ಹುಕ್ಕೇರಿ : ಸ್ಥಳೀಯ ಸುಕ್ಷೇತ್ರ ಗುಡ್ಡಾಪೂರ ದಾನಮ್ಮಾದೇವಿ ಪಾದಯಾತ್ರೆ ಕಮೀಟಿ ಚಾವಡಿ ಹಳ್ಳದಕೇರಿ ಇವರಿಂದ ಶವಯ್ಯ ಶಿವಮೊಗ್ಗಿಮಠ ಇವರ ನೇತೃತ್ವದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಗುರುವಾರದಂದು 60 ಕ್ಕೂ ಮಿಕ್ಕಿ ಯುವಕರು ಬೆಳಗಿನ ಜಾವ ಹುಕ್ಕೇರಿಯಿಂದ ಪಾದಯಾತ್ರೆ ಮುಖಾಂತರ ಗುಡ್ಡಾಪೂರದ ದಾನಮ್ಮಾ ದೇವಸ್ಥಾನಕ್ಕೆ ತೆರಳಿದರು ಪ್ರಥಮದಲ್ಲಿ ದಾನಮ್ಮಾ ದೇವಿಯ ಭಾವ ಚಿತ್ರಕ್ಕೆ ಪೂಜೆ ಸಲ್ಲಸಿ ನಾಗರಿಕರು ಪಾದಯಾತ್ರಿಗಳನ್ನು ಬೀಳ್ಕೊಡಲಾಯಿತು.
ಗುರುವಾರ ದಿನಾಂಕ 5 ರಂದು ಸಂಸುದ್ದಿ ಶುಕ್ರವಾರ ದಿನಾಂಕ 6 ರಂದು ಹಲ್ಯಾಳ ಶನಿವಾರ ದಿನಾಂಕ 7 ರಂದು ಕೊಹಳ್ಳಿ ರವಿವಾರ ದಿನಾಂಕ 8 ರಂದು ಮುಚ್ಚಂಡಿ (ಧರೆಖಾನ ದೇವಸ್ಥಾನ) ಯಲ್ಲಿ ಭೋಜನ ಹಾಗೂ ರಾತ್ರಿ ವಾಸ್ತವ್ಯ ಮಾಡಿ ಸೋಮವಾರ ದಿನಾಂಕ 9 ರಂದು ಗುಡ್ಡಾಪೂರ ದಾನಮ್ಮಾ ದೇವಸ್ಥಾನ ತಲುಪಲಿದ್ದಾರೆ. ಅದೇ ದಿನ ಸಂಜೆ 7 ಘಂಟೆಗೆ ಕಾತರ್ಿಕೋತ್ಸವ
ಪಾದಯಾತ್ರೆಯ ಸಂಯೋಜಕರಾದ ಶಿವಯ್ಯ ಶಿವಮೊಗ್ಗಿಮಠ, ರಾಜು ಮುಚ್ಚಂಡಿ, ರಾಜು ಕುಪಾಟಿ, ಸಚೀನ ಕುಂಬಾರ, ಶಶಿಕಾಂತ ಮದಕನ್ನವರ, ಮಂಜು ಮುಚ್ಚಂಡಿ, ಶಂಕರ ಮುದನ್ನವರ, ಕಿರಣ ಶಿವಮೊಗ್ಗಿಮಠ, ಸಂದೀಪ ಕುಮಾರ, ಇನ್ನಿತರರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.