ಚಂಡೀಗಢ, ಆ 7 ಭಾರತದ ಸ್ಟಾರ್ ಓಟಗಾರ್ತಿ ಹಿಮಾದಾಸ್ ಅವರು ಆ.27 ರಿಂದ 30ರವರೆಗೆ ಲಖ್ನೋದಲ್ಲಿ ನಡೆಯುವ ಅಂತಾರಾಜ್ಯ ಅಥ್ಲೆಟಿಕ್ಸ್ ಮೀಟ್ಗೆ ಅಲಭ್ಯರಾಗಿದ್ದಾರೆ.
400ಮೀ ರಿಲೆ ತಂಡ ಸೇರಿದಂತೆ ಶಾಟ್ ಪುಟ್ ಎಸೆತಗಾರ ತೇಜೆಂದರ್ ಪಾಲ್ ಅವರಿಗೆ ತರಬೇತಿ ವೀಸಾ ಝೆಕ್ ಗಣರಾಜ್ಯದಲ್ಲಿ ವಿಸ್ತಾರವಾಗಿರುವ ಹಿನ್ನಲೆಯಲ್ಲಿ ಅವರು ರಾಜ್ಯ ಅಥ್ಲೆಟಿಕ್ಸ್ ಮೀಟ್ನಿಂದ ಹೊರಗುಳಿಯುತ್ತಿದ್ದಾರೆ ಎಂದು ಅಖಿಲ ಭಾರತ ಅಥ್ಲೆಟಿಕ್ಸ್ ಒಕ್ಕೂಟ ತಿಳಿಸಿದೆ ಎಂದು ಮೂಲಗಳು ತಿಳಿಸಿವೆ.
ಹಿಮಾದಾಸ್ ಸೇರಿದಂತೆ 400ಮೀ ರಿಲೆ ತಂಡದ ವೀಸಾ ಮಂಗಳವಾರವೇ ಮುಗಿಯಬೇಕಿತ್ತು. ಆದರೆ, ಅವರ ವೀಸಾ ಅವಧಿಯನ್ನು ಭಾರತೀಯ ವಿದೇಶಾಂಗ ರಾಯಭಾರಿ ಇನ್ನಷ್ಟು ದಿನಗಳ ಕಾಲ ವಿಸ್ತರಿಸಿದೆ. ವೀಸಾ ಅವಧಿ ವಿಸ್ತರಿಸಿದ ಕಾರಣಕ್ಕೆ ಭಾರತೀಯ ವಿದೇಶಾಂಗ ರಾಯಭಾರಿಯನ್ನು ಭಾರತ ಅಥ್ಲೆಟಿಕ್ಸ್ ಒಕ್ಕೂಟ ಧನ್ಯವಾದಗಳನ್ನು ಅರ್ಪಿಸಿದೆ.
ಹಿಮಾ ದಾಸ್ ಜತೆ ವಿಸ್ಮಯಾ ವೆಲ್ಲುವಾ ಕೊರೊತ್, ಪೂವಮ್ಮ, ಸರಿತಾಬೆನ್ ಗಾಯಕ್ವಾಡ್, ಸಲಿನಿ ವಲುಪಾಂಬಿಲ್ ಕೃಷ್ಣನ್, ವಿಥ್ಯ ರಾಮ್ರಾಜ್ ಹಾಗೂ ಸುಭ ಅವರಿಗೂ ಝೆಕ್ ಗಣರಾಜ್ಯದಲ್ಲಿ ತರಬೇತಿ ವೀಸಾ ಅವಧಿ ವಿಸ್ತರಿಸಲಾಗಿದೆ.
ಪುರುಷರ ಶಾಟ್ ಪುಟ್ ಪಟು ತೋರ್, ರನ್ನರ್ ಮೊಹಮ್ಮದ್ ಅನಾಸ್, ನೋಹ್ ನಿರ್ಮಲ್ ಟಾಮ್, ಅಮೋಜ್ ಜಾಕೋಬ್, ಮೋಹನ್ ಕುಮಾರ್ ರಾಜ, ಧರುಣ್ ಅಯ್ಯಸಾಮಿ, ಜೀವನ್ ಕರೆಕೊಪ್ಪ, ಸುರೇಶ್ ಹಾಗೂ ಜಬೀರ್ ಮದಾರಿ ಅವರೂ ಕೂಡ ಅಂತಾರಾಜ್ಯ ಕ್ರೀಡಾಕೂಟದಿಂದ ಹೊರಗುಳಿಯಲಿದ್ದಾರೆ.