ಕೊಲ್ಕತ್ತಾ, ನ.21 : ಇಲ್ಲಿನ ಐತಿಹಾಸಿಕ ಈಡನ್ ಗಾರ್ಡನ್ ಅಂಗಳ ಶುಕ್ರವಾರ ಮತ್ತೊಂದು ಮೈಲುಗಲ್ಲಿಗೆ ಸಾಕ್ಷಿಯಾಗಲಿದ್ದು, ಭಾರತದಲ್ಲಿ ಮೊದಲ ಬಾರಿಗೆ ಹಗಲು ರಾತ್ರಿ ಟೆಸ್ಟ್ ನಡೆಯಲಿದ್ದು, ಟೀಮ್ ಇಂಡಿಯಾ ಹಾಗೂ ಪ್ರವಾಸಿ ಬಾಂಗ್ಲಾದೇಶ ತಂಡಗಳು ಕಾದಾಟ ನಡೆಸಲಿವೆ.
ಈ ಪಂದ್ಯದ ಮೇಲೆ ವಿಶ್ವದ ಚಿತ್ತ ನೆಟ್ಟಿದೆ. ಗುಲಾಬಿ ಚೆಂಡಿನಲ್ಲಿ ನಡೆಯಲಿರುವ ಪಂದ್ಯ ಅಭಿಮಾನಿಗಳನ್ನು ಆಕಷರ್ಿಸಿದೆ. ಈ ಐತಿಹಾಸಿ ಕ್ಷಣವನ್ನು ಕಣ್ಣು ತುಂಬಿಕೊಳ್ಳಲು ಗಣ್ಯಾತಿ ಗಣ್ಯರ ದಂಡು ಜಾಯ್ ಸಿಟಿಯತ್ತ ಹರಿದು ಬರುತ್ತಿದೆ.
ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 1-0 ಮುನ್ನಡೆ ಸಾಧಿಸಿದೆ. ಇಂದೋರ್ ನ ಹೋಳ್ಕರ್ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಪ್ರದರ್ನ ನೀಡಿ ಜಯ ಸಾಧಿಸಿತ್ತು. ಈ ಪಂದ್ಯವನ್ನು ಗೆದ್ದು ಸರಣಿ ಕೈ ವಶ ಮಾಡಿಕೊಳ್ಳುವ ಕನಸು ವಿರಾಟ್ ಪಡೆಯದ್ದಾಗಿದೆ.
ಟೀಮ್ ಇಂಡಿಯಾದ ಬ್ಯಾಟಿಂಗ್ ಬಲಾಢ್ಯವಾಗಿದೆ. ಆರಂಭಿಕರಾಗಿ ಕಣಕ್ಕೆ ಇಳಿಯುವ ಕನರ್ಾಟಕದ ಮಯಾಂಕ್ ಅಗರ್ ವಾಲ್ ರನ್ ಕೊಳ್ಳೆ ಹೊಡೆಯುತ್ತಿದ್ದಾರೆ. ಮೊದಲ ಟೆಸ್ಟ್ ನಲ್ಲಿ ದ್ವಿಶತಕ ಬಾರಿಸಿದ್ದ ಇವರ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಇನ್ನು ಹಿಟ್ ಮ್ಯಾನ್ ಖ್ಯಾತಿಯ ರೋಹಿತ್ ಶಮರ್ಾ ತಮ್ಮ ನೈಜ ಆಟವಾಡಬೇಕಿದೆ. ಮಧ್ಯಮ ಕ್ರಮಾಂಕದಲ್ಲಿ ಚೇತೇಶ್ವರ್ ಪೂಜಾರ ತಂಡಕ್ಕೆ ಬಲ ತುಂಬ ಬಲ್ಲ ಆಟಗಾರ. ನೆಲಕಚ್ಚಿ ನಿಂತು ಎದುರಾಳಿಗಳ ನಿದ್ದೆ ಗೆಡಿಸುವಲ್ಲಿ ಇವರು ನಿಸ್ಸೀಮರು.
ನಾಯಕ ವಿರಾಟ್ ಕೊಹ್ಲಿ ರನ್ ವೇಗಕ್ಕೆ ಚುರುಕು ಮುಟ್ಟಿಸಬೇಕಿದೆ. ಉಪನಾಯಕ ಅಜಿಂಕ್ಯ ರಹಾನೆ ಸಮಯೋಚಿತ ಬ್ಯಾಟಿಂಗ್ ನಡೆಸಿ ತಂಡಕ್ಕೆ ನೆರವಾಗಬಲ್ಲರು. ಆಲ್ ರೌಂಡರ್ ರವೀಂದ್ರ ಜಡೇಜಾ ಹಾಗೂ ವಿಕೆಟ್ ಕೀಪರ್ ವೃದ್ಧಿಮನ್ ಸಹಾ ರನ್ ಕಲೆ ಹಾಕಿದರೆ ದೊಡ್ಡ ಮೊತ್ತದ ಕನಸು ನನಸಾಗುತ್ತದೆ.
