ಲೋಕದರ್ಶನವರದಿ
ರಾಣೇಬೆನ್ನೂರು27: ನಗರದ ವಂದೇ ಮಾತರಂ ಸ್ವಯಂ ಸೇವಾ ಸಂಸ್ಥೆಯು ಕಳೆದ 11 ವರ್ಷಗಳಿಂದ ಸಾಮಾಜಿಕ, ಸಾಂಸ್ಕೃತಿಕ ಮತ್ತು ಧಾಮರ್ಿಕ ಕ್ಷೇತ್ರವು ಸೇರಿದಂತೆ ಮತ್ತಿತರೆ ಕ್ಷೇತ್ರದಲ್ಲಿ ಜನಪರ ಸೇವಾ ಕಾರ್ಯಗಳನ್ನು ಮಾಡುತ್ತಾ ಬರುತ್ತಲಿದೆ. ವಿಶೇಷವಾಗಿ ಗೆಳೆಯರ ಬಳಗದವರೆಲ್ಲರೂ ಸೇರಿಕೊಂಡು ನಗರದಲ್ಲಿ ಕಳೆದ 11 ವರ್ಷಗಳಿಂದ ವಿವಿಧ ರೀತಿಯ ವಿಶೇಷ ಆಕರ್ಷಣೆಯ ಗಣೇಶ ಮೂತರ್ಿಗಳನ್ನು ಪ್ರತಿಷ್ಠಾಪಿಸುವ ಮೂಲಕ ನಾಡಿನ ಜನತೆ ವಾಣಿಜ್ಯ ನಗರದತ್ತ ಮುಖ ಮಾಡುವಂತೆ ಪ್ರಯತ್ನಿಸಲಾಗುತ್ತಿದೆ ಎಂದು ಸಂಸ್ಥೆಯ ಅಧ್ಯಕ್ಷ, ನಗರಸಭಾ ಸದಸ್ಯ ಪ್ರಕಾಶ ಬುರಡಿಕಟ್ಟಿ ಹೇಳಿದರು.
ಶುಕ್ರವಾರ ನಗರಸಭಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿರುವ ರಾಣೇಬೆನ್ನೂರ ಕಾ ರಾಜಾ 11ನೇ ವಾಷರ್ಿಕೋತ್ಸವದ ನಿಮಿತ್ತ ಕರೆಯಲಾಗಿದ್ದ ಮಾಧ್ಯಮಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದರು. ಈ ಭಾರಿ ವಿಶೇಷ ಮತ್ತು ಹೊಸತನ ಜೊತೆಗೆ ಇಂದಿನ ವಿದ್ಯಾಥರ್ಿಗಳಿಗೆ ಹಾಗೂ ಯುವ ಸಮುದಾಯಕ್ಕೆ ಭಾರತ ದೇಶದ ಇತಿಹಾಸ ಪುರುಷರಾದ ಶಿವಾಜಿ ಮಹಾರಾಜರ ಹಿಂದೂ ಸಾಮ್ರಾಜ್ಯದ ಆಡಳಿತದಲ್ಲಿ ವಿಜೃಂಭಿಸಿದ ಶಿವಾಜಿ ಮಹಾರಾಜರ ಕೋಟೆ ಕೊತ್ತಲೆಗಳಿಂದ ಕೂಡಿರುವ ರೂಪಕವನ್ನು ನಿರೂಪಿಸಲಾಗಿತ್ತು ಎಂದರು.
ಸ್ವಯಂ ಸೇವಾ ಸಂಸ್ಥೆಯ ಗುರಿ ಈ ಪ್ರದರ್ಶನದ ಮೂಲಕ ಹಣಗಳಿಸುವ ಉದ್ದೇಶ ಹೊಂದಿಲ್ಲ. ಹಣದ ಅವಶ್ಯಕತೆಯು ನಮಗಿಲ್ಲ. ಸಾಂಸ್ಕೃತಿಕವಾಗಿ ನಿರೂಪಿಸಲಾಗಿರುವ ಇಂತಹ ಅಪರೂಪದ ರೂಪಕಗಳನ್ನು ಪ್ರದಶರ್ಿಸಿ ಅದರ ಮೂಲಕ ಭಾರತೀಯ ಸಂಸ್ಕೃತಿ ಮತ್ತು ಸಂಸ್ಕಾರ ಹಾಗೂ ಧಾಮರ್ಿಕ ಹಬ್ಬ ಆಚರಣೆಗಳು ಹೇಗೆ ಇದ್ದವು ಅದರ ಮೂಲಕ ಹಿಂದೂ ಸಮಾಜ ಒಂದಾಗಿ ಒಗ್ಗಟ್ಟಾಗಿ ಭಾವೈಕ್ಯತೆಯನ್ನು ಮೇರೆದಿರುವುದನ್ನು ತೋರಿಸುವ ಮಹದ್ದೇಶವಾಗಿದೆ. ವಿಷಾಧಕರ ಸಂಗತಿ ಎಂದರೆ ನಮ್ಮ ನಿರೀಕ್ಷೆ ಲಕ್ಷ ಜನ ಮತ್ತು ಶಾಲಾ ಮಕ್ಕಳು ನೋಡಬೇಕು ಎನ್ನುವುದಾಗಿತ್ತು. ಆದರೆ ಶಿಕ್ಷಣ ಇಲಾಖೆಗೆ ಮಕ್ಕಳನ್ನು ಕಳುಹಿಸಲು ಆದೇಶ ಹೊರಡಿಸಲು ಮನವಿ ಪತ್ರ ಸಲ್ಲಿಸಿದರೂ ಸ್ಪಂಧಿಸದೆ ಇರುವುದು ಅತೀವ ನಿರಾಸೆ ಆದಂತಾಗಿದೆ ಎಂದರು.
