ಬಾಗಲಕೋಟೆ25: ಮುಧೋಳ ನಗರದಲ್ಲಿ ಒಟ್ಟು 5 ಕೋಟಿ ರೂ.ಗಳ ವೆಚ್ಚದಲ್ಲಿ ಹೈಟೆಕ್ ಬಸ್ ನಿಲ್ದಾಣ ನಿಮರ್ಿಸಲಾಗುತ್ತಿದೆ ಎಂದು ಉಪ ಮುಖ್ಯಂತ್ರಿ ಗೋವಿಂದ ಕಾರಜೋಳ ತಿಳಿಸಿದರು.
ಮುಧೋಳನ ರನ್ನ ಕ್ರೀಡಾಂಗಣದಲ್ಲಿ ಶನಿವಾರ ಅಭಿಮಾನಿಗಳು ಹಮ್ಮಿಕೊಂಡ ಹುಟ್ಟು ಹಬ್ಬದ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು ಮುಧೋಳ ನಗರ ಮಧ್ಯದಲ್ಲಿ ಬಸ್ ನಿಲ್ದಾಣ ಇರುವದರಿಂದ ಹೈಟೆಕ್ ಬಸ್ ನಿಲ್ದಾಣವನ್ನು ನಿಮರ್ಿಸಲಾಗುತ್ತಿದೆ. ಅಲ್ಲದೇ ಮುಧೋಳದಲ್ಲಿ 2 ಎಕರೆ ಜಮೀನಿನಲ್ಲಿ 5 ಕೋಟಿ ರೂ.ಗಳ ವೆಚ್ಚದಲ್ಲಿ ಸಿಬ್ಬಂದಿಗಳ ನಿಲಯ, ವಾಹನಗಳ ಗ್ಯಾರೇಜ ಸೇರಿದಂತೆ ಅಗ್ನಿಶಾಮಕ ಠಾಣೆಯನ್ನು ನಿಮರ್ಿಸಲಾಗುತ್ತಿದೆ. ಲೋಕಾಪೂರ ಗ್ರಾಮ ಪಂಚಾಯತಿಯನ್ನು ಮೇಲ್ದಜರ್ೆಗೇರಿಸಿ ಪಟ್ಟಣ ಪಂಚಾಯತಿ ಮಾಡಲಾಗುತ್ತಿದೆ ಎಂದು ಕಾರಜೋಳ ತಿಳಿಸಿದರು.
ಮುಧೋಳ ನಗರಕ್ಕೆ ವರ್ಷದ 12 ತಿಂಗಳು ನೀರು ಪೂರೈಸುವ ನಿಟ್ಟಿನಲ್ಲಿ ಕೃಷ್ಣಾ ನದಿಯಿಂದ ಮುಧೋಳಕ್ಕೆ ನೀರು ತರುವ ಸಲುವಾಗಿ 40 ಕೋಟಿ ರೂ.ಗಳ ಖಚರ್ು ಮಾಡಲಾಗುತ್ತಿದೆ. ನಗರದಲ್ಲಿ ಇದ್ದ ಕರೆಗೆ ನೀರು ತುಂಬಿಸುವ ಕೆಲಸ ಮಾಡಲಾಗುತ್ತಿದೆ ಎಂದರು. ಮುಧೋಳದಿಂದ ಮಲ್ಲಾಪೂರ ಕ್ರಾಸ್ ವರೆಗೆ 4.81 ಕ.ಮೀ ರಸ್ತೆ ನಿಮರ್ಾಣಕ್ಕೆ 21 ಕೋಟಿ, ಮುಧೋಳದಿಂದ ಅನಗವಾಡಿ ಕ್ರಾಸ್ವರೆಗೆ 20 ಕಿ.ಮೀ ರಸ್ತೆ ನಿಮರ್ಾಣಕ್ಕೆ 9 ಕೋಟಿ ರೂ. ಅದೇ ರಸ್ತೆಯಿಂದ ರಾಜ್ಯ ಹೆದ್ದಾರಿ ಹಾಗೂ ಮುಖ್ಯ ರಸ್ತೆವರೆಗೆ 11.87 ಕಿ.ಮೀ ರಸ್ತೆ ಸೇರಿ ಒಟ್ಟು 79 ಕಿ.ಮೀ ರಸ್ತೆ ನಿಮರ್ಾಣಕ್ಕೆ ಒಟ್ಟು 155 ಕೋಟಿ ರೂ. ಖಚರ್ು ಮಾಡಲಾಗುತ್ತಿದೆ ಎಂದರು.
ಕೇಂದ್ರ ಸರಕಾರದ ಯೋಜನೆಯಿಂದ ಲೋಕಾಪೂರದ ಹತ್ತಿರ 100 ಎಕರೆ ಜಮೀನಿನಲ್ಲಿ 800 ಕೋಟಿ ರೂ.ಗಳ ವೆಚ್ಚದಲ್ಲಿ 400 ಕೆವಿ ವಿದ್ಯುತ್ ಕೇಂದ್ರವನ್ನು ನಿಮರ್ಿಸಲಾಗುತ್ತಿದೆ. ರಾಜ್ಯದಲ್ಲಿ ಬೆಂಗಳೂರು ಮತ್ತು ಧಾರವಾಡ ಹೊರತುಪಡಿಸಿ ಎಲ್ಲಿ ಇಂತಹ ವಿದ್ಯುತ್ ಕೇಂದ್ರ ಇರುವದಿಲ್ಲ. 400 ಕೆವಿ ವಿದ್ಯುತ್ ಕೇಂದ್ರವನ್ನು ಬಾಗಲಕೋಟೆ ಜಿಲ್ಲೆಯಲ್ಲಿ ನಿಮರ್ಿಸಲಾಗುತ್ತಿದೆ ಎಂದರು. ಅಲ್ಲದೇ ಜಿಲ್ಲೆಗೆ 8 ಹೊಸ ವಸತಿ ನಿಲಯಗಳಿಗೆ ಮಂಜೂರಾತಿ ನೀಡಲಾಗಿದೆ. ಲೋಕಾಪೂರದಲ್ಲಿ ಪದವಿ ವಿದ್ಯಾಥರ್ಿನಿಯರಿಗೆ, ಮುಧೋಳದಲ್ಲಿ ಪದವಿ ಮಹಿಳಾ ಹಾಗೂ ಪುರುಷರಿಗೆ ಪ್ರತ್ಯೇಕ ನಿಲಯ, ಯಡಹಳ್ಳಿ, ಮಹಾಲಿಂಗಪೂರ, ತೇರದಾಳ, ಬಾಗಲಕೋಟೆ ಹಾಗೂ ಬೀಳಗಿಯಲ್ಲಿ ತಲಾ ಒಂದರಂತೆ ನೀಡಲಾಗಿದೆ ಎಂದರು.