ಟೀಮ್ ಇಂಡಿಯಾದ ಬೌಲಿಂಗ್ ಬಲಾಢ್ಯವಾಗಿದೆ. ವೇಗ ಹಾಗೂ ಸ್ಪಿನ್ ಬೌಲರ್ ಗಳು ಎದುರಾಳಿಗಳನ್ನು ಕಾಡಬಲ್ಲರು. ಹಗಲು ರಾತ್ರಿ ಟೆಸ್ಟ್ ಆಗಿದ್ದರಿಂದ ಮಂಜು ಬೌಲರ್ ಗಳಿಗೆ ಸವಾಲು ಎಸೆಯಲಿದೆ. ಸ್ಟಾರ್ ಬೌಲರ್ ಮೊಹಮ್ಮದ್ ಶಮಿ ಸ್ವಿಂಗ್ ಬೌಲಿಂಗ್ ನಿಂದ ವಿಕೆಟ್ ಬೇಟೆ ನಡೆಸಬಲ್ಲರು. ಉಮೇಶ್ ಯಾದವ್ ಹಾಗೂ ಇಶಾಂತ್ ಶಮರ್ಾ ಸರಿಯಾದ ಸ್ಥಳಗಳಲ್ಲಿ ಬೌಲ್ ಎಸೆದು ಎದುರಾಳಿಗಳಿಗೆ ಕಂಠಕವಾಗಬಲ್ಲರು. ಪಿಚ್ ಮರ್ಮವನ್ನು ಅರಿತು ಅಶ್ವಿನ್ ಅವರಿಗೆ ಸ್ಥಾನ ನೀಡಬೇಕಾ ಎಂಬುದಕ್ಕೆ ಉತ್ತರ ಸಿಗಲಿದೆ.
ಮೊದಲ ಟೆಸ್ಟ್ ನಲ್ಲಿ ಕಂಡ ಇನ್ನಿಂಗ್ಸ್ ಸೋಲಿನ ಕಹಿಯನ್ನು ಮರೆಯಲು ಬಾಂಗ್ಲಾ ಸನ್ನದ್ಧವಾಗಿದ್ದು, ಸ್ಟಾರ್ ಆಟಗಾರರು ಕ್ರಿಸ್ ನಲ್ಲಿ ಹೆಚ್ಚು ಹೊತ್ತು ನಿಲ್ಲಲು ಅಭ್ಯಾಸ ನಡೆಸಿದ್ದಾರೆ. ಮುಷ್ಫೀಕರ್ ರಹೀಮ್, ಲಿಟನ್ ದಾಸ್ ಅವರು ದೊಡ್ಡ ಇನ್ನಿಂಗ್ಸ್ ಆಡುವ ಅನಿವಾರ್ಯತೆ ಇದೆ. ಇನ್ನು ಬೌಲರ್ ಗಳು ಬಿಗುವಿನ ದಾಳಿ ನಡೆಸಿ ಟೀಮ್ ಇಂಡಿಯಾದ ಬ್ಯಾಟ್ಸ್ ಮನ್ ಗಳನ್ನು ಕಟ್ಟಿ ಹಾಕಿದಾಗ ಮಾತ್ರ ಗೆಲುವಿನ ಕನಸು ನಸಾಗುತ್ತದೆ.
ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನ, ಮುಖ್ಯಮಂತ್ರಿ ಮಮತಾ ಬ್ಯಾನಜರ್ಿ ಹಾಗೂ ಕೇಂದ್ರ ಗೃಹ ಖಾತೆ ಸಚಿವ ಅಮಿತ್ ಶಾ ಸೇರಿದಂತೆ ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ, ವಿವಿಎಸ್ ಲಕ್ಷ್ಮಣ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಾಧ್ಯತೆ ಇದೆ.
ಸಮಯ: ಮಧ್ಯಾಹ್ನ 1ಕ್ಕೆ
ಸ್ಥಳ: ಈಡನ್ ಗಾರ್ಡನ್ ಕೋಲ್ಕತ್ತಾ