ಕಳೆದ ಸೆ.2 ರಂದು ನಗರಸಭಾ ಕ್ರೀಡಾಂಗಣದಲ್ಲಿ ಈ ಬೃಹತ್ ಶಿವಾಜಿ ಮಹಾರಾಜ್ರ ವೇದಿಕೆಯಲ್ಲಿ ಕೋಟೆ ಕೊತ್ತಲಗಳ ರೂಪಕವನ್ನು ಪ್ರಾರಂಭಿಸಲಾಗಿದೆ. ಈಗಾಗಲೇ 50 ಸಾವಿರಕ್ಕೂ ಹೆಚ್ಚು ನಾಗರೀಕರು ತಮ್ಮ ಕುಟುಂಬ ಪರಿವಾರ ಸಮೇತ ಧಾವಿಸಿ ತಮ್ಮ ಈ ವಿಶೇಷ ಸೇವಾ ಕಾರ್ಯಗಳಿಗೆ ಮನಃಪೂರ್ವಕವಾಗಿ ಪ್ರಸಂಶಿಸಿ ಅಭಿನಂದಿಸಿದ್ದಾರೆ. ಇದರಿಂದ ಭವಿಷ್ಯದ ದಿನಗಳಲ್ಲಿ ಈ ನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಮತ್ತಷ್ಟು ಹೊಸತನವನ್ನು ಪ್ರದಶರ್ಿಸುವ ಈರಾದೆ ನಮ್ಮದಾಗಿದೆ ಎಂದರು.
ಇದೇ 29 ರಂದು ಮಧ್ಯಾಹ್ನ 11 ಗಂಟೆಗೆ ಸಾರ್ವಜನಿಕವಾಗಿ ಪ್ರತಿವರ್ಷದ ಸಂಪ್ರದಾಯದಂತೆ ಮಹಾ ಪ್ರಸಾದ ಅನ್ನಸಂತರ್ಪಣೆ ನಡೆಯುವುದು. ಸಂಜೆ 4 ಗಂಟೆಗೆ ನಾಡಿನ ಹೆಸರಾಂತ ಯುವ ಕಲಾವಿದರಿಂದ ಹಾಸ್ಯ, ನೃತ್ಯ, ಸಂಗೀತ ಸಂಜೆ ಕಾರ್ಯಕ್ರಮ. ಸಂಜೆ 6 ಗಂಟೆಗೆ ಬೆಳ್ಳಿ ನಾಣ್ಯ, ನಿಶಾನೆ, ಹೂವಿನ ಹಾರ, ಚಕ್ರ ಸೇರಿದಂತೆ ಗಣೇಶನ ಮೇಲೆ ಹಾಕಿರುವ ವಿವಿಧ ಸಾಮಗ್ರಿಗಳನ್ನು ಸಾರ್ವಜನಿಕವಾಗಿ ಬಹಿರಂಗ ಹರಾಜು ಮಾಡಲಾಗುವುದು. ಇದರಲ್ಲಿ ಭಕ್ತರು, ಆಸಕ್ತರು ಪಾಲ್ಗೊಳ್ಳಬಹುದಾಗಿದೆ. 30 ರಂದು ಸಂಜೆ 4 ಗಂಟೆಗೆ ಮಹಾಗಣಪತಿಯ ಬೃಹತ್ ಶೋಭಾ ಯಾತ್ರೆಯು ಆರಂಭಗೊಂಡು ವಾಧ್ಯ ವೈಭವದೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಲಿದೆ ಎಂದರು.
ಪತ್ರಿಕಾಗೊಷ್ಠಿಯಲ್ಲಿ ಸಮಿತಿಯ ಸದಸ್ಯರಾದ ರಾಘವೇಂದ್ರ ಚಿನ್ನಿಕಟ್ಟಿ, ಶಂಭಣ್ಣ ಮಾಕನೂರು ಮತ್ತಿತರರು ಗಣ್ಯರು, ಮುಖಂಡರು, ಯುವಕರು, ಕಾರ್ಯಕರ್ತರು ಉಪಸ್ಥಿತರಿದ್ದರು.