ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಯ ಏಪ್ರೀಲ್ 4 ರಂದು ರೈತರ ಬಿಲ್ಲು ಪೂರೈಸಲಾಗುವುದು: ಶಿವಾನಾಯಕ
ಸಂಕೇಶ್ವರ 27 : ಎಂ.ಬಿ. ಘಸ್ತಿ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಕರ್ನಾಟಕ ರಾಜ್ಯ ಹಸಿರು ಸೇನೆ ರೈತ ಸಂಘ ಹುಕ್ಕೇರಿ ತಾಲೂಕಾ ಘಟಕದವರು ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯವರು 2023-24 ನೇಯ ಸಾಲಿನಲ್ಲಿ ಕಾರ್ಖಾನೆದವರು ಕಬ್ಬು ಪೂರೈಸಿದ ರೈತರಿಗೆ ಕಬ್ಬಿನ ಬಿಲ್ಲ ಕೊಡಬೇಕೆಂದು ಒತ್ತಾಯಿಸಿ ಕಾರ್ಖಾನೆಯ ಕಛೇರಿ ಎದುರು ರೈತ ಸಂಘದವರು ಮುಂಜಾನೆ 11 ಗಂಟೆಗೆ ಸತ್ಯಾಗ್ರಹ ಆರಂಭಿಸಿದರು ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಎಸ್.ಆರ್. ಕರ್ಕಿನಾಯಿಕ ರೈತರು ಆರಂಭಿಸಿದ ಸತ್ಯಾಗ್ರಹ ಸ್ಥಳಕ್ಕೆ ಮೂರು ಬಾರಿ ಭೆಟ್ಟಿ ನೀಡಿ ಏಪ್ರೀಲ್ ಮೊದಲನೆಯ ವಾರದಲ್ಲಿ ರೈತರ ಬಿಲ್ಲನ್ನು ಪಾವತಿಸಲಾಗುವುದೆಂದು ಹೇಳಿದರು ಇದಕ್ಕೆ ರೈತ ಸಂಘದವರು ಮನಿಯದೇ ಸತ್ಯಾಗ್ರಹ ಮುಂದುವರೆಸಿದರು ಬೇಕೆ ಬೇಕೂ ನ್ಯಾಯ ಬೇಕು ಎಂದು ರೈತರ ಘೋಷಣೆಗಳು ಮುಗಿಲು ಮುಟ್ಟಿದವು ಸ್ಥಳಕ್ಕೆ ಕಾರ್ಖಾನೆಯ ಅಧ್ಯಕ್ಷ ಬಸವರಾಜ ಕಲ್ಲಟ್ಟಿ ಮಹಾಲಿಂಗ ಹಂಜಿ ಪ್ರಭುಗೌಡಾ ಪಾಟೀಲ ಮಲ್ಲಿಕಾರ್ಜುನ ಪಾಟೀಲ ಪವನ ಪಾಟೀಲ ಇವರೆಲ್ಲರೂ ಸ್ಥಳಕ್ಕೆ ಭೆಟ್ಟಿ ನೀಡಿ ಹಿರಿಯ ನಿರ್ದೇಶಕರಾದ ಶಿವನಾಯಿಕ ರೈತರಿಗೆ ಬರುವ ಏಪ್ರೀಲ್ ದಿ 4 ರಂದು ರೈತರ ಬಿಲ್ಲವನ್ನು ಪಾವತಿಸಲಾಗುವುದು ಮತ್ತು ಕಬ್ಬು ಪೂರೈಸಿದ ರೈತರಿಗೆ ಯಾವುದೇ ತರಹದ ತೂಕದಲ್ಲಿ ವ್ಯತ್ಯಾಸ ಮಾಡಲಾಗುವುದಿಲ್ಲಾ ಮತ್ತು ಪ್ರತಿ ಸೋಮವಾರ ಸಂಚಾಲಕ ಮಂಡಳಿ ಸಭೆ ನಡೆಯುತ್ತದೆ ಕಾರ್ಖಾನೆಯಲ್ಲಿ ಯಾವುದಾದರೂ ಲೋಪದೋಶಗಳು ಮತ್ತು ತಮ್ಮ ಸೂಕ್ತವಾದ ಸಲಹೆಗಳನ್ನು ತಾವು ಸಹಕಾರಿ ಧುರೀಣ ಅಣ್ಣಾಸಾಹೇಬ ಜೊಲ್ಲೆ ಇವರ ಸಮ್ಮುಖದಲ್ಲಿಯೇ ತಮಗೆ ಪರಿಹಾರ ನೀಡುತ್ತೇವೆಂದು ರೈತರಿಗೆ ಆಶ್ವಾಸನೆ ನೀಡಿದ ಹಿನ್ನಲೆಯಲ್ಲಿ ರೈತರು ಸತ್ಯಾಗ್ರಹ ಹಿಂದು ತೆಗೆದುಕೊಂಡರು ಹುಕ್ಕೇರಿ ತಾಲೂಕಾ ರೈತ ಸಂಘದ ಅಧ್ಯಕ್ಷರಾದ ಸಂಜಯ ಹಾವನ್ನವರ ತಾಲೂಕಾ ಉಪಾಧ್ಯಕ್ಷರಾದ ಶಿವಲಿಂಗ ತಾಲೂಕಾ ಪ್ರಧಾನ ಕಾರ್ಯದರ್ಶಿ ನಾಗರಾಜ ಹಾದಿಮನಿ ತಾಲೂಕಾ ಕಾರ್ಯಾಧ್ಯಕ್ಷರಾದ ಮಲ್ಲಪ್ಪಾ ಬಯಲನ್ನವರ ಬ್ಲಾಕ ಅಧ್ಯಕ್ಷರಾದ ರವಿ ಚಿಕ್ಕೋಡಿ ಸುರೇಶ ಘಸ್ತಿ ಆನಂದ ಮಗದುಮ್ಮ ಸುಧೀರಗೌಡಾ ಪಾಟೀಲ ಸಿದ್ದು ನಾಯಿಕ ಸದಾಶಿವ ಮುಂಡೇಶಿ ರಾಮಗೌಡಾ ಪಾಟೀಲ ಪ್ರಶಾಂತ ಪಾಟೀಲ ಹಾಗೂ ಇನ್ನುಳಿದ ಪದಾಧಿಕಾರಿಗಳು ಹಾಜರರಿದ್ದರು. ಕಾರ್ಖಾನೆಯ ಆಡಳಿತಾತ್ಮಕ ಅಧಿಕಾರಿ ರವೀಂದ್ರ ಚೌಗಲಾ ಹಾಗೂ ಇನ್ನುಳಿದ ಅಧಿಕಾರಿಗಳು ಹಾಜರರಿದ್ದರು ಸಹಕಾರಿ ತತ್ವದ ಮೇಲೆ ಈ ಸಕ್ಕರೆ ಕಾರ್ಖಾನೆಯ ರೂವಾರಿಯನ್ನು ಜೊಲ್ಲೆಯವರು ವಹಿಸಿಕೊಂಡಿದ್ದು ಈಗ 40 ದಿವಸಗಳು ಆಗಿವೆ. ಸಹಕಾರಿ ಶಿಲ್ಪಿ ಮಹರ್ಷಿ ದಿ ಅಪ್ಪಣಗೌಡಾ ಪಾಟೀಲ ಹಾಗೂ ಬಸಗೌಡಾ ಪಾಟೀಲ ಈ ಮಹಾನುಭಾವರ ರೈತರ ಏಳಿಗೆ ಸಲುವಾಗಿ ಕಾರ್ಖಾನನೆಯನ್ನು ದೊಡ್ಡ ಹೆಮ್ಮರವಾಗಿ ಬೆಳೆಸಿದ ಹಾಗೆ ಕೀರ್ತಿಯನ್ನು ಏಷಿಯಾ ಖಂಡದಲ್ಲಿ ಹಬ್ಬಿಸಿದ್ದಾರೆ ಇದರ ದ್ಯೋತಕವಾಗಿ ತಾವು ಸಹ ಏಷಿಯಾ ಖಂಡದಲ್ಲಿ ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆಯ ಗತವೈಭವವನ್ನು ಮರಳಿಸಲಾಗುವುದೆಂದು ಜೊಲ್ಲೆಯವರು ಈ ಸಂದರ್ಭದಲ್ಲಿ ಲೋಕದರ್ಶನ ಪ್ರತಿನಿಧಿಗೆ ತಿಳಿಸಿದ್ದಾರೆ. ಸಂಕೇಶ್ವರದ ಪೋಲಿಸ್ ಠಾಣೆಯ ಅಧಿಕಾರಿ ಆರ್.ಎಸ್. ಖೋತ ಇವರು ಬಿಗಿ ಬಂದೋಬಸ್ತವನ್ನು ಏರಿ್ಡಸಿದ್ದರು.