ಬೇಡಜಂಗಮ ಸಹಕಾರಿಗೆ ಹಿರೇಮಠ ಬೇಸರತ್ ರಾಜೀನಾಮೆ

Hiremath resigns from Beda Jangam Cooperative

ರಬಕವಿ-ಬನಹಟ್ಟಿ, 12: ತಾಲೂಕಿನ ಬನಹಟ್ಟಿ ನಗರದ “ಬೇಡಜಂಗಮ” ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಯಿಂದ ವಿಕೇಟ್ ಒಂದು ಪತನವಾಗಿದೆ. 

ಬನಹಟ್ಟಿ ನಗರದಲ್ಲಿ ಜಂಗಮ ಸಮುದಾಯಕ್ಕೆ ಸೇರಿದ “ಬೇಡಜಂಗಮ” ಪತ್ತಿನ ಸಹಕಾರಿ ಸಂಘವು ಕಳೆದ ಮೂರು ವರ್ಷಳ ಹಿಂದೆಯೇ ಅಷ್ಟೇ ಪ್ರಾರಂಭಗೊಂಡು ಪ್ರಗತಿಯಲ್ಲಿ ಸಾಗಿತು ಕಾರಣಾಂತರಗಳಿಂದ ಸಂಘದ ನಿರ್ದೇಶಕ ಸ್ಥಾನದಿಂದ ಗಂಗಯ್ಯ ಹಿರೇಮಠ. ಅವರು  ರಾಜೀನಾಮೆ ಸಲ್ಲಿಸಿ ಹೊರಬಂದಿರುವುದು ಪ್ರಶ್ನೆಯಾಗಿ ನಿಂತಿದೆ. 

ಕಾರಣದ ಬಗ್ಗೆ ಮಾತನಾಡಿದ ಅವರು, ಪ್ರಥಮವಾಗಿ ಈ ಸಹಕಾರಿ ಸಂಘ ಕಟ್ಟಿ ಬೆಳಸಿ ಪ್ರಾರಭಿಸುವಲ್ಲಿ ಸಾಕಷ್ಟು ನಾನು ಶ್ರಮಿಸಿರುವುದನ್ನು ಮನಗಂಡು, ರಬಕವಿ-ಬನಹಟ್ಟಿ ತಾಲೂಕಿನ ಸಮುಧಾಯ ವೃಂದವು ಸಂಘದ ನಿರ್ದೇಶಕ ಸ್ಥಾನಕ್ಕೆ ಅ,ವಿರೋಧವಾಗಿ ನನ್ನನ್ನು ಆಯ್ಕೆಮಾಡಿದರು. ಅವತ್ತಿನಿಂದ ಇವತ್ತಿನವರೆಗೂ ಯಾವುದೆ ಕಪ್ಪು ಚುಕ್ಕೆಗಳನ್ನು ತಾರದೆ, ಸ್ವಾರ್ಥಕ್ಕೆ ಬಳಸಿಕೊಳ್ಳದೆ, ನಿಸ್ವಾರ್ಥದಿಂದ ಮಾಡಿದ ಸೇವೆಯು ತೃಪ್ತಿಕರವಾಗಿತ್ತು ಆದರೆ, ಸಂಘವು ನಡೆಸುವ ಕಾರ್ಯದ ಚಟುವಟಿಕೆಗಳಲ್ಲಿ ಕೆಲ ಅಪ್ರಯೋಜಕರ ನಡೆಯಲ್ಲಿ ಅವೈಜ್ಞಾನಿಕ ಕಂಡು ನಿರ್ದೇಶಕ ಸ್ಥಾನಕ್ಕೆ ಬೇಸರತ್ ರಾಜೀನಾಮೆ ಸಲ್ಲಿಸಬೇಕಾಯಿತು ಎಂದು ಗೌಪ್ಯತೆ ಮತ್ತು ಪ್ರಶ್ನಾರ್ಥಕವಾಗಿ ಗಂಗಯ್ಯ ಹಿರೇಮಠ. ಎಂದಿದ್ದಾರೆ.