ಶಿರಹಟ್ಟಿಗೆ ದೀಢಿರ ಭೆೇಟಿ ನೀಡಿದ ಜಿಲ್ಲಾಧಿಕಾರಿ ಹಿರೇಮಠ

ಲೋಕದರ್ಶನ ವರದಿ

ಶಿರಹಟ್ಟಿ 04: ಕೊರೊನಾ ವೈರಸ್ ಹರಡುವುದನ್ನು ತಡೆಯಲು ತಾಲ್ಲೂಕಿನಲ್ಲಿ ಕೈಗೊಂಡಿರುವ ಕ್ರಮಗಳ ಕುರಿತು ದೀಢಿರನೆ ಭೆೇಟಿ ನೀಡಿ ಪರಿಶೀಲನೆ ನಡೆಸಿದರು. ಪಟ್ಟಣದ ಮಾರುಕಟ್ಟೆಯಲ್ಲಿರುವ ದಿನಸಿ ಅಂಗಡಿಗಳ ಮತ್ತು ತರಕಾರಿ ಮಾರುಕಟ್ಟೆ 12 ರಿಂದ 3 ಗಂಟೆಯವರೆಗೆ ವ್ಯಾಪಾರ ನಡೆಸಲು ಅವಕಾಶ ನೀಡಲಾಗಿದೆ ಸಾರ್ವಜನಿಕರು ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ದಿನಬಳಕೆ ವಸ್ತುಗಳನ್ನು ಖರೀದಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಸಲಹೆ ನೀಡಿದರು.

ತಾಲ್ಲೂಕು ಆಡಳಿತ ವತಿಯಿಂದ  ಕೊರೊನಾ ವೈರಸ್ ತಡೆಯುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮಾಸ್ಕ್ ಧರಿಸಿರುವ ಸಾರ್ವಜನಿಕರಿಗೆ ಮಾತ್ರ ಮಾರುಕಟ್ಟೆಗೆ ಪ್ರವೇಶವೆಂದು ಪೌರ ಸಿಬ್ಬಂದಿ ಧ್ವನಿ ವರ್ಧಕ ಮೂಲಕ ಸಾರ್ವಜನಿಕರಲ್ಲಿ ಜಾಗ್ರತೆ ಮೂಡಿಸುತ್ತಿದ್ದಾರೆ. ಆದ್ದರಿಂದ ಜನರು ಸಹಕಾರವೂ ಅಗತ್ಯ ತರಕಾರಿ ಮಾರುಕಟ್ಟೆಯನ್ನು ಬಸ್ ನಿಲ್ದಾಣಕ್ಕೆ ಸ್ಥಳಾಂತರಿಸಲಾಗಿದೆ ಸಾರ್ವಜನಿಕರು ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಅಗತ್ಯ ವಸ್ತುಗಳನ್ನು ಖರೀದಿಸಬೇಕು ಎಂದರು.

ತಹಸೀಲ್ದಾರ ಯಲ್ಲಪ್ಪ ಗೋಣ್ಣೆಣನವರ, ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಮಲ್ಲೇಶ, ಸಿಪಿಆಯ್ ಆರ್.ಎಚ್.ಕಟ್ಟಿಮನಿ ಮತ್ತು ಪಿಎಸ್ಐ ಸುನೀಲಕುಮಾರ ನಾಯಕ ಇದ್ದರು.