಣ್ದೀಪ್ ಸಿಂಗ್, ಶಮ್ಶೇರ್ ಸಿಂಗ್ ಮತ್ತು ಲಲಿತ್ ಕುಮಾರ್ ಉಪಾಧ್ಯಾಯ.