ಲೋಕದರ್ಶನವರದಿ
ಶಿಗ್ಗಾವಿ02: ಹಿಂದಿ ಮನಸ್ಸು ಕಟ್ಟುವ ಭಾಷೆ, ದೈನಂದಿನ ಭಾಷೆ ಬದುಕಿಗೆ ಬೆಳಕು ನೀಡಿ ಜಾತಿ ಜಾತಿಗಳನ್ನು ಒಂದೇ ಸೂತ್ರದಲ್ಲಿ ಪೋಣಿಸಿ ಹೃದಯ ವೈಶಾಲ್ಯತೆಯನ್ನು ತೋರುವ ಭಾಷೆಯಾಗಿದೆ ಎಂದು ಧಾರವಾಡ ಕನರ್ಾಟಕ ವಿಶ್ವವಿದ್ಯಾಲಯದ ಹಿಂದಿ ವಿಭಾಗದ ಅಧ್ಯಕ್ಷೆ ಡಾ. ಪ್ರಭಾ ಭಟ್ ಹೇಳಿದರು.
ಪಟ್ಟಣದ ರಂಭಾಪುರಿ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಹಿಂದಿ ದಿವಸ್ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು ಪ್ರಧಾನಿ ನರೇಂದ್ರ ಮೋದಿ ವಿಶ್ವದ ದೊಡ್ಡಣ್ಣ ಅಮೇರಿಕಾದಲ್ಲಿ ಟೈಕ್ಸಾಸ್ ರಾಜ್ಯದ ಹ್ಯೂಷ್ಟನ್ ನಲ್ಲಿ ಮಾತನಾಡಿದ ಹಿಂದಿ ಶೈಲಿಯನ್ನು ಉದಾಹರಿಸಿ ವಿಶ್ವದ ನಕ್ಷೆಯಲ್ಲಿ ಭಾರತ ಕಂಡುಬರಲು ಇಂದು ಹಿಂದಿ ಭಾಷೆ ಸಶಕ್ತವಾಗಿದೆ, ಜನಸಾಮಾನ್ಯರಿಗೂ ವ್ಯಾವಹಾರಿಕ ಭಾಷೆಯಾದ ಹಿಂದಿಯು ಸಶಕ್ತ ಸಂಪರ್ಕ ಭಾಷೆಯಾಗಿದೆ, ಕಾಶ್ಮೀರದಿಂದ ಹಿಡಿದು ಕನ್ಯಾಕುಮಾರಿ ವರೆಗೂ ಹಿಂದಿ ಬಲ್ಲ ಮನುಷ್ಯ ಬದುಕಬಲ್ಲ, ಉದ್ಯೋಗದ ಕ್ಷೇತ್ರದಲ್ಲಿ ಯುವಕ-ಯುವತಿಯರಿಗೆ ಹಿಂದಿ ಭಾಷೆ ಕಲ್ಪವೃಕ್ಷ ಕಾಮದೇನುವಾಗಿದೆ ಎಂದರು.
ರಂಭಾಪುರಿ ಕಾಲೇಜಿನ ಹಿಂದಿ ವಿಭಾಗದ ಪ್ರಾದ್ಯಾಪಕ ಡಾ. ಬಿ ವಾಯ್ ತೊಂಡಿಹಾಳ ಪ್ರಸ್ತಾವಿಕವಾಗಿ ಮಾತನಾಡಿ, ಮಹಾತ್ಮಾ ಗಾಂಧಿ ದೂರಸಂಪರ್ಕ ಸ್ನಾತಕ ಹಿಂದಿ ವಿಭಾಗ ರಂಭಾಪುರಿ ಕಾಲೇಜಿನಲ್ಲಿ ಪ್ರಸ್ತುತ ವರ್ಷ ಪ್ರಾರಂಭಿಸಿದರ ಕುರಿತು ಮಾತನಾಡಿ ಅಥಿತಿಗಳನ್ನು ಪರಿಚಯಿಸಿದರು.
ಅಧ್ಯಕ್ಷತೆ ವಹಿಸಿದ್ದ ಪದವಿ ಪ್ರಾಚಾರ್ಯ ಪ್ರೋ ಪಿ ಸಿ ಹಿರೇಮಠ ರಾನು ಮಂಡಲ್ ಹಿಂದಿಯಲ್ಲಿ ಹಾಡನ್ನು ಹೇಳದಿದ್ದರೇ ಭಾರತದಾದ್ಯಂತ ಪ್ರಚಲಿತವಾಗುತ್ತಿರಲಿಲ್ಲ ಎಂದರಲ್ಲದೇ ಹಿಂದಿಯ ವಿಶೇಷತೆ ಬಗ್ಗೆ ಮಾತನಾಡಿದರು.
ಇದೇ ಸಂದರ್ಭದಲ್ಲಿ ಹಿಂದಿ ಭಾಷಣ ಪ್ರಭಂದ ಸ್ಪಧರ್ೆಯಲ್ಲಿ ಭಾಗವಹಿಸಿದ ವಿದ್ಯಾಥರ್ಿಗಳಿಗೆ ಬಹುಮಾನ ವಿತರಿಸಿಲಾಯಿತು.
ಕಾರ್ಯಕ್ರಮದಲ್ಲಿ ಡಾ. ಡಿ ಎ ಗೊಬ್ಬರಗುಂಪಿ, ಪದವಿಪೂರ್ವ ಪ್ರಾಚಾರ್ಯ ಎಸ್ ವಿ ಕುಲಕಣರ್ಿ, ಡಾ. ವಿ ಸಿ ಕಟ್ಟೆಪ್ಪನವರ, ಪ್ರೋ ಹೋಗಾತರ್ಿ, ಶ್ರೀಮತಿ ಎನ್ ಸಿ ನಾಯಕ್, ಡಾ. ಸುಮಂಗಲಾ ಅತ್ತೀಗೇರಿ, ಪ್ರೋ. ಮಾನಂದಿ ಶಿಂದೆ ಸೇರಿದಂತೆ ವಿದ್ಯಾಥರ್ಿಗಳು ಇದ್ದರು.
ಪಿಯುಸಿ ವಿಭಾಗದ ಹಿಂದಿ ಉಪನ್ಯಾಸಕ ಪ್ರೋ ಶಿವಪ್ರಕಾಶ ಬಳಿಗಾರ ನಿರೂಪಿಸಿದರು, ಕು. ಜ್ಯೋತಿ ಜವಳಗಿ ಸ್ವಾಗತಿಸಿದರು,