ಲೋಕದರ್ಶನ ವರದಿ
ಬೈಲಹೊಂಗಲ 01: ಪಟ್ಟಣದ ಐತಿಹಾಸಿಕ ದೊಡ್ಡಾದೇವರ ಜಾತ್ರಾ ಮಹೋತ್ಸವ ನಿಮಿತ್ತ ಬುಧವಾರ ವಿಶೇಷ ಪೂಜೆ, ಪುನಸ್ಕಾರ ನಡೆದವು. ಕೊರೊನಾ ವೈರಸ್ ಹಾವಳಿಯಿಂದ ಸರಳ ರೀತಿಯಲ್ಲಿ ಆಚರಿಸಲಾಯಿತು.
ಇಡೀ ದೇಶದಲ್ಲಿ ತಲ್ಲನ ಮೂಡಿಸಿರುವ ಮಹಾಮಾರಿ ಕೊರೊನಾ ವೈರಸ ಬೇಗ ನಿಮರ್ೂಲನೆಯಾಗಲೆಂದು ಹಾಗೂ ಈ ದೇಶದ ಬೆನ್ನೆಲುಬಾದ ರೈತರಿಗೆ ಚನ್ನಾಗಿ ಮಳೆ,ಬೆಳೆಕರುಣಿಸಲೆಂದು ಒಂದು ದಿನದ ವಿಶೇಷ ಭಜನೆ ನೆರವೇರಿಸಲಾಯಿತು.
ಮಹಿಳೆಯರು ಐದು ದಿನಗಳ ಕಾಲ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದು ವಿಷೇಶವಾಗಿತ್ತು. ಇದೇ ವೇಳೆ ನೂತನ ಎಪಿಎಂಸಿ ಅಧ್ಯಕ್ಷರಾಗಿ ಆಯ್ಕೆಯಾದ ಭರಮಪ್ಪ ಸತ್ಯೆನ್ನವರ ಅವರನ್ನು ಜಾತ್ರಾ ಕಮಿಟಿಯಿಂದ ಸತ್ಕರಿಸಲಾಯಿತು.
ಹಿರಿಯರಾದ ಮಲ್ಲಿಕಾಜರ್ುನ ಬೋಳಣ್ಣವರ, ಪಾಂಡಪ್ಪ ಇಂಚಲ, ಉಳವಪ್ಪ ಬಡ್ಡಿಮನಿ, ಬಸಲಿಂಗಯ್ಯಾ ಹಿರೇಮಠ, ಶ್ರೀಕಾಂತ ಮತ್ತಿಕೊಪ್ಪ, ಸೋಮನಾಥ ಸೊಪ್ಪಿಮಠ, ಮಹಾಂತೇಶ ಪತ್ರಿಮಠ, ಮಲ್ಲೇಶ ದಿಬ್ಬದ, ಮಲ್ಲಿಕಾಜರ್ುನ ಪಟ್ಟಣಶೆಟ್ಟಿ, ಪ್ರೇಮಕ್ಕಾ ಇಂಚಲ, ಮಂಜುಳಾ ಮಲ್ಲಾಪೂರ, ಗಿರಿಜಾ ಪಟ್ಟಣಶೆಟ್ಟಿ ಟ್ರಸ್ಟ್ ಕಮೀಟಿ ಮತ್ತು ಭಜನಾ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.