ಹಿರೇವಂಕಲಕುಂಟಾ: ಕಂಕಣ ಸೂರ್ಯಗ್ರಹಣದ ವೀಕ್ಷಣೆ

ಕೊಪ್ಪಳ 26: ಕೊಪ್ಪಳ   ಜಿಲ್ಲೆಯ  ಹಿರೇವಂಕಲಕುಂಟಾದ ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ವತಿಯಿಂದ ಸೂರ್ಯಗ್ರಹಣ ವೀಕ್ಷಣೆಗೆ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ವಿಶೇಷವಾಗಿ ಗ್ರಹಣದ ಬಗ್ಗೆ ಜನರಲ್ಲಿ  ಇರುವ ಮೂಢನಂಬಿಕೆ ಮತ್ತು ತಪ್ಪು ಕಲ್ಪನೆಗಳ ಜಾಗೃತಿಗಾಗಿ ಗ್ರಹಣದ ಸಮಯದಲ್ಲಿ ಊರಿನ ಯುವಕರು ಮತ್ತು ಗ್ರಾಮಸ್ಥರು ಉಪಹಾರ ಸೇವಿಸಿ ಜಾಗೃತಿ ಮೂಡಿಸಿದರು. ಊರಿನ ಗ್ರಾಮಸ್ಥರು, ಮಹಿಳೆಯರು, ಮಕ್ಕಳು, ವಿದ್ಯಾರ್ಥಿಗಳು, ಸೋಲಾರ್ ಫಿಲ್ಟರ್ ಗ್ಲಾಸ್ (ಸನ್ ಗ್ಲಾಸ್)ಗಳ ಮೂಲಕ ನಿಸರ್ಗದಲ್ಲಿನ ಸೂರ್ಯ ಚಂದ್ರರ ನೆರಳು ಬೆಳಕಿನ ಆಟವನ್ನು ನೋಡಿ ಖುಷಿಪಟ್ಟರು. ಮಿರರ್ನ ಮೂಲಕ ನೆರಳು ಬೆಳಕಿನಲ್ಲಿ ಗ್ರಹಣ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಆಯೋಜಕರಾದ ಕನರ್ಾಟಕ ಜ್ಞಾನ ವಿಜ್ಞಾನ ಸಮಿತಿಯ ಕೊಪ್ಪಳ ಜಿಲ್ಲಾ ಸಂಚಾಲಕರಾದ ದೇವೇಂದ್ರಪ್ಪ ಜಿರ್ಲೆ , ಶಿಕ್ಷಕರಾದ ಆಂಜನೇಯ ಈಳಿಗೇರ್, ಸಿದ್ದಯ್ಯ ಮಠದ್, ಆನಂದಸಿಂಗ್ ರಾಠೋಡ್, ತಾಲ್ಲೂಕು ಕ.ಸಾ.ಪ ಕಾರ್ಯದರ್ಶಿ  ಮಲ್ಲಿಕಾರ್ಜುನ ಗಂಗನಾಳ, ಡಾ. ಬಸವರಾಜ ಮಡಿವಾಳ, ಯುವ ಮುಖಂಡರಾದ ಹನುಮೇಶ ಚಿಣಗಿ, ಆನಂದ ತೆಗ್ಗಿನಮನಿ, ಸುರೇಶ ಹಿರೇಗೌಡರ ರಾಘವೇಂದ್ರ ಮಡಿವಾಳರ್ ಹಾಗೂ ನಾಗರಾಜ ಶಾಸ್ತ್ರಿ ಅವರು ಉಪಸ್ಥಿತರಿದ್ದರು.